Get Updates
Get notified of breaking news, exclusive insights, and must-see stories!

ಗೋರ್‌ಗೆ ಒಂದಿಷ್ಟು ಭರವಸೆ, ವಿವಾದಾತ್ಮಕ ಮತಪತ್ರಗಳು ಕೋರ್ಟಿಗೆ

ವಾಷಿಂಗ್ಟನ್‌ : ಕೊನೆಗೂ ಡೆಮಾಕ್ರಟಿಕ್‌ ಪಕ್ಷದ ಆಲ್‌ ಗೋರ್‌ಗೆ ಕೊಂಚ ಖುಷಿ ಕೊಡುವ ಸುದ್ದಿ ಬಂದಿದೆ. ಲಿಯಾನ್‌ ಪ್ರಾಂತ್ಯದ ಸರ್ಕಿಟ್‌ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಯಾಂಡರ್ಸ್‌ ಸಾಲ್ಸ್‌, ವಿವಾದಾತ್ಮಕ ಮತಪತ್ರಗಳನ್ನು ಹಾಗೂ ಮತಯಂತ್ರಗಳನ್ನು ಕೋರ್ಟಿಗೇ ತರುವಂತೆ ಆದೇಶ ಹೊರಡಿಸಿದ್ದಾರೆ.

ಸ್ಥಳೀಯ ಕಾಲಮಾನ ಶುಕ್ರವಾರ ಸಂಜೆ 5 ಗಂಟೆ (ಭಾರತೀಯ ಕಾಲಮಾನ : ಶನಿವಾರ ಬೆಳಗಿನ ಜಾವ 3.30 ಗಂ.) ಗೆ ಮಿಯಾಮಿ ಡೇಡ್‌ ಹಾಗೂ ಪಾಲ್ಮ್‌ ಬೀಚ್‌ ಪ್ರಾಂತ್ಯಗಳ ಮತಪತ್ರಗಳು ಹಾಗೂ ಮತಯಂತ್ರಗಳನ್ನು ಕೋರ್ಟಿಗೆ ತರುವಂತೆ ಆದೇಶಿಸಿರುವ ಮುಖ್ಯ ನ್ಯಾಯಮೂರ್ತಿ ಸಾಲ್ಸ್‌, ಮತಪತ್ರಗಳನ್ನು ಮರು ಎಣಿಕೆ ಮಾಡುವ ಕುರಿತು ಏನೂ ಹೇಳಿಲ್ಲ.

ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ಡಿಸೆಂಬರ್‌ 6 ಅಥವಾ 7ರೊಳಗೆ ವಿಚಾರಣೆ ಪೂರ್ಣ ಮುಗಿಯುವ ನಿರೀಕ್ಷೆಯಿದೆ.

ಒಂದು ವೇಳೆ ಮತಗಳ ಮರು ಎಣಿಕೆ ಮಾಡಬೇಕೆಂದಾದರೆ ಎಲ್ಲಿ, ಯಾವ ರೀತಿಯಲ್ಲಿ ಮಾಡಬೇಕು, ಚುನಾವಣೆಯ ಗೆಲುವನ್ನು ಪ್ರಾಂತ್ಯವಾರು ಅಥವಾ ರಾಜ್ಯವಾರು ಜಯದಿಂದ ನಿರ್ಧರಿಸಬೇಕೆ ಎಂಬಿತ್ಯಾದಿ ಗೊಂದಲಗಳ ಬಗೆಗೆ ಕೋರ್ಟ್‌ ಗುರುವಾರ ವಿಚಾರಣೆ ನಡೆಸಲಿದೆ. ಎಲ್ಲಾ ವಿವಾದಿತ ಮತಪತ್ರಗಳ ಮರು ಎಣಿಕೆಯನ್ನೇ ನಾವು ನಿರೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ಗೋರ್‌ ಅವರ ವಕೀಲ ಡೇವಿಸ್‌ ಬೋಯಿಸ್‌.

ಮಿಯಾಮಿ ಡೇಡ್‌ ಪ್ರಾಂತ್ಯದ 10 ಸಾವಿರ ಹಾಗೂ ಪಾಲ್ಮ್‌ ಬೀಚ್‌ ಪ್ರಾಂತ್ಯದ 3,300 ಮತಗಳನ್ನು ತಕ್ಷಣವೇ ಮರು ಎಣಿಕೆ ಮಾಡಬೇಕೆಂಬ ಗೋರ್‌ ಅವರ ಅರ್ಜಿಯನ್ನು ರಾಜ್ಯದ ಮುಖ್ಯ ನ್ಯಾಯಮೂರ್ತಿ ಮಂಗಳವಾರ ತಳ್ಳಿ ಹಾಕಿದ್ದರು. ಫ್ಲೋರಿಡಾ ರಾಜ್ಯದಲ್ಲಿ ಜಾರ್ಜ್‌ ಡಬ್ಲ್ಯು ಬುಷ್‌ ಅವರು ಗೋರ್‌ ಅವರಿಗಿಂತ 537 ಹೆಚ್ಚು ಮತ ಗಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+