ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸ್ಕಿ ನಾಲೆ : ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ !

By Staff
|
Google Oneindia Kannada News

ಇನ್ಫೋ ಪ್ರತಿನಿಧಿಯಿಂದ

ರಾಯಚೂರು : ಹೈದರಾಬಾದ್‌ ನಿಜಾಮರ ಕಾಲದ ಪರಿಕಲ್ಪನೆಯಿದು. ಪ್ರಜಾರಾಜ್ಯ ಆಡಳಿತಕ್ಕೆ ಬಂದು, ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಈ ಕಲ್ಪನೆ ಈವರೆಗೆ ಸಾಕಾರಗೊಂಡಿಲ್ಲ. ಶತಮಾನ ಕಂಡ ಲಿಂಗಸೂಗೂರು ತಾಲ್ಲೂಕಿನ ಮಸ್ಕಿ ನಾಲಾ ಯೋಜನೆ ಒಂದರ್ಥದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!

ಒಂದೂವರೆ ದಶಕದ ಹಿಂದೆ ಯೋಜನೆಯ ರೂಪುರೇಷೆ ಅಂತಿಮಗೊಂಡು ಆಡಳಿತಾತ್ಮಕ, ತಾಂತ್ರಿಕ ಮಂಜೂರಾತಿ ಪಡೆದಾಗ ಯೋಜನೆಯ ಆಂದಾಜು ವೆಚ್ಚ 311 ಲಕ್ಷ ರುಪಾಯಿಗಳು. ಇದರಿಂದ 7 ಸಾವಿರ ಎಕರೆ ಬರಡು ಭೂಮಿಗೆ ನೀರುಣಿಸುವ ಸೌಭಾಗ್ಯ. ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಬಳಲಿದ ಈ ಯೋಜನೆ ಹಲವು ವರ್ಷಗಳ ಕಾಲ ಕಡತದಲ್ಲೇ ಕೊಳೆಯುತ್ತಾ ನೆನಪಾದಾಗೊಮ್ಮೆ ಕಾಗದದಲ್ಲೇ ಯೋಜನಾತ್ಮಕ ಪರಿಷ್ಕರಣೆ ಆಗುತ್ತಲೇ ನಡೆಯಿತು. ಕಾಮಗಾರಿ ಅನುಷ್ಠಾನಕ್ಕೆ ಬಂದ ನಂತರ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡವರಂತೆ ಒಂದಿಲ್ಲೊಂದು ತಾಂತ್ರಿಕ ಅಡಚಣೆಯಲ್ಲಿ ಬೇಗನೆ ಕೆಲಸ ಮುಗಿಯದಂತೆ ನೋಡಿಕೊಂಡರು.

ತತ್ಪರಿಣಾಮವಾಗಿ ಈ ಯೋಜನೆಯ ವೆಚ್ಚವೀಗ 35 ಕೋಟಿ ರುಪಾಯಿಗಳಿಗೇರಿದೆ. ಕೆಲಸ ಮಾತ್ರ ಇನ್ನೂ ಉಳಿದುಕೊಂಡಿದೆ. ಸಾಲ ಒದಗಿಸಿದ ನಬಾರ್ಡ್‌ ಸಂಸ್ಥೆ 1999ರ ಮಾರ್ಚ್‌ನಲ್ಲೊಮ್ಮೆ ವಿಧಿಸಿದ ಗಡುವನ್ನು ಎರಡು ಬಾರಿ ವಿಸ್ತರಿಸಿದ್ದು, ಈ ವರ್ಷದ ಡಿಸೆಂಬರ್‌ನೊಳಗೆ ಕೆಲಸ ಮುಗಿಸಿ ರೈತರಿಗೆ ನೀರಾವರಿ ಸೌಕರ್ಯ ಒದಗಿಸಲು ತಾಕೀತು ಮಾಡಿದೆ. ನೀರಾವರಿ ಸಚಿವ ಎಚ್‌. ಕೆ. ಪಾಟೀಲರು ಯೋಜನಾ ಗಾತ್ರ ಮತ್ತು ನೀರಾವರಿ ಸೌಲಭ್ಯದ ಉದ್ಗಾರವೆತ್ತಿ ನಬಾರ್ಡ್‌ನಂತೆಯೇ ಲಕ್ಷ್ಮಣರೇಖೆ ಹಾಕಿದ್ದಾರೆ. ನಿಗದಿತ ಗಡುವಿನಲ್ಲಿ ಕೆಲಸ ಮುಗಿಯುವುದೋ ಅಥವಾ ಮತ್ತೊಮ್ಮೆ ಯೋಜನಾ ಗಾತ್ರದ ವೆಚ್ಚ ಪರಿಷ್ಕೃವಾಗುವುದೋ ಕಾದು ನೋಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X