ರಾಜ್ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ.... (ಭಾಗ 2)

ಸೇಲಂ ಹತ್ರ - ಆದ್ಯಾವ್ದೋ ರೋಡು. ಏನದು? (ಪಕ್ಕದಲ್ಲಿದವರು ಹೇಳಿದರು ಈರೋಡ್) ಈರೋಡ್ ಕಾಡಿನಿಂದ ಬಂದು ಸಾಯಂಕಾಲ ಆರೋಡ್‌ಗೆ ಬಂದು ಸೇರಿದ್ವಿ. ಬಸ್ ಕಾರುಗಳ ಶಬ್ಧ ಕೇಳಿ ಇದೇನಪ್ಪಾ... ಕನಸೋ ನೆನಸೋ ಅನ್ನೋ ಸನ್ನಿವೇಶ. 9 ಗಂಟೆಗೆ ಕಾರು ಬಂತು ಒಬ್ಬೊಬ್ರೆ ಹತ್ತಿದಾಗ, ಸೀಟಲ್ಲಿ ಕೂತಾಗ ಆಯ್ಯೋ ಹೊಸದಾಗಿ ಕಾರಲ್ಲಿ ಕೂತಿದೀನಾ ಅನ್ನಿಸ್ತು. ಹೊಸ ಪ್ರಪಂಚಕ್ಕೆ ಬಂದಾಗೆ ಆಯ್ತು. ಕಾರಲ್ಲಿ 2 ಗಂಟೆ ಪ್ರಯಾಣ.
ಆ ಮನುಷ್ಯ (ವೀರಪ್ಪನ್) ಜಾಗ ಖಾಲಿ ಮಾಡಿ ಬೇರೆ ಕಡೇಗೆ ಹೋಗ ತನಕ ನಾವು ಬಿಡುಗಡೆ ಆಗಿದ್ದನ್ನು ಹೇಳಬಾರದು ಅಂದಿದ್ದು. ಅದ್ಯಾವುದೋ ಸುರಕ್ಷಿತ ಜಾಗಕ್ಕೆ ಕರಕೊಂಡು ಹೋದ್ರು. ಜನರಿಗೆ ನಾನು ಬಿಡುಗಡೆ ಆಗಿದ್ದು ಗೊತ್ತಾಗ ಬಾರ್ದು ಅನ್ನೊದು ಅವರ ಉದ್ದೇಶ. ಜನರಿಗಿಂತ ಪೊಲೀಸ್‌ಗೆ ತಿಳಿಬಾರ್ದು ಏಕಂದ್ರೆ, ನಾವು ಬಿಡುಗಡೆ ಆಗಿರೋದು ತಿಳಿಯಕ್ಕೆ ಮುಂಚೆ ಆತ ಜಾಗನ ಬೇರೆ ಕಡೆಗೆ ಷಿಫ್ಟ್ ಮಾಡಬೇಕಿತ್ತು. ಪೊಲೀಸರು ಬಂದಾರು ಅನ್ನೋ ಭಯ. ಆಗ ಆತ ಜಾಗ ಖಾಲಿ ಮಾಡಿದಾನೋ ಇಲ್ವೋ ನನಗೆ ಗೊತ್ತಿಲ್ಲ.
