ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.17 ನ್ನು ಹೈ.ಕ. ಸ್ವತಂತ್ರ ದಿನವಾ-ಗಿ ಆಚರಿಸಲು ಒತ್ತಾಯ

By Staff
|
Google Oneindia Kannada News

ಗುಲ್ಬರ್ಗಾ : ಪ್ರತಿವರ್ಷ ಸೆಪ್ಟೆಂಬರ್‌ 17ನ್ನು ಹೈದರಾಬಾದ್‌ ಕರ್ನಾಟಕ-ದ ಸ್ವಾತಂತ್ರ್ಯ ದಿನವನ್ನಾಗಿ ಆ-ಚ-ರಿ-ಸ-ಲು ಹೈ.ಕ. ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ದೇಶವೆಲ್ಲ 1947ರಲ್ಲಿ ಸ್ವತಂತ್ರವಾದರೆ, ಹೈದರಾಬಾದ್‌ ಕರ್ನಾಟಕ ಪ್ರದೇಶ ಮಾತ್ರ ಹೈದರಾಬಾದ್‌ ನಿಜಾಮರಿಂದ ಸ್ವತಂತ್ರವನ್ನು ಪಡೆಯಲು 1948ರ ಸೆಪ್ಟೆಂಬರ್‌ 17ರವರೆಗೆ ಕಾಯಬೇಕಾಯಿತು ಎಂದು ಸ್ವಾತಂತ್ರ್ಯ ಹೋರಾಟಗಾರರ ಸಂಘದ ಉಪಾಧ್ಯಕ್ಷ ಸರ್ದಾರ್‌ ಶರಣ ತಿಳಿಸಿದ್ದಾರೆ. ಈ ಸಂಬಂಧ ಸರಕಾರಕ್ಕೆ ಪತ್ರಬರೆಯಲಾಗಿದ್ದು, ಅದರ ಪ್ರತಿಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು.

ಹೈದರಾಬಾದ್‌ ನಿಜಾಮರ ವಿರುದ್ಧ ಭಾರತ ಸರಕಾರದ ಪೊಲೀಸ್‌ ಕಾರ್ಯಾಚರಣೆಯ ನಂತರ ಇಲ್ಲಿನ ನಾಗರಿಕರಿಗೆ ಸ್ವಾತಂತ್ರ್ಯ ಲಭಿಸಿತು. ಈ ದಿನದ ಸ್ಮರಣೆಗಾಗಿ ಪ್ರತಿವರ್ಷವೂ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನದ ಆಚರಣೆಗೆ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X