ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ನನ್ನು ವೈಭವೀಕರಿಸಲುತಮಿಳು ಮಾಧ್ಯಮಗಳ ಪೈಪೋಟಿ

By Staff
|
Google Oneindia Kannada News

ಚೆನ್ನೈ: ನಾಡಿನಲ್ಲಿರುವವರಿಗಿಂತ ಕಾಡಿನಲ್ಲಿರುವ ಪ್ರಾಣಿಗಳೇ ಮೇಲು. ಹೀಗೆಂದಾಕೆ ವೀರಪ್ಪನ್‌ ಸುಳಿದಾಡುವ ಸತ್ಯಮಂಗಲ ಕಾಡಿನ ಅಂಚಿನಲ್ಲಿರುವ ಹಳ್ಳಿಯಲ್ಲಿ ಕುರಿ ಕಾಯುವ ವಿಜಯಲಕ್ಷ್ಮಿ.

ಮಧ್ಯವಯಸ್ಸಿನ ವಿಜಯಲಕ್ಷ್ಮಿ, ಕರ್ನಾಟಕದ ಪೊಲೀಸರನ್ನು ಕುರಿತು ಈ ಮಾತು ಹೇಳುತ್ತಾಳೆ. ಕಾಡಿನ ಅಂಚಿನ ಹಳ್ಳಿಗರು ಕರ್ನಾಟಕ ಪೊಲೀಸರ ವಿರುದ್ಧದ ಮಾತುಗಳನ್ನು ತಮಿಳು ಪತ್ರಿಕೆಗಳು ಅತಿರಂಜಿತವಾಗಿ ಬರೆಯುತ್ತಿವೆ. ವೀರಪ್ಪನ್‌ ಹೆಸರಿನಲ್ಲಿ ತಮಿಳು ಜನರನ್ನು ಕರ್ನಾಟಕ ಪೊಲೀಸರು ಹಿಂಸಿಸುತ್ತಿದ್ದಾರೆ ಎಂದು ಜನರ ಹೇಳಿಕೆ ಉದ್ದರಿಸಿ ಪ್ರಕಟಿಸುವ ಮೂಲಕ ವೀರಪ್ಪನ್‌ ಗುಣಗಾನ ಮಾಡುತ್ತಿವೆ.

ವೀರಪ್ಪನ್‌ನಿಂದ ನಾವು ಏನನ್ನೂ ಪಡೆದಿಲ್ಲ ಎಂದವರು ಪುನರುಚ್ಚರಿಸುತ್ತಿದ್ದಾರೆ. ಇಂಥ ಸುದ್ದಿಗಳನ್ನು ನಿತ್ಯ ಪ್ರಕಟಿಸುತ್ತಿರುವ ತಮಿಳು ಮಾಧ್ಯಮಗಳು, ಕರ್ನಾಟಕ ಪೊಲೀಸರ ವಿರುದ್ಧ ಪರೋಕ್ಷ ಸಮರ ಸಾರಿವೆ. ವೀರಪ್ಪನ್‌ ಗುಣಗಾನ ಮಾಡುವ ಶೀರ್ಷಿಕೆ ಹಾಕುತ್ತಿವೆ.

ವೀರಪ್ಪನ್‌ ಬೇಡಿಕೆಯಲ್ಲಿ ತಪ್ಪಿಲ್ಲ : ಗುಪ್ತ ದಳದವರು ಮೊದಲೇ ಎಚ್ಚರಿಕೆ ನೀಡಿದ್ದರೂ, ರಾಜ್‌ ಏಕೆ ನಿರ್ಲಕ್ಷಿಸಿದರು ಎಂದು ಇಲ್ಲಿನ ಜನ ಪ್ರಶ್ನಿಸುತ್ತಾರೆ. ರಾಜ್‌ ಬಿಡುಗಡೆಗೆ ಉಗ್ರಗಾಮಿಗಳನ್ನು ಬದಲಾಯಿಸಿಕೊಳ್ಳಲು ವೀರಪ್ಪನ್‌ ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ.