ಇದ್ದೋರು ಮೂರು ಕದ್ದೋರು ಯಾರು? ಈ ಪ್ರಯಾಸ - ಪ್ರಯಾಣದಲ್ಲಿ ತಮಿಳುನಾಡು ಸರಕಾರ, ಮಾನ್ಯ ಕಲಂಗೈ ಕರುಣಾನಿಧಿ, ಹಾಗಂತಾರೆ ಅವರನ್ನ. ನಮ್ಮ ಸರಕಾರ ನಮ್ಮ ಮುಖ್ಯಮಂತ್ರಿಗಳು ಪ್ರಯಾಸ ಪಟ್ಟು ಪ್ರಯತ್ನ ಮಾಡಿ ನನ್ನ ಬಿಡಿಸಿದ್ರು. ಹೀಗೆ ಬಿಡುಗಡೆ ಆಗಿ ಕಾರಲ್ಲಿ ಬಂದಾಗ ಜನ ನೋಡಿದಾಗ ನನಗೆ ಉದ್ವೇಗ ಆಯ್ತು. ಕಣ್ಣೀರು ಬರ್ತಿತ್ತು. ಆ ನಕ್ಕೀರನ್ ಗೋಪಾಲ್ 4-5 ಬಾರಿ ಬಂದ್ರು ಆದ್ರೆ ಸಾಧನೆ ಮಾಡಕ್ಕೆ ಆಗಲಿಲ್ಲ. ನಾಗಪ್ಪ ಬೇರೆ ಓಡಿ ಹೋದ. ಆವನೇನೋ ಓಡಿ ಹೋದ ನಾವು ತಗಲ್ಕೊಂಡ್ವಿ. ಅದೇನೋ ಹೇಳ್ತಾರಲ್ಲ ಇದ್ದೋರು ಮೂರು ಜನ ಕದ್ದೋರು ಯಾರು ಅಂತ ಹಾಗೆ. ಮೊದಲೇ ಒಂದು ಗ್ರೂಪ್ ಅವರದ್ದು. ಶೂಟ್ ಮಾಡಿದ್ರೆ ಏನು ಮಾಡಬೇಕಿತ್ತು. (ನಕ್ಕರು) ಮಾಡೋದೇನಿದೆ. ಏನೂ ಮಾಡೋ ಹಾಗಿರಲಿಲ್ಲ.
ನಾಗಪ್ಪ ಓಡಿ ಹೋದಮೇಲೆ ನಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿದ್ರು. - ಗನ್ ಹಿಡಿದು ನಿಂತಿರ್ತಿದ್ರು. ಆತಂಕ ಪಡೋ ವಿಷಯ ಅದು. ಕಡೇಗೆ ನಾನು ಹೇಳ್ದೆ. ನಮ್ಮ ಹುಡುಗ್ರುನ್ನ ಬಿಟ್ಟು ಬಿಡು. ನನ್ನ ಸುಟ್ಟು ಬಿಡು. ಹೇಗೂ ನನಗೆ ವಯಸ್ಸಾಗಿದೆ. ಇಷ್ಟು ವರ್ಷದಲ್ಲಿ ಕೀರ್ತಿ ಪ್ರತಿಷ್ಠೆ ಸಾಧು ಸಂತರ ಸಹವಾಸ ಅನುಗ್ರಹ ಎಲ್ಲ ನನ್ನ ತಲೇಮೇಲಿದೆ. ಹೊಡೆದು ಹಾಕಿ ಅಂದೆ.
ವೀರಪ್ಪ ಕೈ ಕಟ್ಟು ಬಿಚ್ಚಿದ, ನಮಗೆ ಭರವಸೆ ಕೊಟ್ಟ. ಹಾಗೂ ಹೀಗೂ ಜೀವನ ತಳ್ಳಿದ್ವಿ. ಬಿಡುಗಡೆ ಪ್ರಶ್ನೆ ಬಂದಾಗ ಪಳ ನೆಡುಮಾರನ್ ಕರೆಸುವ ಸಲಹೆ - ಸಹಾಯ ಸಹಕಾರ ಕೊಟ್ಟದ್ದು ಆತನೇ. ನಮ್ಮನ್ನು ಹಿಡಿದುಕೊಂಡು ಹೋದವನೇ ನಮ್ಮ ಬಿಡುಗಡೆಗೂ ಸಹಾಯ ಮಾಡ್ದ. ಅಷ್ಟು ಹೊತ್ತಿಗೆ ಸುಪ್ರೀಂ ಕೋರ್ಟ್ ಆರ್ಡರ್ ಬಂತು. ಎಲ್ಲರ ಪ್ರಯತ್ನಕ್ಕೆ ಅನುಕೂಲಕ್ಕೆ ಅನಾನುಕೂಲ ಆಗೋ ಹಾಗೆ ಕೋರ್ಟ್ ಆರ್ಡರ್ ಇತ್ತು.
ಇನ್ನು ಯಾವ ಕಾಲಕ್ಕಪ್ಪ ನಮ್ಮ ಬಿಡುಗಡೆ ಆಗೋದು ಅಂತ ಕಾಯಬೇಕಾಯ್ತು. ನೆಡುಮಾರನ್‌ಗೆ ಕ್ಯಾಸೆಟ್ ಕಳಿಸಿದ್ವಿ. ಅವರು ಬಂದ್ರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications