Get Updates
Get notified of breaking news, exclusive insights, and must-see stories!

ಅದಕ್ಷ ಸಚಿವರಿಗೆ ಗೇಟ್‌ಪಾಸ್‌-ನಬಿ,ಸಂಪುಟ ಪುನಾರಚನೆ ಇಲ್ಲ : ಕೃಷ್ಣ

ಬೆಂಗಳೂರು : ಕಾಂಗ್ರೆಸ್‌ ಪಕ್ಷ ಜನತೆಗೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎಂದು ಪರಾಮರ್ಶಿಸಲು ಕಾಂಗ್ರೆಸ್‌ ಹೈಕಮಾಂಡ್‌ನ ತಂಡ ಬೆಂಗಳೂರಿಗೆ ಆಗಮಿಸಿದೆ.

ಚುನಾವಣೆ ಪ್ರಣಾಳಿಕಾ ಭರವಸೆ ಅನುಷ್ಠಾನ ಸಮಿತಿ ಸದಸ್ಯರಾದ ಗುಲಾಂನಬಿ ಆಜಾದ್‌, ಎ.ಕೆ. ಆಂತೋನಿ, ಅನಿಲ್‌ ಶಾಸ್ತ್ರಿ, ಜನಾರ್ದನ ರೆಡ್ಡಿ ಅವರು ರಾಜ್ಯಕ್ಕೆ ಆಗಮಿಸಿದ್ದು, ಕೃಷ್ಣ ನೇತೃತ್ವದ ಸರಕಾರದ ಸಾಧನೆಗಳ ಪರಿಶೀಲನೆ ನಡೆಸಲಿದ್ದಾರೆ. ರಾಜ್ಯ ಸಚಿವ ಸಂಪುಟ ಪುನಾರಚನೆಯ ಗುಸುಗುಸು ಸುದ್ದಿಗಳ ಹಿನ್ನೆಲೆಯಲ್ಲಿ ಈ ಭೇಟಿಗೆ ಅತ್ಯಂತ ಮಹತ್ವ ಬಂದಿದೆ.

ಈ ಮಧ್ಯೆ ಮುಖ್ಯಮಂತ್ರಿ ಕೃಷ್ಣ ಅವರು, ಪ್ರಣಾಳಿಕಾ ಭರವಸೆ ಅನುಷ್ಠಾನ ಸಮಿತಿಯ ಸಭೆಗೂ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಈಗ ಸಂಪುಟ ಪುನಾರಚನೆ ಏಕೆ? ಇದೇನು ತಮಾಷೆಯೇ ಎಂದು ಸಿಡುಕಿದರು.

ಆದರೆ, ಕುಮಾರಕೃಪಾ ವಿಶ್ರಾಂತಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಗುಲಾಂ ನಬಿ ಆಜಾದ್‌ ಅವರು, ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ನಾವು ಐದು ವರ್ಷಗಳ ಕಾಲ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದೇವೆಯೇ ವಿನಾ ಇಡೀ ಸಚಿವ ಸಂಪುಟವನ್ನು ಪುನಾರಚಿಸುವುದಿಲ್ಲ ಎಂದು ತಿಳಿಸಿಲ್ಲ ಎಂದು ಹೇಳವ ಮೂಲಕ ಕೆಲಸ ಮಾಡದ ಸಚಿವರನ್ನು ಕೈಬಿಡುವ ಸುಳಿವು ನೀಡಿದ್ದಾರೆ. ಜೊತೆಗೆ ಕೃಷ್ಣ ನೇತೃತ್ವದ ಸಚಿವ ಸಂಪುಟ ಪುನಾರಚನೆಗೆ ತಾವು ಸಲಹೆ ನೀಡುವುದಿಲ್ಲ ಎಂದೂ ಹೇಳಿದ್ದಾರೆ.

ಪ್ರತಿವರ್ಷವೂ ನಾವು ಸಚಿವರುಗಳ ಕಾರ್ಯವೈಖರಿಯನ್ನು ಪರಾಮರ್ಶಿಸುತ್ತೇವೆ, ಈಗಾಗಲೇ ಸಚಿವರ ಸಾಧನೆಯ ಅಳತೆ ಆರಂಭವಾಗಿದ್ದು, ಪ್ರತಿಯಾಬ್ಬ ಸಚಿವರನ್ನೂ ಖುದ್ದಾಗಿ ಭೇಟಿ ಮಾಡಿ ಅವರವರ ಖಾತೆಯ ಸಾಧನೆಗಳ ಬಗ್ಗೆ ಅರಿಯಲಾಗುವುದು ಆನಂತರ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ವರದಿ ಸಲ್ಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಈ ಮಧ್ಯೆ ರಾಜ್ಯದ ಸಚಿವರುಗಳು ಸಮಿತಿಯ ಮುಂದೆ ಹಾಜರಾಗಲು ಹೆದರುತ್ತಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ,

ಈ ವಿಧ್ಯಮಾನಗಳಿಂದಾಗಿ ಅತಿ ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದಿಂದ ಹಲವರಿಗೆ ಗೇಟ್‌ಪಾಸ್‌ ಹಾಗೂ ಹೊಸ ಮುಖಗಳಿಗೆ ಸ್ಥಾನ ದೊರಕುವ ಲಕ್ಷಣಗಳು ಸ್ಪಷ್ಟವಾಗಿವೆ. ಆದರೆ, ಕಳೆದ ವಾರವಷ್ಟೇ ಕೃಷ್ಣ ಅವರು, ತಮ್ಮ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+