• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಕೆರೆಯಲ್ಲಿ ಬಿದ್ದವನಿಗೆದೊಡ್ಡಕೆರೆಯಲ್ಲಿ ಸ್ವಾಗತ

By Staff
|

*ಕರಿಸ್ವಾಮಿ ಕೆ.

ಭಾರತದಲ್ಲಿ ಮಹಾಶಿವರಾತ್ರಿ ಮತ್ತು ಯುಗಾದಿಯ ನಂತರ ಸಾಲುಸಾಲಾಗಿ ಬರುವ ಹಬ್ಬಗಳನ್ನು ಶ್ರಾವಣ ಮಾಸ ಉದ್ಘಾಟಿಸುತ್ತದೆ. ಶ್ರಾವಣದ ಹಬ್ಬಗಳು ಅಮಲು ಇರುವಾಗಲೇ ಹೆಗಲೇರಿ ಬರುವ ಗಣೇಶ ಕೊಟ್ಯಾಂತರ ಭಕ್ತರ ಪಾಲಿನ ವಿಘ್ನವಿನಾಶಕ, ಆದಿಮ ದೇವರು. ಎಲ್ಲ ಮೊದಲುಗಳಿಗೂ ಕಾರಣಕರ್ತ.

ಮನೆ-ಮನಗಳಲ್ಲಿ ಪೂಜೆಗೊಳ್ಳುವ ಗಣಪ ಸಾಂಘಿಕವಾಗಿ ಪೂಜೆಗೊಳ್ಳುವ ಮೂಲಕ ಹತ್ತಾರು ಅಭಿರುಚಿಯ ಜನರನ್ನು ಒಂದೇ ವೇದಿಕೆಯಡಿ ಕರೆತರುವಷ್ಚು ಶಕ್ತಿ ಪಡೆದಿದ್ದಾನೆ. ಬಹುಶಃ ಸ್ಥಳೀಯವಾಗಿ ರಾಜ್ಯೋತ್ಸವದಂಥ ಐತಿಹಾಸಿಕ ಹಬ್ಬ ಹೊರತುಪಡಿಸಿದರೆ ಗುಂಪಾಗಿ ಆಚರಿಸುವ ಸಾಂಸ್ಕೃತಿದ ಹಬ್ಬಗಳಲ್ಲಿ ಮತ್ತೆ ಗಣಪನ ಹಬ್ಬಕ್ಕೆ ಅಗ್ರ ಸ್ಥಾನ .

ಹಾಗೆ ನೋಡಿದರೆ ನವೆಂಬರ್‌ನಲ್ಲಿ ಬರುವ ರಾಜ್ಯೋತ್ಸವಕ್ಕೆ ಸಂಘಸಂಸ್ಥೆಗಳನ್ನು ಸಿದ್ಧಪಡಿಸುವ, ಜಾಗೃತಿಗೊಳಿಸುವವನೇ ಗಣಪ. ಗಣೇಶೋತ್ಸವಕ್ಕೆ ಎಚ್ಚರಗೊಳ್ಳುವ ಸಂಘಸಂಸ್ಥೆಗಳು ಮತ್ತೆ ನವೆಂಬರ್‌ ನಂತರ , ಇನ್ನೊಮ್ಮೆ ಗಣೇಶೋತ್ಸವ ಬರುವ ತನಕ ಮಲಗುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಗಣೇಶೋತ್ಸವ ಯುವಕ ಸಂಘಗಳು ಮತ್ತು ರಾಜ್ಯೋತ್ಸವ ಸಂಘಗಳು ಬಹುತೇಕ ಬೇರೆ ಬೇರೆಯಾದರೂ ಒಂದರ್ಥದಲ್ಲಿ ಆಚರಣೆಗೆ ಪರೋಕ್ಷವಾಗಿ ಪೈಪೋಟಿಗಿಳಿಯುತ್ತವೆ. ಕೆಲವು ಸಂಸ್ಥೆಗಳಂತೂ ಎರಡೂ ರೀತಿಯ ಉತ್ಸವಗಳನ್ನೂ ಆಚರಿಸುತ್ತವೆ.

ಇದೆಲ್ಲಾ ಎನೇ ಇದ್ದರೂ ಗಣೇಶೋತ್ಸವದಂಥ ಸಾಂಸ್ಕೃತಿಕ ಉತ್ಸವದಿಂದ ಜನರನ್ನು ಹೇಗೆ ಸಂಘಟಿಸಬಹುದೆಂದು ಆರಿತಿದ್ದ ಲೋಕಮಾನ್ಯ ಭಾಲಗಂಗಾಧರ ತಿಲಕರು ಸ್ವಾತಂತ್ರೋತ್ಸವ ಸಮರಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಆಯಾಮನ್ನೇ ನೀಡಿದ್ದು ಈಗ ಇತಿಹಾಸ ಅಷ್ಟೇ. ಸಾಂಸ್ಕೃತಿಕ ಮತ್ತು ಪೌರಾಣಿಕ ಕಾರಣಗಳು ಜನರನ್ನು ಹೆಚ್ಚು ಸೆಳೆಯುವ, ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿ ಪಡೆದಿರುವುದನ್ನು ಗುರುತಿಸಿದ್ದ ಗಾಂಧೀಜಿ ಮತ್ತು ತಿಲಕರು ಸ್ವಾತಂತ್ರೋತ್ತರ ಇತಿಹಾಸದಲ್ಲಿ ಜನರನ್ನು ಬ್ರೀಟೀಷರ ವಿರುದ್ಧ ಸಂಘಟಿಸುವಲ್ಲಿ ಮಾಡಿದ ಸಾಧನೆಗಳ ಹಿನ್ನಲೆಯಲ್ಲಿ ಗಣೇಶೋತ್ಸವ ಸೇರಿದಂತೆ ಅನೇಕ ಸಾಂಸ್ಕೃತಿಕ ಉತ್ಸವಗಳು ನೆನಪಾಗುತ್ತವೆ.

ಗಣೇಶೋತ್ಸವ ಇವತ್ತಿಗೂ ಮುಖ್ಯ : ಇಂಥ ಎಲ್ಲ ಸಾಧ್ಯತೆಗಳನ್ನು ಒಳಗೊಂಡ ಉತ್ಸವಗಳ ಮಹತ್ವ, ಸೂಕ್ಷ್ಮವಾಗಿ ಯೋಚಿಸುವ ಯಾರಿಗಾದರೂ ಹೊಳೆದೀತು. ಇವತ್ತಿಗೂ ಕೂಡ ಹಲವು ವಿಶಿಷ್ಟ ಕಾರಣಗಳಿಗಾಗಿ ಗಣೇಶೋತ್ಸವ ಬಹಳ ಮುಖ್ಯವಾದುದಾಗಿದೆ. ಅದರಲ್ಲೂ ಸಂಘಸಂಸ್ಥೆಗಳು ಆಚರಿಸುವುದಕ್ಕಂತೂ ಬೇರೆಯದೇ ಆದ ಅರ್ಥಗಳುಂಟು. ಮಹಾರಾಷ್ಟ್ರದಲ್ಲಿ ಕನಿಷ್ಟ 10 ದಿನ ನಡೆಯುವ ಗಣೇಶೋತ್ಸವ ಇವತ್ತಿಗೂ ಮೊದಲ ಜನಪ್ರಿಯ ಹಬ್ಬ. ರಾಷ್ಟ್ರಾದ್ಯಂತ ಸಾಮೂಹಿಕವಾಗಿ ಆಚರಿಸಲಾಗುವ ಗಣೇಶೋತ್ಸವದ ರಂಗು ಮನೆಗಳ ಹೊಸಿಲು ದಾಟಿ ಬಿದಿಯ ಕೊನೆಯವರಿಗೂ ಬರುತ್ತದೆ. ಹಾಗೆ ನೋಡಿದರೆ ಸರಾಸರಿ ಒಂದು ವಾರ ಭರ್ಜರಿ ಭರಾಟೆ ಇದ್ದೇ ಇರುತ್ತದೆ.

ಅನೇಕ ಹೊಸ-ಹಳೆಯ ಪ್ರತಿಭೆಗಳಿಗೆ ಸಾಮಾಹಿಕವಾಗಿ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುವ ಗಣೇಶೋತ್ಸವ, ಸ್ಪರ್ಧೆಗಳನ್ನೂ ಒಡ್ಡುತ್ತದೆ. ಗಾಯನ, ನಟನೆ, ನೃತ್ಯ ಎಲ್ಲಕ್ಕೂ ಇಲ್ಲಿ ಜಾಗವುಂಟು. ಹಿರಿಯರಿಗೆ ಸನ್ಮಾನಗಳುಂಟು, ಕಿರಿಯರಿಗೆ ಪ್ರೋತ್ಸಾಹವುಂಟು. ತೀರ್ಥ-ಪ್ರಸಾದಗಳುಂಟು. ತಪ್ಪುಗಳನ್ನೆಲ್ಲಾ ಒಪ್ಪಿಸಿ ಕ್ಷಮೆ ದಯಪಾಲಿಸುವಂತೆ ಉದ್ದಂಡ ನಮಸ್ಕಾರ ಹಾಕುವ ವಾಡಿಕೆಯುಂಟು. ಅಪ್ಪಿ-ತಪ್ಪಿ ಚೌತಿಯ ಚಂದ್ರನ ನೋಡಿದವರಿಗೆ ಶಮಂತಕೋಪಾಖ್ಯಾನ ಕಥೆಯ ಪರಿಹಾರವೂ ಇದೆ. ಕಂಡೂ, ಕಾಣದೆ ಮಾಡಿದ ತಪ್ಪುಗಳನ್ನು ಆತನ ತಲೆಯ ಮೇಲೆ ಹಾಕಿ ಹಗುರಾಗುವವರೂ, ನಿತ್ಯ ಅಭಿಷೇಕ ಮಾಡಿಸುವವರೂ, ಮುಂದಿನ ಬಾರಿಗೆ ಹರಕೆ ಹೊರುವವರೂ ಎಲ್ಲರೂ ಒಗ್ಗೂಡುವುದು ಸಂಘವೊಂದು ಭರ್ಜರಿಯಾಗಿ ಉತ್ಸವ ಏರ್ಪಡಿಸಿದಾಗ. ಜಾನಪದ ಹಾಡು, ಸುಗ್ಗಿ ಕುಣಿತಗಳು ಗ್ರಾಮೀಣ ಪ್ರದೇಶದಲ್ಲಿ ಗಣೇಶೋತ್ಸವಕ್ಕೆ ಹೊಸ ರಂಗು ತರುತ್ತವೆ.

ಇಷ್ಟೇಲ್ಲಾ ಹೇಳಿದ ಮೇಲೆ ಗಣೇಶನ ಹೆಸರಿನಲ್ಲಿ ನಡೆಯುವ ಹಾವಳಿಗಳ ಬಗ್ಗೆ ಹೇಳಲೇಬೇಕು. ಗಣೇಶೋತ್ಸವದ ಹೆಸರಿನಲ್ಲಿ ನಡೆಯುವ ಬಲವಂತದ ವಸೂಲಿಗಳು ಮತ್ತು ಅದಕ್ಕೆ ಸಾರ್ವಜನಿಕರಿಗೆ ಉತ್ತರದಾಯಿತ್ವ ಇಲ್ಲದಿರುವುದು ಅನಧಿಕೃತ ದಂಧೆಗೆ ಅವಕಾಶ ಮಾಡಿಕೊಡುತ್ತಿದೆ. ಇವತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟ ಬೇಡ, ಚಿಕ್ಕ ಗ್ರಾಮವೊಂದರ ಗಣೇಶೋತ್ಸವ ಸಮಿತಿಗೆ ಅಧ್ಯಕ್ಷರಾಗಲು ಚುನಾವಣೆ ಬಿಸಿಗಿಂತಲೂ ಮಿಗಿಲಾದ ಪೈಪೋಟಿ ಏರ್ಪಡುತ್ತದೆ. ಇಂಥ ಅಸಹ್ಯ ಪೈಪೋಟಿ ವಶೀಲಿ-ಬಾಜಿ ನೋಡಿ ನಾಗರಿಕರಿಗೆ ಇನ್ನೊಂದು ರೀತಿಯ ಜಿಗುಪ್ಸೆ ಈಗಾಗಲೇ ಆರಂಭವಾಗಿದೆ. ಇನ್ನು ಆನಗತ್ಯ ಶಬ್ಧಮಾಲಿನ್ಯಕ್ಕೆ ಕಡಿವಾಣ ಹಾಕಲು ಯಾವ ಕ್ರಮ ತೆಗೆದುಕೊಳ್ಳಬೇಕೋ ತಿಳಿಯುವುದಿಲ್ಲ. ಚಿಕ್ಕವರು ಮತ್ತು ಓದುತ್ತಿರುವ ಮಕ್ಕಳು ಹಾಗೂ ಅನಾರೋಗ್ಯ ಪೀಡಿತರ ಪಾಲಿಗೆ ಗಣೇಶನನ್ನು ಶತೃವನ್ನಾಗಿ ಉತ್ಸವ ಸಮಿತಿಯ ಜನ ಬಿಂಬಿಸುತ್ತಾರೆ. ವರ್ಷವಿಡಿ ವಿದ್ಯುತ್‌ ಕೊರತೆಯಿಂದ ಬಳಲುವ ಜನರಿಗೆ, ಮುಖ್ಯವಾಗಿ ರೈತರಿಗೆ ತೊಂದರೆಯನ್ನು ಪರೋಕ್ಷವಾಗಿ ಗಣೇಶ ಕೊಡುತ್ತಾನೆ. ಇಂಥ ವೇಳೆಯಲ್ಲಿ ದೇವರ ಹೆಸರಲ್ಲಿ ನಡೆಯುವ ವಿದ್ಯುತ್‌ಕಳ್ಳತನಕ್ಕೆ ಲೆಕ್ಕ ಇಟ್ಟರೆ ಕೆಇಬಿಗೆ ಆಗುತ್ತಿರುವ ಖೋತಾ ವಿದ್ಯುತ್‌ ಪ್ರಮಾಣ ಗೊತ್ತಾಗುತ್ತದೆ. ಇದಕ್ಕೆಲ್ಲಾ ಎಂದಿಗೆ ಕೊನೆ ವಿಘ್ನೕಶ್ವರಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more