Get Updates
Get notified of breaking news, exclusive insights, and must-see stories!

ವಾಟಾಳ್‌ ನಾಗರಾಜರೂ... ಕತ್ತೆ, ಕುರಿ, ಎಮ್ಮೆಗಳ ಮೆರವಣಿಗೆಯೂ...

ಬೆಂಗಳೂರು : ಕತ್ತೆಗಳ ಮೆರವಣಿಗೆ ಎಂದೊಡನೆ ಮೊದಲು ನೆನಪಿಗೆ ಬರುವುದು ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌. ಸರಕಾರದ ನ್ಯೂನತೆಗಳನ್ನು ಜಗಜ್ಜಾಹೀರು ಮಾಡಲು, ಆಡಳಿತದ ಲೋಪವನ್ನು ಎತ್ತಿ ತೋರಿಸಲು ಇಲ್ಲವೆ ಬೇಡಿಕೆಗಳ ಈಡೇರಿಕೆಯ ಹೋರಾಟಕ್ಕೆ ವಾಟಾಳ್‌ ಕತ್ತೆಗಳ ಮೆರವಣಿಗೆ ಮಾಡುತ್ತಲೇ ಬಂದಿದ್ದಾರೆ.

ಮಂಗಳವಾರ ಮತ್ತೆ ಕತ್ತೆಗಳ ಮೆರವಣಿಗೆ ಬೆಂಗಳೂರಲ್ಲಿ ನಡೆಯಿತು. ಎಂದಿನಂತೆ ಕತ್ತೆಗಳ ಮೆರವಣಿಗೆ ಏರ್ಪಡಿಸಿದ್ದವರು ವಾಟಾಳ್‌ ನಾಗರಾಜರೇ. ಕಾಲಿಗೆ ಹಗ್ಗ ಕಟ್ಟಿದ ಕತ್ತೆಗಳು ಶಾಸಕರ ಭವನದೆದುರು ಜಮಾಯಿಸಿದವು. ಈ ಬಾರಿ ಕತ್ತೆಗಳಿಗೆ ಕುರಿಗಳು, ಎಮ್ಮೆಗಳೂ ಸಹಕಾರ ನೀಡಿದವು.

ವಿಡಂಬನೆ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಸಭೆ, ವಿರೋಧಪಕ್ಷ ಹಾಗೂ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಿರುವುದರ ವಿಡಂಬನೆ ಇದಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್‌ ಅವರು ರಾಜ್‌ಕುಮಾರ್‌ ಅಪಹರಣ ಪ್ರಕರಣದ ಸತ್ಯಶೋಧನೆ ಆಗಿಲ್ಲ. ಆಡಳಿತ ಪಕ್ಷವಾಗಲೀ, ಪ್ರತಿಪಕ್ಷವಾಗಲೀ ಪ್ರಾಮಾಣಿಕವಾಗಿ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.

ತಾವು, ಯಡಿಯೂರಪ್ಪ, ಎಂ.ಪಿ. ಪ್ರಕಾಶ್‌, ರಮೇಶ್‌ಕುಮಾರ್‌, ಸಿದ್ದರಾಮಯ್ಯ ಮುಂತಾದವರು ಸೋಲುಂಡು ವಿಧಾನಸಭೆ ಪ್ರವೇಶಿಸುವ ಅವಕಾಶ ಕಳೆದುಕೊಂಡಿರುವುದರಿಂದ ಆಡಳಿತ ಸರ್ಕಾರವನ್ನು ಪ್ರಶ್ನಿಸುವವರೆ ಇಲ್ಲದಂತಾಗಿದೆ. ನಾವು ಅಲ್ಲಿದ್ದಿದ್ದರೆ ರಾಜ್‌ ಅಪಹರಣದ ಹಿಂದಿನ ರಹಸ್ಯ ಹಾಗೂ ಸತ್ಯ ಇಷ್ಟು ಹೊತ್ತಿಗೆ ಹೊರಬೀಳುತ್ತಿತ್ತು ಎಂದರು. ಈ ಪ್ರಕರಣದ ಬಗ್ಗೆ ಸಿ.ಬಿ.ಐ. ತನಿಖೆ ಆಗಬೇಕೆಂದು ಅವರು ಆಗ್ರಹಿಸಿದರು.

