ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಿ ನಗರ ಕಾಡುತ್ತಿರುವ ಕರಳುಬೇನೆ

By Super
|
Google Oneindia Kannada News

ಹುಬ್ಬಳ್ಳಿ : ಕರ್ನಾಟಕದ ' ಎರಡನೇ ರಾಜಧಾನಿ" ಎಂದೇ ಹೇಳಲಾದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕರುಳು ಬೇನೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ದಿನೇ-ದಿ-ನೇ ಏರುತ್ತಲೇ ಇದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 95 ಮಂದಿ ಅತಿಸಾರದಿಂದ ವಿವಿಧ ಆಸ್ಪತ್ರೆಗಳಿಗೆ ಸೇರಿದ್ದಾರೆ. ಧಾರವಾಡ ಜಿಲ್ಲಾ ಆಸ್ಪತ್ರೆಗೆ 22 ಮಂದಿ, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ 18 ಮಂದಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 30, ಹುಬ್ಬಳ್ಳಿ-ಧಾರವಾಡ ದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ 25 ಮಂದಿ ಕಳೆದ 24 ತಾಸುಗಳ ಅವಧಿಯಲ್ಲಿ ದಾಖಲಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶಿರ-ಸಿ-ಯ-ಲ್ಲಿ ಸಂಸ್ಕೃತ ಸಮ್ಮೇಳನ : ಸಂಸ್ಕೃತ ವರ್ಷಾಚರಣೆಯ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನವು ಮೇ 10ರಂದ ನಡೆಯಲಿದೆ.

ಉತ್ತರ ಕನ್ನಡ ಜಿಲ್ಲಾ ಸಂಸ್ಕೃತ ವರ್ಷ ಸಮಿತಿಯ ಕಾರ್ಯದರ್ಶಿ ಅನಂತ ಹೆಗಡೆ(ಅಶೀಸರ) ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಹಿರಿಯ ಪತ್ರಕರ್ತ ಕೆ. ಶ್ಯಾಮರಾವ್‌ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸುವರು.

ನೇಮಕ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಬಿ.ಜೆ.ಪಿ.ಯ ಬಿ.ಎಸ್‌ ಪಾಟೀಲ್‌ ನೇಮಕವಾಗಿದ್ದಾರೆಂದು ಆ ಪಕ್ಷದ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಪಾಲಿಕೆಯಲ್ಲಿ ಬಿ.ಜೆ.ಪಿ. ವಿರೋಧ ಪಕ್ಷವಾಗಿದೆ.
ಧಾರವಾಡದ 9ನೇ ವಾರ್ಡನ್ನು ಪಾಲಿಕೆಯಲ್ಲಿ ಪ್ರತಿನಿಧಿಸುವ ಬಿ.ಎಸ್‌ ಪಾಟೀಲರು ಬಿ.ಎ. ಪದವೀಧರರು. ವೃತ್ತಿಯಲ್ಲಿ ಕೃಷಿಕರು.

English summary
Gastroenteritis continues to trouble Twin cities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X