ಟಾಡಾ ಕಾಯ್ದೆ ಈಗ ಅಸ್ತಿತ್ವದಲ್ಲೇ ಇಲ್ಲ : ಮುಖ್ಯಮಂತ್ರಿ
ಬೆಂಗಳೂರು : ರಾಜ್ ಬಿಡುಗಡೆಯ ಪ್ರಕ್ರಿಯೆಯಲ್ಲಿ ಮೂರನೇ ಬಾರಿಗೆ ಕಾಡಿಗೆ ತೆರಳಿರುವ ಗೋಪಾಲ್‌ರಿಂದ ಯಾವುದೇ ಸಂದೇಶ ಈವರೆಗೆ ಬಂದಿಲ್ಲ. ಕಾಡಿನಲ್ಲಿ ಏನಾಗುತ್ತಿದೆ ಎನ್ನುವುದಕ್ಕಿಂತ ನಾಡಿನ ವಿದ್ಯಮಾನಗಳನ್ನು ಹೇಗೆ ನಿಭಾಯಿಸುವುದು ಎಂಬ ಸಂದಿಗ್ಧದಲ್ಲಿ ರಾಜ್ಯ ಸರಕಾರ ಸಿಲುಕಿದೆ.
ಸರ್ವೋಚ್ಚ ನ್ಯಾಯಾಲಯಕ್ಕೆ ರಾಜ್ಯದ ವಿವರಣೆ ಸಿದ್ಧವಾಗಿದೆ. ಎಂಟು ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿ ಸೆರೆವಾಸ ಅನುಭವಿಸಿರುವ ಆರೋಪಿಗಳ ವಿರುದ್ಧದ ಟಾಡಾ ಮೊಕದ್ದಮೆಗಳನ್ನು ಮಾನವೀಯತೆಯ ದೃಷ್ಟಿ ಹಾಗೂ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೊಕದ್ದಮೆ ಕೈಬಿಡುವ ನಿರ್ಧಾರ ಕೈಗೊಂಡಿದೆ ಎಂಬ ಅಂಶವನ್ನು ರಾಜ್ಯ ಸರಕಾರ ಸರ್ವೋನ್ನತ ನ್ಯಾಯಾಲಕ್ಕೆ ಅರಿಕೆ ಮಾಡಿಕೊಳ್ಳಲಿದೆ. ಈ ವಿಷಯವನ್ನು ಬುಧವಾರ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ರಾಜ್ಯದ ಹಿತದೃಷ್ಟಿ ಹಾಗೂ ಕನ್ನಡಿಗರ ಕಣ್ಮಣಿಯನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ರಾಜ್ಯ ಸರಕಾರ ವಿವೇಚನಾಯುಕ್ತವಾಗಿ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಆಯಿತು ಎಂಬುದನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವಿವರಿಸಲಾಗುವುದು ಎಂದು ಕೃಷ್ಣ ಹೇಳಿದರು. ಟಾಡಾ ಕಾಯಿದೆಯು ಈಗ ಅಸ್ತಿತ್ವದಲ್ಲೇ ಇಲ್ಲ ಎಂದೂ ಅವರು ಹೇಳಿದರು.
ಗೋಪಾಲ್ ಮೂಲತಃ ಪತ್ರಕರ್ತರಾಗಿದ್ದು, ಅವರಿಗೆ ಸಂವಿಧಾನ ಹಾಗೂ ನ್ಯಾಯಾಂಗದ ಬಗ್ಗೆ ತಿಳಿದಿದೆ. ಅವರು ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಯ ಬಗ್ಗೆ ಹಾಗೂ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವೀರಪ್ಪನ್‌ಗೆ ತಿಳಿಸಿ ರಾಜ್‌ಕುಮಾರ್ ಹಾಗೂ ಮತ್ತಿತರರನ್ನು ಈಬಾರಿ ಕರೆದುಕೊಂಡೇ ಬರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಖರ್ಗೆ ಹೇಳಿಕೆ: ಬಹುತೇಕ ಕೃಷ್ಣ ಅವರಂತೆಯೇ ರಾಜ್ ಬಿಡುಗಡೆಯ ವಿಶ್ವಾಸ ವ್ಯಕ್ತಪಡಿಸಿರುವ ರಾಜ್ಯ ಗೃಹ ಸಚಿವ ಖರ್ಗೆ ಅವರು ಗೋಪಾಲ್ ಅವರು ಕಾಡಿಗೆ ತೆರಳಿದ ನಂತರದ ವಿದ್ಯಮಾನಗಳೇನು ಎಂಬುದನ್ನು ರಾಜ್ಯ ಸರಕಾರವೂ ನಿರೀಕ್ಷಿಸುತ್ತಿದೆ ಎಂದಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications