ಬೆಂಗಳೂರಿನ ಹೊಸ ಮೇಯರ್ರಾಗಿ ಕಾಂಗ್ರೆಸ್ಸಿನ ಪ್ರೇಮಾ ಕಾರ್ಯಪ್ಪ
ಬೆಂಗಳೂರು : ಕಾಂಗ್ರೆಸ್ಸಿನ ಪ್ರೇಮಾ ಕಾರ್ಯಪ್ಪ ಅವರು ಮಹಾನಗರ ಪಾಲಿಕೆಯ ಮೇಯರ್ ಆಗಿ ಬುಧವಾರ ಚುನಾಯಿತರಾಗಿದ್ದಾರೆ.
ಬಿಜೆಪಿಯ ಅಭ್ಯರ್ಥಿ ಕವಿತಾ ಜೈನ್ ಅವರ ವಿರುದ್ಧ ಪ್ರೇಮಾ ಕಾರ್ಯಪ್ಪ ಅವರು 21 ಮತಗಳ ಅಂತರದಿಂದ ಜಯಗಳಿಸಿದರು. ಪ್ರೇಮಾ ಅವರು 53 ಮತ ಪಡೆದರೆ, ಕವಿತಾ ಅವರು ಪಡೆದಿದ್ದು 32 ಓಟು ಮಾತ್ರ. ಮತ್ತೊಬ್ಬ ಅಭ್ಯರ್ಥಿ ಸಂಯುಕ್ತ ಜನತಾದಳದ ಪದ್ಮಾವತಿ ಅವರು 11 ಓಟು ಪಡೆದರು.
ಕಾಂಗ್ರೆಸ್ಸಿನವರೆ ಆದ ಬಿ.ಎಸ್. ಪುಟ್ಟರಾಜು ಅವರು ಉಪ ಮೇಯರ್ ಆಗಿ ಆಯ್ಕೆಯಾದರು. ಅವರು 55 ಓಟುಗಳನ್ನು ಪಡೆದರೆ, ಎದುರಾಳಿಗಳಾದ ಬಿಜೆಪಿಯ ಎಸ್.ಕೆ. ನಟರಾಜ್ 32 ಮತ್ತು ಸಂಯುಕ್ತ ಜನತಾದಳದ ಎಸ್.ಡಿ. ಸೋಮಶೇಖರ್ 11 ಮತಗಳನ್ನು ಪಡೆದರು.(ಯುಎನ್ಐ)
3ನೇ ಮಹಿಳಾ ಮೇಯರ್: ಬೆಂಗಳೂರು ಮಹಾನಗರದ ಮೇಯರ್ ಆಗಿ ಆಯ್ಕೆಯಾದ 47 ವರ್ಷದ ಪ್ರೇಮಾ ಕಾರ್ಯಪ್ಪ ಅವರು ನಗರದ 3ನೇ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1961ರಲ್ಲಿ ಇಂದ್ರಮ್ಮ ಅವರೂ 1997ರಲ್ಲಿ ಪದ್ಮಾವತಿ ಗಂಗಾಧರ ಗೌಡ ಅವರೂ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಚುನಾವಣಾ-ಕಾರಿಗಳು ಪ್ರೇಮಾ ಅವರ ಆಯ್ಕೆಯನ್ನು ಪ್ರಕಟಿಸುತ್ತಿದ್ದಂತೆ ಮಹಿಳಾ ಸದಸ್ಯರು ಪುಷ್ಪಗುಚ್ಛ ನೀಡಿ, ಹೂವಿನ ಹಾರ ಹಾಕಿ ನೂತನ ಮಹಿಳಾ ಮೇಯರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಮೇಯರ್ ಗೌನ್ ಧರಿಸಿದ ಪ್ರೇಮಾ ಕಾರ್ಯಪ್ಪ ಅವರು, ತಮ್ಮ ಗೆಲುವಿಗೆ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications