--ನ-ಮ್ಮ ಪಾ-ಡಿ-ಗೆ ನಮ್ಮ ಬಿಡಿ : ಅ-ಜಲು ಪದ್ಧ-ತಿ ನಿಷೇ-ಧ-ಕ್ಕೆ ಕೊರ-ಗ-ರ ಕ್ರೋ-ಧ
ಕಿನ್ನಿಗೋಳಿ : ತಲೆ ಮೇಲೆ ಮಲ ಹೊರುವ ಪದ್ಧತಿಗಿಂತಲೂ ಹೀನವಾದ ಅಜಲು ಪದ್ಧತಿಯ-ನ್ನು ನಿಷೇಧಿ-ಸಿ-ರು-ವ ಸರ್ಕಾ-ರ-ದ ಕ್ರಮ-ವನ್ನು ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಒಕ್ಕೂಟ ವಿರೋಧಿಸಿದೆ.
ಕೇವಲ ಕೊರಗ ಜಾತಿಯವರಿಗಷ್ಟೇ ಮೀಸಲಾಗಿರುವ ಅಜಲು ಪದ್ಧತಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾರವಾರಗ ಜಿಲ್ಲೆ-ಗಳಲ್ಲಿ ಆಚರಣೆಯಲ್ಲಿದೆ. ಅಜಲು ಪದ್ಧತಿಯ ಪ್ರಕಾರ ರೋಗಿಯಾಬ್ಬನ ಕೂದಲು ಮತ್ತು ಉಗುರುಗಳನ್ನು ಅನ್ನದಲ್ಲಿ ಬೆರೆಸಿ, ಕೊರಗ ಜನಾಂಗದವರನ್ನು ಮನೆಗೆ ಕರೆದು ತಿನ್ನಿಸಲಾಗುವುದು. ಇದರಿಂದಾಗಿ ರೋಗಿ ಗುಣಮುಖನಾಗುತ್ತಾನೆ ಎಂಬ ನಂಬಿಕೆ ಕರಾವಳಿಯ ಪ್ರದೇಶದಲ್ಲಿ ಇನ್ನೂ ಉಳಿದುಕೊಂಡು ಬಂದಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಅಜಲು ಪದ್ಧತಿಯ ನಿಷೇಧಕ್ಕೆ ಕರಾವಳಿಯ ಸಂಘ ಸಂಸ್ಥೆಗಳು ಹೋರಾಡುತ್ತಿದ್ದವು. ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕವಿ, ಜಿ.ಎಸ್. ಸಿದ್ಧಲಿಂಗಯ್ಯ ಈ ಪದ್ಧತಿಯ ನಿರ್ಮೂಲನೆಗಾಗಿ ಆಗ್ರಹಿಸಿದ್ದರು. ವಿಧಾನಸಭೆಯಲ್ಲಿಯೂ ಈ ವಿಷಯದ ಕುರಿತು ಸಾಕಷ್ಟು ಚರ್ಚೆಗಳು ನಡೆದು ಇದೀಗ ರಾಜ್ಯಪಾಲೆ ವಿ.ಎಸ್. ರಮಾದೇವಿ ಅಜಲು ಪದ್ಧತಿಯನ್ನು ನಿಷೇಧಿಸಿ ಆಜ್ಞೆ ಹೊರಡಿಸಿದ್ದಾರೆ.
ಆದರೆ ಅಜಲು ಪದ್ದತಿಗೆ ಬಲಿಯಾಗಿದ್ದ ಕೊರಗ ಸಮುದಾಯವೇ ಈ ನಿಷೇಧವನ್ನು ವಿರೋಧಿಸಿದೆ. ಕೊರಗ ಸಮುದಾಯದ ಪ್ರಮುಖರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ, ಕೊರಗರು ಹೇಗೆ ಜೀವನ ನಡೆಸುತ್ತಿದ್ದಾರೆ ಎನ್ನುವುದನ್ನು ಅಧ್ಯಯನ ನಡೆಸದೇ ಮತ್ತು ಅವರು ಹೇಗೆ ಜೀವಿಸಬೇಕು ಎಂಬ ಬಗ್ಗೆ ಯಾವುದೇ ಮಾರ್ಗದರ್ಶಿ ಸೂತ್ರ ರಚಿಸದೇ ಏಕಾಏಕಿ ಅಜಲು ಪದ್ಧತಿಯನ್ನು ನಿಷೇಧಿಸಿರುವುದು ಸರಿಯಲ್ಲ ಎಂದಿದ್ದಾರೆ. ಅನಾದಿ ಕಾಲದಿಂದಲೂ ಬಂದಿರುವ ಕುಲ ಕಸುಬಿನ ಹಕ್ಕನ್ನು ಕಿತ್ತು ಕೊಳ್ಳುವುದರಿಂದ ಬದುಕುವುದಕ್ಕೆ ತೊಂದರೆಯಾಗುತ್ತದೆ. ಕೊರಗರ ಶೋಷಣೆಯನ್ನು ಸರಕಾರ ವಿರೋಧಿಸಲಿ, ಆದರೆ ಊರಿನ ಜನಜೀವನದೊಂದಿಗೆ ಸಹಜವಾಗಿ ಬದುಕುತ್ತಿರುವ ಕೊರಗರು ಮತ್ತು ಗ್ರಾಮಸ್ಥರ ಸಂಬಂಧಕ್ಕೆ ಹುಳಿ ಹಿಂಡಿ, ಓಟ್ ಬ್ಯಾಂಕ್ ನಿರ್ಮಿಸುವ ಈ ತಂತ್ರವನ್ನು ಕೊರಗ ಸಮುದಾಯ ವಿರೋಧಿಸುತ್ತದೆ ಎಂದು ಸುದ್ದಿ ಗೋ-ಷ್ಠಿಯಲ್ಲಿ ಹಾಜರಿದ್ದ ಕೊರಗ ಸಮುದಾಯದ ಪ್ರಮುಖರು ಹೇಳಿದ್ದಾರೆ.
(ಇನ್ಫೋ- ವಾ-ರ್ತೆ)
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications