ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವುದೆಂದು?

By Staff
|
Google Oneindia Kannada News

ಬೆಂಗಳೂರು : ವಿಘ್ನೕಶ್ವರನ ಮದುವೆಗೇ ನೂರೆಂಟು ವಿಘ್ನ ಎಂಬ ಮಾತಿದೆ. ದೇವನ ಹಳ್ಳಿ ವಿಮಾನ ನಿಲ್ದಾಣಕ್ಕೂ ಇದು ಅನ್ವಯಿಸುತ್ತದೆ. ಹೆಸರೇ ದೇವನ ಹಳ್ಳಿ ಅಲ್ಲವೇ... ಇಲ್ಲಿ ನಿರ್ಮಾಣವಾಗಬೇಕಿರುವ ವಿಮಾನ ನಿಲ್ದಾಣಕ್ಕೆ ದೇವರೆ ದಯೆ ತೋರುಬೇಕೋ ಏನೋ...

ನವೆಂಬರ್‌ 1ರಂದು ಈ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಆಗುತ್ತದೆ, ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರೇ ಶಂಕುಸ್ಥಾಪನೆ ನೆರವೇರಿಸುತ್ತಾರೆ ಎಂಬ ಸಚಿವ ಜಾನ್‌ರ ಭರವಸೆಗಳೆಲ್ಲವೂ ಹುಸಿಯಾಗಿದೆ. ಈ ವಿಷಯ ವಿಧಾನ ಪರಿಷತ್ತಿನಲ್ಲಿ ಸೋಮವಾರ ಭಾರಿ ವಾಗ್ವಾದಕ್ಕೂ ಕಾರಣವಾಗಿತ್ತು. ಅಲ್ಲಿ ಸಚಿವರು ನೀಡಿರುವ ಮಾಹಿತಿಯಂತೆ ಮೇ ತಿಂಗಳಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ.

ಕಾಮಗಾರಿ ಆರಂಭವಾದ 36 ತಿಂಗಳಲ್ಲಿ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧವಾಗಲಿದೆ. ಇದಕ್ಕೂ ಮುನ್ನ ಮಾರ್ಚ್‌ - ಏಪ್ರಿಲ್‌ ತಿಂಗಳಿನಲ್ಲಿ ಕಂಪನಿಯಾಂದರ ಜತೆ ಒಪ್ಪಂದಕ್ಕೆ ಬರಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಭಾರಿ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ 150 ಕೋಟಿ ರುಪಾಯಿ ಹುಡ್ಕೋದಿಂದ ಸಾಲ ಪಡೆಯಲು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅನುಮತಿ ನೀಡಲಾಗಿದೆ ಎಂದೂ ಸಚಿವರು ಹೇಳಿದರು. 15 ದಿನದಲ್ಲಿ ಸಾಲ ಮಂಜೂರಾಗಲಿದ್ದು, ಇನ್ನು ಮೂರು ತಿಂಗಳಲ್ಲಿ ಭೂಸ್ವಾಧೀನ ಕಾರ್ಯ ಮುಗಿಯುತ್ತದೆ ಎಂದರು.

ವಿಮಾನ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಸುಮಾರು 18 ಅರ್ಜಿಗಳು ಬಂದಿದ್ದು, ಎಲ್‌ ಅಂಡ್‌ ಟಿ ಹಾಗೂ ಸೀಮನ್‌ಮೂಲದ ಕಂಪನಿಗಳಿಗೆ ಯೋಜನೆ ವರದಿ ನೀಡಲು ಕೇಳಲಾಗಿದೆ. ಏಪ್ರಿಲ್‌ ತಿಂಗಳೊಳಗೆ ಕಂಪನಿಯಾಂದರ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು ದೇಶಪಾಂಡೆ.

1994ರಲ್ಲೇ ಈ ಯೋಜನೆ ಆರಂಭವಾಗಬೇಕಿತ್ತು ಆದರೆ, ರಾಜಕೀಯ ಕಾರಣಗಳಿಂದ ತಡವಾಯ್ತು, ಈ ರಾಜಕೀಯ ವಿವಾದಗಳ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ ಎಂದು ಸಚಿವರು ಹೇಳಿದಾಗ ನಾಣಯ್ಯನವರಿಂದ ಪ್ರತಿರೋಧ, ಭಾರಿ ಗದ್ದಲ - ವಾಗ್ವಾದ. ಸಭಾಧ್ಯಕ್ಷರ ಮನವಿಗೂ ಮಾನ್ಯತೆ ಸಿಗದ ಸ್ಥಿತಿ. ಅಂತೂ ಗದ್ದಲದ ನಡುವೆ ಮತ್ತೆ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ದೊರಕಲಿಲ್ಲ. ಮೇ ತಿಂಗಳಿನಲ್ಲಾದರೂ ಕಾಮಗಾರಿ ಆರಂಭವಾದೀತೆ ಎಂದು ಕಾದು ನೋಡೋಣ.

ವಾರ್ತಾ ಸಂಚಯ
ಮುಖಪುಟ / ವಿಧಾನ ಮಂಡಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X