ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವೀರಪ್ಪನ್‌ ಶಿಕಾರಿಗೆ ಸರಕಾರಗಳು ಇನ್ನೂ ಇಸ್ರೋ ನೆರವು ಕೇಳಿಲ್ಲ’

By Super
|
Google Oneindia Kannada News

ಬೆಂಗಳೂರು : ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕರ್ನಾಟಕ ಅಥವಾ ತಮಿಳುನಾಡು ಸರಕಾರ ಈವರೆಗೆ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಅಧ್ಯಕ್ಷ ಕಸ್ತೂರಿ ರಂಗನ್‌ ಗುರುವಾರ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ನಾವು ಈ ಬಗ್ಗೆ ಇನ್ನೂ ಚಿಂತಿಸಬೇಕು. ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಇಸ್ರೋ (ಐಎಸ್‌ಆರ್‌ಓ) ಯಾವ ಪಾತ್ರ ವಹಿಸಬೇಕೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದರು. ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಸಮಸ್ಯೆಯ ಬಗ್ಗೆ ವಿಶೇಷ ಚಿಂತನೆ ನಡೆಸಿಲ್ಲ. ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಇಸ್ರೋ ಗಮನ ಹರಿಸುತ್ತದೆ ಎಂದರು.

ಇಸ್ರೋ ಸಕಲ ಸಮಸ್ಯೆಗಳಿಗೂ ಪರಿಹಾರೋಪಾರಿಯೇನಲ್ಲ ಎಂದು ಹೇಳಿದ ಅವರು, ಈ ಸಮಸ್ಯೆಯ ಪರಿಹಾರಕ್ಕೆ ನೆರವಾಗುವಂತೆ ಇಸ್ರೋಗೆ ಕೇಳಿದರೆ, ಅದಕ್ಕೆ ಹೆಚ್ಚುವರಿ ಸೌಕರ್ಯ ಹಾಗೂ ಸಹಕಾರ ನೀಡಬೇಕಾಗುತ್ತದೆ ಎಂದರು. ಜೊತೆಗೆ ಕಾನನದಲ್ಲಿ ರಾತ್ರಿಯ ವೇಳೆ ವೀರಪ್ಪನ್‌ ಚಲನವಲನಗಳನ್ನು ಸ್ಯಾಟಲೈಟ್‌ ಮೂಲಕ ಪತ್ತೆ ಹಚ್ಚುವುದು ಸ್ಪಲ್ಪ ಕಷ್ಟಕರ ಕೆಲಸ ಎಂದೂ ಅವರು ಹೇಳಿದರು. (ಯು.ಎನ್‌.ಐ)

English summary
ISRO is not panacea for all problems - Kasturirangan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X