ತಿರುವಳ್ಳವರ್‌ ಪ್ರತಿಮೆ ಸ್ಥಾಪಿಸಲು ಖಂಡಿತಾ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಳವಳಿ ನಾಯಕ ಪ್ರಭಾಕರ ರೆಡ್ಡಿ, ಪ್ರಸನ್ನ ಕುಮಾರ್‌, ಉದಯಗೌಡ ಉಪಸ್ಥಿತರಿದ್ದರು.

ಬರಲಿದೆ ಕತ್ತೆಗೆ ಮತ್ತೆ ಬೇಡಿಕೆ : ಕತ್ತೆಗಳನ್ನೇ ಬಹುತೇಕ ಒಂದು ವರ್ಷದಿಂದ ಮರೆತಿದ್ದ ವಾಟಾಳ್‌ ಮತ್ತೆ ಅವುಗಳನ್ನು ನೆನಪಿಸಿಕೊಂಡಿದ್ದಾರೆ. ವಾಟಾಳ್‌ ಕತ್ತೆಗಳನ್ನು ಮರೆತಿದ್ದರೂ, ಕೂಡ್ಲಿಗಿ ಜನತೆ ಮಳೆಗಾಗಿ, ಹುಬ್ಬಳ್ಳಿಯ ಜನತೆ ಹೈಕೋರ್ಟ್‌ ಪೀಠಕ್ಕಾಗಿ ನಡೆಸಿದ ಚಳವಳಿಯಲ್ಲಿ ಕತ್ತೆಗಳ ಮೆರವಣಿಗೆ ನಡೆಸಿದ್ದರು.

ವಾಟಾಳ್‌ ಪದೇಪದೇ ಕತ್ತೆಗಳ ಮೆರವಣಿಗೆ ನಡೆಸಿ ಸುದ್ದಿ ಮಾಡುತ್ತಾರೆಂದೇ ಇರಬೇಕು ಕೃಷ್ಣ ಅವರು ವಾಟಾಳರನ್ನು ಗಡಿನಾಡು ಅಧ್ಯಯನ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಗಡಿನಾಡ ಅಧ್ಯಯನಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದರಲ್ಲಿ ಸಮಯ ದೊರಕದೆ ವಾಟಾಳ್‌ ಕತ್ತೆಗಳನ್ನು ಮರತೇ ಬಿಟ್ಟಿದ್ದರು. ಈ ಮಧ್ಯೆಯೂ ವಾಟಾಳ್‌ ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೃಷ್ಣರಿಗೆ ಇರುಸುಮುರುಸು ಉಂಟು ಮಾಡಿದ್ದರು.

ಕಾರ್ಯಕರ್ತರಿಂದ ವಾಟಾಳ್‌ ಅವರ ವಜಾಕ್ಕೆ ಒತ್ತಡ ಇದ್ದರೂ ಸಂಯಮದಿಂದ ವರ್ತಿಸಿದ ಕೃಷ್ಣ , ವಾಟಾಳ್‌ ಮಧ್ಯಂತರ ವರದಿ ಕೊಟ್ಟ ನಂತರ, ಈಗ ಆಯೋಗವನ್ನೇ ವಿಸರ್ಜಿಸಿ, ವಾಟಾಳ್‌ರಿಗೆ ಕೆಲಸ ಇಲ್ಲದಂತೆ ಮಾಡಿದರು. ಬಿಡುವು ದೊರೆತೊಡನೆಯೇ ವಾಟಾಳ್‌ ಮತ್ತೆ ಚಳವಳಿಯ ಮಾರ್ಗ ಹಿಡಿದಿದ್ದಾರೆ. ಇನ್ನು ಮುಂದೆ ಕತ್ತೆಗಳಿಗೆ ಬೇಡಿಕೆ ಬರುವುದರಲ್ಲಿ ಸಂಶಯವೇ ಇಲ್ಲ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+