Get Updates
Get notified of breaking news, exclusive insights, and must-see stories!

ಶಾಂತಿ ಕಾಪಾಡಲು ‘ರಜನಿ ರಸಿಗರ್‌ ಮಂದ್ರ’ ಗಸ್ತು

ದಿಂಬಂ : ಚಾಮರಾಜನಗರ ಮತ್ತು ಸತ್ಯಮಂಗಲಂನ ಹಳ್ಳಿಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ರಜನಿಕಾಂತ್‌ ಅಭಿಮಾನಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.

‘ರಜನಿ ರಸಿಗರ್‌ ಮಂದ್ರಂ’ ಎಂಬ ರಜನಿ ಅಭಿಮಾನಿಗಳ ಸಂಘದ ಸದಸ್ಯರು ತಂಡ ತಂಡಗಳಾಗಿ ಹಳ್ಳಿಗಳಲ್ಲಿ ಸುತ್ತುತ್ತಿದ್ದು, ಜನ ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಗೋಪಾಲ್‌ ಮೂಲಕ ರಾಜ್‌ ಅವರಿಗೆ ರಜನಿಕಾಂತ್‌ ಕ್ಯಾಸೆಟ್ಟನ್ನು ಕಳುಹಿಸಿಕೊಟ್ಟ ಮೇಲಂತೂ ಸದಸ್ಯರು ಮತ್ತಷ್ಟು ಚಟುವಟಿಕೆಯಿಂದಿದ್ದಾರೆ. ಮನೆಯ ಚಿಂತೆ ಬಿಟ್ಟು ನಾಡಿನ ಶಾಂತಿ ಕಾಪಾಡುವ ಕಾಯಕದಲ್ಲಿ ಮುಳುಗಿದ್ದಾರೆ.

ಸತ್ಯಮಂಗಲಂ ತಾಲೂಕಿನ 3 ಹೋಬಳಿಗಳಲ್ಲಿ ರಜನಿ ಅಭಿಮಾನಿಗಳ ಸಂಖ್ಯೆ 10 ಸಾವಿರದಷ್ಟಿದೆ. ಸತ್ಯಮಂಗಲಂ ಪಟ್ಟಣದಲ್ಲೇ 250ಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ತಮಿಳುನಾಡಿನ ಹಳ್ಳಿಗಳಲ್ಲಿರುವ ಕನ್ನಡಿಗರ ಹಾಗೂ ತಮಿಳರ ನಡುವೆ ಸೌಹಾರ್ದತೆ ಬಿತ್ತಿ, ಯಾವುದೇ ಭಿನ್ನಾಭಿಪ್ರಾಯಗಳೂ ಮೂಡದಂತೆ ಈ ಅಭಿಮಾನಿಗಳು ನಿಗಾ ವಹಿಸಿದ್ದಾರೆ. ಮಂದ್ರಂ ಅಧ್ಯಕ್ಷ ಎಸ್‌.ಎಂ. ದಯಾಳನ್‌ ಹೀಗೆನ್ನುತ್ತಾರೆ- ‘ಇಲ್ಲಿರುವ ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂಬ ಭರವಸೆ ನಮಗಿದೆ. ಈ ಕಾರಣಕ್ಕಾಗೇ ನಾವು ಶಾಂತಿಗೆ ಭಂಗ ತರುವ ಯಾವುದೇ ಘಟನೆ ನಡೆಯದಂತೆ ತೀವ್ರ ನಿಗಾ ವಹಿಸಿದ್ದೇವೆ’.

‘ಕರ್ನಾಟಕದಲ್ಲಿನ ಕೆಲವು ರಾಜ್‌ ಅಭಿಮಾನಿಗಳು ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗಲು ಸಿದ್ಧರಾದಂತೆ ನಾವೂ ಕಾಡಿಗೆ ನುಗ್ಗಲು ಸಿದ್ಧ. ಆದರೆ ಅದಕ್ಕೆ ರಜನಿಕಾಂತ್‌ ಅಪ್ಪಣೆ ಇತ್ತಿಲ್ಲವಾದ್ದರಿಂದ, ಅವರ ಇಮೇಜಿಗೆ ಚ್ಯುತಿ ತರಬಾರದೆಂದು ಸುಮ್ಮನಿದ್ದೇವೆ’ ಎನ್ನುತ್ತಾರೆ ದಯಾಳನ್‌.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+