ದಲಿತರ ನಿರಂತರ ಶೋಷಣೆ ಮಧ್ಯೆ ಸಂವಿಧಾನಕ್ಕೆ 50 ವರ್ಷ
ಹೊಸದಿಲ್ಲಿ : ಭಾತರದಂತಹ ವರ್ಗೀಕೃತ ಜಾತಿವ್ಯವಸ್ಥೆಯಿರುವ ದೇಶದಲ್ಲಿ , ಸ್ವಾತಂತ್ರ ಬಂದು 50 ವರ್ಷಗಳ ನಂತರ ದಲಿತರಲ್ಲಿ ಗಮನಾರ್ಹ ಬದಲಾವಣೆ ಆಗಿದೆಯೇ? ಇಲ್ಲ ಎನ್ನುತ್ತಾರೆ ಹೆಸರಾಂತ ಪತ್ರಕರ್ತ ಪಿ. ಸಾಯಿನಾಥ್.
ಅಂತಾರಾಷ್ಟ್ರೀಯ ಕ್ಷಮಾಧಾನ ಸಂಸ್ಥೆ ನೀಡುವ ಪ್ರತಿಷ್ಟಿತ ಪ್ರಶಸ್ತಿಗೂ ಪಾತ್ರರಾಗಿರುವ ಸಾಯಿನಾಥ್, ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ದೆಹಲಿಯ ಏಷ್ಯಾ ಸೊಸೈಟಿಯ ಆಶ್ರಯದಲ್ಲಿ ನಡೆದ ‘ಭಾರತದಲ್ಲಿ ದಲಿತರು 2000’ ಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ .
ಈ ಹಿಂದೆ ಅಸ್ಪುೃಶ್ಯರು ಎಂದು ಕರೆಸಿಕೊಳ್ಳುತ್ತಿದ್ದ ದಲಿತರಿಗೆ ಸಾಮಾಜಿಕ ಜೀವನದಲ್ಲಿ ಭಾಗವಹಿಸುವ ಅವಕಾಶ ಬಿಟ್ಟರೆ ಬೇರೇನೂ ಗಮನಾರ್ಹ ಬದಲಾವಣೆ ಆಗಿಲ್ಲ. ಹಾಗಾಗಿ ಅವರು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಲೇ ಇದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ರಾಜಾಸ್ಥಾನಗಳಲ್ಲಿ ಅಸ್ಪುೃಶ್ಯತೆ ಇನ್ನೂ ಜಾರಿಯಲ್ಲಿದೆ. ಇದು ಅನೇಕ ಸರ್ವೇಕ್ಷಣೆಗಳಿಂದ ಸಾಬೀತಾಗಿದೆ.
ಅಸ್ಪುೃಶ್ಯತೆ ಸಾಮಾಜಿಕ ಪಿಡುಗಲ್ಲ ಅದೊಂದು ಆರ್ಥಿಕ ಅಸಮಾನತೆಯ ಮೇಲೆ ಮನುಷ್ಯನನ್ನು ಒಡೆದು ಶೋಷಣೆ ಮಾಡುವ ಆರ್ಥಿಕ ಕಾರ್ಯತಂತ್ರ. ನೂರು ಕೋಟಿಗೂ ಹೆಚ್ಚಾಗಿರುವ ಭಾರತೀಯರಲ್ಲಿ ದಲಿತರ ಸಂಖ್ಯೆ ಶೇಕಡಾ 16. 48ರಷ್ಟಿದೆ. ದುರಾದೃಷ್ಟವೆಂದರೆ ಇಷ್ಟೊಂದು ಬೃಹತ್ ಸಮುದಾಯದ ನೋವು-ಅಸಹಾಯಕತೆಗಳ ಬಗ್ಗೆ ಮಾಧ್ಯಮಗಳಲ್ಲಿ ಸೂಕ್ತ ಪ್ರಚಾರ ಸಿಕ್ಕುತ್ತಿಲ್ಲ. ಆದ್ದರಿಂದ ಭಾರತೀಯ ಸಮಾಜದಲ್ಲಿ ಸಾಮಾಜಿಕ ತೊಡಕುಗಳುಂಟಾಗಿವೆ.
‘ಎವ್ವೆರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಎಂಬ ತಮ್ಮ ಪುಸ್ತಕದಲ್ಲಿ ಸಂವಿಧಾನ ಜಾರಿಯಾದ 50 ವರ್ಷದದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಸಾಯಿನಾಥ್ ಅನೇಕ ಜನರ ಗಮನ ಸೆಳೆದಿದ್ದಾರೆ. ಆರು ಬಾರಿ ಮರುಮುದ್ರಣ ಕಂಡ ಈ ಪುಸ್ತಕ ಭಾರತದ ಬಡ ಜಿಲ್ಲೆಗಳ ದಲಿತರ ಚಿತ್ರಣ ನೀಡುತ್ತದೆ. ಕಾನೂನು ಮತ್ತು ಆಡಳಿತ ವ್ಯವಸ್ಥೆ ದಲಿತರ ನೆರವಿಗೆ ಬರುವಲ್ಲಿ ಹೇಗೆ ಸೋತಿದೆ ಎಂದು ಇಲ್ಲಿ ಚರ್ಚಿಸಲಾಗಿದೆ.
ತಮ್ಮ ಸಂಶೋಧನೆಗಾಗಿ ಭಾರತವನ್ನು ಅನೇಕ ಬಾರಿ ಸುತ್ತಿರುವ ಸಾಯಿನಾಥ್ ಈಗ ಅಮೆರಿಕದಲ್ಲಿದ್ದಾರೆ. ಜನರಲ್ಲಿ ಇತ್ತೀಚೆಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗೆಗೆ ಅರಿವು ಹೆಚ್ಚುತ್ತಿದ್ದು, ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುವ ಮನೋಭಾವ ಗಟ್ಟಿಯಾಗುತ್ತಿದೆ. ಭವಿಷ್ಯ ಆಶಾದಾಯಕವಾಗಿದೆ , ಇದನ್ನು ಆಳುವ ಮಂದಿ ಮನಗಾಣಬೇಕು ಎಂಬುದು ಸಾಯಿನಾಥ್ ಅಭಿಪ್ರಾಯ.
(ಐಎಎನ್‌ಎಸ್)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications