• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂದರ್ಶನ: ನೂರು ದೇಶ ಸುತ್ತುವಾಸೆ ಉಜಿರೆಯ ಈ ಕಲಾವಿಲಾಸಿಗೆ....

By ಯಶಸ್ವಿನಿ ಎಂ.ಕೆ
|

ಮೈಸೂರು, ಆಗಸ್ಟ್ 4 : ಆತ ಕುಂಚ ಹಿಡಿದರೆ ಕ್ಷಣಾರ್ಧದಲ್ಲಿ ಜಾದು ಮಾಡುತ್ತಾರೆ. ಕರಾವಳಿಯ ಈ ಯುವಕ ದೇಶವನ್ನೇ ಬೆರಗುಗಣ್ಣಿನಿಂದ ನೋಡುತ್ತಾರೆ.

ವಯಸ್ಸು 26, ಆದರೆ ಪ್ರತಿಭೆ ಮಾತ್ರ 206 ವಸಂತಗಳು ನೆನಪಿನಲ್ಲೇ ಹಿಡಿದಿಟ್ಟುಕೊಳ್ಳುವಂತಹ ಚಮತ್ಕಾರ ಇವರದು. ರಾಷ್ಟ್ರಮಟ್ಟದ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಚಕಚಕನೆ ಕೆಲವೇ ನಿಮಿಷದಲ್ಲಿ ಪೇಂಟಿಂಗ್ ಬಿಡಿಸಿ ಬೆರಗುಗೊಳಿಸುವ ವಿಲಾಸ್ ನಾಯಕ್ ಅವರಿಗೆ ಜಾಗತಿಕ ಮಟ್ಟದಲ್ಲಿ ಸ್ಪೀಡ್ ಪೈಂಟರ್ ಎಂಬ ಹೆಗ್ಗಳಿಕೆಯಿದೆ.

ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಿಂಗಪುರದ ಅಧ್ಯಕ್ಷರ ಚಾರಿಟಿ ಶೋನಲ್ಲಿ, ಏಷ್ಯಾ ಗಾಟ್ ಟಾಲೆಂಟ್ ನಲ್ಲಿ, ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೇರಿದಂತೆ ನೂರಾರು ಕಡೆ ಸ್ಪೀಡ್ ಪೇಂಟಿಗೆ ನಡೆಸಿ ಜನರ ಮುಖದಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ. ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ , ಪುಟ್ಬಾಲ್ ದಂತಕತೆ ಪೀಲೆ ಮುಂತಾದವರ ಮುಂದೆ ತನ್ನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ವಿಲಾಸ್ ನಾಯಕ್ ?

ವಿಲಾಸ್ ನಾಯಕ್ ?

ಶ್ರೀಮಂತ ಕುಟುಂಬವಲ್ಲದ ಕುಟುಂಬದಲ್ಲಿ ಬೆಳೆದ ವಿಲಾಸ್ ಅಪ್ಪಟ ಮಂಗಳೂರು ಹುಡುಗ. ತಂದೆಯಿಟ್ಟ ಅಂಗಡಿಯನ್ನು ನೋಡಿಕೊಂಡು ಬೆಳೆದವರು. ಉಜಿರೆಯಲ್ಲಿ ಬಿಎ ಪದವಿ (7ನೇ rank), ಮೈಸೂರು ವಿವಿಯಲ್ಲಿ ಎಂಎಸ್‍ಡಬ್ಲ್ಯು ಪದವಿ(2ನೇ rank) ಕನ್ನಡ ಮುಕ್ತ ವಿವಿಯಲ್ಲಿ ಪಿಜಿಡಿಎಚ್ ಆರ್‍ಎಂ ಓದಿದ್ದಾರೆ. ಶಿಕ್ಷಣ ಮುಗಿದ ನಂತರ ಶಾಹಿ ಎಕ್ಸ್ ಪೋರ್ಟ್ ಕಂಪನಿಯಲ್ಲಿ 1 ವರ್ಷ, 2 ತಿಂಗಳು ಕೆಲಸ ಮಾಡಿದರು. ನಂತರ ಐಬಿಎಂನ ಮಾನವ ಸಂಪನ್ಮೂಲ ವಿಭಾಗದಲ್ಲಿ ಸುಮಾರು ನಾಲ್ಕೂವರೆ ವರ್ಷ ಕೆಲಸ ಮಾಡಿದ್ದಾರೆ. ಅವರ ಸಾಧನೆಯ ಹಾದಿಯನ್ನು ಅವರ ಮಾತಲ್ಲೇ ಕೇಳಿ...

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

ಪ್ರತಿಭೆ ಅಳೆಯುವ ಕೆಲಸ

ಪ್ರತಿಭೆ ಅಳೆಯುವ ಕೆಲಸ

"ಕೆಲಸ ಮಾಡುವಾಗ ಇತರ ಸಹೋದ್ಯೋಗಿಗಳ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅಳೆಯುವುದು ನನ್ನ ಉದ್ಯೋಗವಾಗಿತ್ತು. ಅಂತರಂಗದಲ್ಲಿ ತಳಮಳ ಶುರುವಾದದ್ದು ಅಲ್ಲಿನ ಪ್ರತಿಭಾವಂತರನ್ನು ಕಂಡಾಗಲೇ. ಉಳಿದವರ ಪ್ರತಿಭೆ ಅಲೆಯುವ ನಾನು ನನ್ನ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಮರೆತಿದ್ದೇನೆ. ನನ್ನ ಪ್ರತಿಭೆಯ ಭವಿಷ್ಯದ ಬಗ್ಗೆ ಚಿಂತಿಸತೊಡಗಿದೆ. ಚಿಕ್ಕ ಪ್ರಾಯವಿದ್ದಾಗ ಬೆಳೆಯಲು ಉಜಿರೆಯಲ್ಲಿ ಅವಕಾಶವೇ ಇಲ್ಲ ಎಂದಲ್ಲ ಅಂದುಕೊಳ್ಳುತ್ತಿದ್ದೆ. ಆದರೆ ನಾನು ಈಗ ಬೆಂಗಳೂರಿಗೆ ಬಂದಿದ್ದೇನೆ. ಆದರೂ ನೌಕರಿ ಮಾಡುತ್ತಾ ಸುಮ್ಮನಿದ್ದೇನೆ ಎಂಬ ಚಿಂತೆ ಕಾಡುತ್ತಿತ್ತು. ಆಗಲೇ ಈ ಕಾಯಕಕ್ಕೆ ಕೈಜೋಡಿಸಿದೆ"

ನನ್ನ ಕಲೆಯ ತವರು

ನನ್ನ ಕಲೆಯ ತವರು

"ಪ್ರತಿ ಮಗುವು ಕಲಾವಿದನೇ. ಆದರೆ ಬೆಳೆಯುತ್ತಾ ಹೋದಂತೆ ಆತ ಕಲಾವಿದನಾಗಿಯೇ ಉಳಿಯುವುದು ಸವಾಲು ಎಂಬ ಪ್ರಸಿದ್ಧ ಚಿತ್ರಕಲಾವಿದ ಮಾತು ನನ್ನನ್ನು ಹೆಚ್ಚು ಕಾಡಿತು. ಬಾಲ್ಯದಲ್ಲಿ ಉಜಿರೆಯ ಪ್ರಕೃತಿ ನನ್ನನ್ನು ಬಹಳ ಆಕರ್ಷಿಸಿತು. ಹುಟ್ಟಿದ ಮೂರನೇ ವರ್ಷಕ್ಕೆ ಚಿತ್ರ ಬರೆಯಲಾರಂಭಿಸಿದೆ. ಚಿತ್ರಕಲೆ ದೇವರು ನೀಡಿದ ವರ. ನಾನು ಯಾವ ಚಿತ್ರಕಲಾ ಶಾಲೆಗೆ ಹೋಗಿಲ್ಲ. ಆಗ ಮನೆಯಲ್ಲಿ ಟೀವಿ ಕೂಡ ಇರಲಿಲ್ಲ. ಸಮಯ ವ್ಯರ್ಥ ಮಾಡಲು ಈಗಿನಂತೆ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಕ್ರಿಯಾಶೀಲತೆ, ಚಿಂತನೆಗೆ ಸಮಯ ಧಾರಾಳವಾಗಿತ್ತು. ನಾನು ಚಿಕ್ಕವನಿದ್ದಾಗ ಯಾರಲ್ಲಿಯೂ ಹೆಚ್ಚು ಮಾತನಾಡುತ್ತಿರಲಿಲ್ಲ. ಎಲ್ಲರಂತೆ ಮಾತನಾಡಲು ತೊಡಗಿದ್ದು ನೌಕರಿಗೆ ಸೇರಿದ ಮೇಲೆಯೇ! ಕಲಾವಿದರೆಲ್ಲರೂ ಸಾಮಾನ್ಯವಾಗಿ ಅಂತರ್ಮುಖಿಗಳಾಗಿರುತ್ತಾರೆ ಎಂಬುದು ನನ್ನ ಭಾವನೆ"

100 ದೇಶ ಸುತ್ತುವ ಆಸೆಯಿದೆ

100 ದೇಶ ಸುತ್ತುವ ಆಸೆಯಿದೆ

"ನೌಕರಿ ತೊರೆದ ಬಳಿಕ ಚಿತ್ರ ರಚನೆ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲಸ ತೊರೆದ ಐದು ವರ್ಷಗಳಲ್ಲಿ 23 ದೇಶಗಳಲ್ಲಿ ಸುಮಾರು ಐದು ನೂರು ಶೋ ಮಾಡಿದ್ದೇನೆ. ನನಗೆ ಐವತ್ತು ವರ್ಷ ವಯಸ್ಸಾಗುವ ವೇಳೆಯಲ್ಲಿ ಪ್ರಪಂಚದ 187 ದೇಶಗಳ ಪೈಕಿ ನೂರು ದೇಶಗಳಲ್ಲಿ ಶೋ ಮಾಡಬೇಕು ಎಂಬ ಆಸೆ ನನ್ನದು. ಚಿತ್ರಕಲೆ ಎಲ್ಲರಿಗೂ ಅರ್ಥವಾಗುವ ಮಾಧ್ಯಮ ಇದಕ್ಕೆ ಭಾಷೆ ಬೇಡ, ಸಹೃದಯ ಕಲಾರಸಿಕರು ಬೇಕಷ್ಟೆ"

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is a success story of a young boy from Mysuru, who has achieved a lot through his beautiful paintings. He shares his art life with us in an interview here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more