ವೀರಪ್ಪನ್‌ನ ಈಗಿನ ಪ್ರೇಯಸಿ ಎನ್ನಲಾದ ವಿಜಯಲಕ್ಷ್ಮಿಗೆ ಸಂಬಂಧಿಸಿದ ಕತೆಗಳನ್ನೂ ‘ಜೂನಿಯರ್‌ ವಿಗಡನ್‌’ ಈಕೆಳಗಿನಂತೆ ಪ್ರಕಟಿಸಿದೆ: ತಾಳಮಲೈ ಅರಣ್ಯ ಪ್ರದೇಶದಲ್ಲಿ ತನ್ನ ಗಂಡ ಚೆಟ್ಟಿಯಾನ್‌ ಜೊತೆ ದನಗಳನ್ನು ಮೇಯಿಸುತ್ತಿದ್ದಾಗ ವೀರಪ್ಪನ್‌ ಅನ್ನು ತಾವು ಭೇಟಿಯಾಗಿದ್ದಾಗಿ ಆಕೆ ಹೇಳಿದ್ದಾಳೆ. 10 ವರ್ಷಗಳ ಹಿಂದೆ ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಕಾರ್ಯಾಚರಣೆ ಸಮಯದಲ್ಲಿ ಎಸ್‌ಟಿಎಫ್‌ ಅಧಿಕಾರಿಗಳು ವೀರಪ್ಪನ್‌ಗೆ ಅಕ್ಕಿ-ಬೇಳೆ ಸರಬರಾಜು ಮಾಡಿ ಹಣ ಪಡೆದಿದ್ದಾನೆ ಎಂದು ಆಕೆಯ ಗಂಡನನ್ನು ಬಂಧಿಸಿದರು. ಹಣವನ್ನೂ ವಶಪಡಿಸಿಕೊಂಡರು. ಆ ಹಣ ಬ್ಯಾಂಕ್‌ನಿಂದ ತಂದಿದ್ದ ಸಾಲಕ್ಕೆ ಪ್ರತಿಯಾಗಿ ಕಟ್ಟಲು ಇಟ್ಟುಕೊಂಡಿದ್ದ ಹಣವಾಗಿತ್ತು. ಈ ಸಂದರ್ಭದಲ್ಲಿ ಎಸ್‌ಟಿಎಫ್‌ ಅಧಿಕಾರಿಗಳು ತನ್ನನ್ನೂ ಪ್ರಶ್ನಿಸಿದ್ದಲ್ಲದೆ ತನ್ನ ಮೇಲೆ ಅತ್ಯಾಚಾರ ನಡೆಸಿದರೆಂದು ಆಕೆ ಹೇಳಿದ್ದಾಳೆ.

ಹಣ ಸಹಾಯ : ಆಗ ಕಾಡಿನ ಹತ್ತಿರದ ಇನ್ನೊಂದು ಹಳ್ಳಿಗೆ ವಲಸೆ ಹೋದದ್ದಾಗಿ ತಿಳಿಸಿರುವ ವಿಜಯಲಕ್ಷ್ಮಿ, ಆಗ ತನ್ನ ಸ್ವಾಮಿ (ವೀರಪ್ಪನ್‌) ತನಗೆ ಕರೆಕಳುಹಿಸಿ ವಿಷಯ ತಿಳಿದು ಹಣ ಸಹಾಯ ಮಾಡಿದ. ನಂತರ ಎರಡು ವರ್ಷಗಳ ಕಾಲ ಗಂಡನ ಸುಳಿವೇ ಇರಲಿಲ್ಲ. ಆಗ ವೀರಪ್ಪನ್‌ ತನಗೆ ಸರ್ವಸ್ವವೂ ಆಗಿದ್ದ, ಆ ದಿನಗಳಲ್ಲಿ ಕಾಡಿನಲ್ಲಿ ವೀರಪ್ಪನ್‌ ಜೊತೆಗೆ ತಾನು ದಿನಗಟ್ಟಲೆ ಇದ್ದದ್ದೂ ಉಂಟು ಎಂದು ತಿಳಿಸಿದ್ದಾಳೆ.

ನಂತರ ಗರ್ಭಿಣಿಯಾದ ಆಕೆ ಕಾಡನ್ನು ಬಿಟ್ಟು ಹಳ್ಳಿಗೆ ಬಂದಳು. ಆಗ ಇದರ ವಾಸನೆ ಹಿಡಿದ ಎಸ್‌ಟಿಎಫ್‌ ಮಂದಿ ವೀರಪ್ಪನ್‌ನಿಂದ ಗರ್ಭಿಣಿಯಾಗಿ ಆತನ ಮಗುವನ್ನು ಹೊತ್ತಿರುವೆ ಎಂಬ ಕಾರಣಕ್ಕೆ ಚಿತ್ರಹಿಂಸೆ ನೀಡಿದ್ದಲ್ಲದೆ ಮತ್ತೆ ಅತ್ಯಾಚಾರ ನಡೆಸಿದರು. ಇದರಿಂದ ಗರ್ಭಪಾತವಾಯ್ತು ಎಂದು ಹೇಳಿದ್ದಾಳೆ.

ಈ ಸಂದರ್ಭದಲ್ಲಿ ಆಕೆಯ ಅನೇಕ ಫೊಟೋಗಳನ್ನು ತೆಗೆಯಲಾಯಿತು. ತನ್ನ ಮಕ್ಕಳಿಗಾಗಿ ವೀರಪ್ಪನ್‌ ಜೊತೆಗೆ ಇರುತ್ತಿದ್ದೆ, ಈಗಲೂ ಆಗಾಗ ತಾನು ವೀರಪ್ಪನ್‌ನನ್ನು ನೋಡಲು ಕಾಡಿಗೆ ಹೋಗುತ್ತಿದ್ದೇನೆ. ಬಂದೂಕು ಉಪಯೋಗಿಸುವುದನ್ನು ಆತ ಕಲಿತುಕೊಳ್ಳುವಂತೆ ಒತ್ತಾಯಿಸುತ್ತಾನೆ ಆದರೆ ತಾನು ಈವರೆಗೆ ಪ್ರಯತ್ನಿಸಿಲ್ಲ ಎಂದು ತಿಳಿಸಿದ್ದಾಳೆ.

ಹೆಂಡತಿ ಭೇಟಿಯಿಲ್ಲ : ತಾನು ಈವರೆಗೆ ಈರೋಡ್‌ನಲ್ಲಿ ವಾಸಿಸುತ್ತಿರುವ ವೀರಪ್ಪನ್‌ ಹೆಂಡತಿಯನ್ನು ಭೇಟಿ ಮಾಡಿಲ್ಲ. ವೀರಪ್ಪನ್‌ಗೆ ಹಳ್ಳಿಗಳಲ್ಲಿ ಅನೇಕ ಹೆಂಗಸರು ಗೊತ್ತು . ಅವರೆಲ್ಲರೂ ವೀರಪ್ಪನ್‌ನನ್ನು ಆರಾಧಿಸುತ್ತಾರೆ. ಮುತ್ತುಲಕ್ಷ್ಮಿ 14 ಹರೆಯದಲ್ಲಿದ್ದಾಗ ಆಕೆಯ ಮನೆಗೆ ಆಗಾಗ ಬರುತ್ತಿದ್ದ ವೀರಪ್ಪನ್‌ ನಂತರ ಆಕೆಯನ್ನೇ ವರಿಸಿದ್ದು ಈಗ ಇತಿಹಾಸ. ತಮಿಳು ಮಾಧ್ಯಮಗಳಲ್ಲಿ ವೀರಪ್ಪನ್‌ನನ್ನು ವೈಭವೀಕರಿಸುವ ಇಂಥ ಅನೇಕ ಕಥೆಗಳು ಬರುತ್ತಲೇ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X