• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರವ ರಾತ್ರಿ, ನಿರ್ಜನ ಬಸ್ ಸ್ಟಾಪ್, ಒಂಟಿ ಮಹಿಳೆ... ಮುಂದೇನಾಯ್ತು?!

|

ಮುಂಬೈ, ಅಕ್ಟೋಬರ್ 09: ನೀರವ ರಾತ್ರಿ, ನಿರ್ಜನ ಬಸ್ ಸ್ಟಾಪ್, ಒಂಟಿ ಮಹಿಳೆ... ಮುಂದೇನಾಯ್ತು?! ಏನಾಗೋಕೆ ಸಾಧ್ಯ? ಒಂದೋ ಅತ್ಯಾಚಾರ, ಕೊಲೆ, ಸುಲಿಗೆ ಅಷ್ಟೆ ಅಂದ್ಕೊಂಡ್ರಾ? ಇದ್ಯಾವುದೂ ಅಲ್ಲವೇ ಅಲ್ಲ, ಕಹಾನಿಗೆ ಬೇರೆಯದೇ ಟ್ವಿಸ್ಟ್ ಇದೆ, ಕೇಳಿ...

ಅದು ವಾಣಿಜ್ಯ ನಗರಿ ಮುಂಬೈನ ಒಂದು ನೀರವ ರಾತ್ರಿ, ಸುಮಾರು 1:30 ರ ಸಮಯ. ತುರ್ತು ಕೆಲಸವಿದ್ದಿದ್ದರಿಂದ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದ ಮಹಿಳೆಯೊಬ್ಬರು BEST(ಬೃಹನ್ಮುಂಬೈ ಇಲೆಕ್ಟ್ರಿಕ್ ಸಪ್ಲೈ ಅಡ್ ಟ್ರಾನ್ಸ್ ಪೋರ್ಟ್) ಬಸ್ ಹತ್ತಿ ಕೂತರು. ಎದೆಯಲ್ಲಿ ಢವ ಢವ..!

ನೆಚ್ಚಿನ '20 ರೂಪಾಯಿ ಡಾಕ್ಟರ್' ಶರೀರದ ಮುಂದೆ ಕಣ್ಣೀರಿಟ್ಟರು ಜನ

ಮಂತಾಶಾ ಶೇಖ್ ಎಂಬ 25 ವರ್ಷ ವಯಸ್ಸಿನ ಮಹಿಳೆಯ ನಿಜವಾದ ಅನುಭವ ಇದು. ಮುಂಬೈನ ಆರೆಯ ರಾಯಲ್ ಪಾಮ್ಸ್ ನ ತಮ್ಮ ಮನೆಯ ಹತ್ತಿರದ ಬಸ್ ಸ್ಟಾಪ್ ನಲ್ಲಿ ಆಕೆ ಇಳಿದುಕೊಂಡು ನೋಡಿದರೆ ರಸ್ತೆಯಲ್ಲಿ ನರಪಿಳ್ಳೆಯೂ ಇಲ್ಲ!

ಮಧ್ಯರಾತ್ರಿ, ಒಂಟಿ ಹೆಣ್ಣು ಅಂದ್ರೆ ಏನೆಲ್ಲ ಕಲ್ಪನೆಗಳು ಮನಸಲ್ಲಿ ಏಳಬೇಕೋ ಎಲ್ಲವೂ ಒಮ್ಮೆಲೇ ತಲೆಯಲ್ಲಿ ಗಿರಕಿ ಹಾಕಿಬಂದಿದ್ದವು.

ಪಕ್ಕದಲ್ಲಿ ನಿಂತೇ ಇತ್ತು ಬಸ್ಸು!

ಪಕ್ಕದಲ್ಲಿ ನಿಂತೇ ಇತ್ತು ಬಸ್ಸು!

ಮಂತಾಶಾ ತಲೆಯೆಲ್ಲ ಏನೇನೋ ಆತಂಕಗಳು ಸುತ್ತುತ್ತಿದ್ದರೆ ಆಕೆಯನ್ನು ಇಳಿಸಿ ಹೋಗಬೇಕಿದ್ದ ಬೆಸ್ಟ್ ಬಸ್ ಮಾತ್ರ ಅಲ್ಲೇ ನಿಂತಿತ್ತು. 'ಏನಮ್ಮಾ? ಮನೆಯಿಂದ ಯಾರಾದ್ರೂ ಬರ್ತಿದಾರಾ ನಿಮ್ಮನ್ನ ಕರ್ಕೊಂಡ್ ಹೋಗೋಕೆ?' ಡ್ರೈವರ್ ಕೇಳಿದ. 'ಇಲ್ಲ, ಆಟೋಕ್ಕೆ ಹೋಗ್ತೀನಿ' ಎಂದು ಮಂತಾಶಾ ಆಟೋಕ್ಕಾಗಿ ಹುಡುಕುತ್ತ ನಿಂತರು. ಬಸ್ಸು ಕದಲಲಿಲ್ಲ. ಮಂತಾಶಾಗೆ ಡ್ರೈವರ್ ಮತ್ತು ಕಂಡಕ್ಟರ್ ವರ್ತನೆಯೇ ಅರ್ಥವಾಗಲಿಲ್ಲ.

ಬೆಳಗಾವಿಯ ದಿವಾನನ ಮಗಳು, ಬೆಂಗಳೂರಿನ ಬಿಸಿಲ ಝಳದಲ್ಲಿ ಕರಗಿದ ನೈಜ ಕತೆ!

ಆಟೋ ಹತ್ತಿದ ಮೇಲೆ ಬಸ್ಸು ಮಾಯ!

ಕೆಲವು ಕ್ಷಣ ಕಾಯುತ್ತಿದ್ದಂತೆಯೇ ಆಟೋವೊಂದು ಬಂತು. ಮನೆಯ ಅಡ್ರೆಸ್ ಹೇಳಿ ಮಂತಾಶಾ ಆಟೋ ಹತ್ತಿ ಕೂರುತ್ತಿದ್ದಂತೆಯೇ ತನ್ನ ಜವಾಬ್ದಾರಿ ಮುಗಿಯಿತು ಎಂಬಂತೆ ಬೆಸ್ಟ್ ಬಸ್ ಹೊರಟಿತು! ಅಂದರೆ ಇಷ್ಟು ಹೊತ್ತು ಪೂರ್ತಿ ಬಸ್ಸು ತನ್ನ ರಕ್ಷಣೆಗಾಗಿ ನಿಂತಿತ್ತು ಎಂಬುದು ಮಂತಾಶಾಗೆ ಆಗ ಅರ್ಥವಾಗಿತ್ತು!

ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ

ಅದಕ್ಕೇ ನಂಗೆ ಮುಂಬೈ ಅಂದ್ರೆ ಇಷ್ಟ!

"ನನಗೆ ಮುಂಬೈ ಅಂದ್ರೆ ಇಷ್ಟವಾಗುವುದಕ್ಕೆ ಕಾರಣ ಇದೇ! ಬೆಸ್ಟ್ ಬಸ್ 398ರ ಡ್ರೈವರ್ ಗೆ ನನ್ನ ಧನ್ಯವಾದಗಳು. 1.30 ಕ್ಕೆ ನನ್ನನ್ನು ನಿರ್ಜನ ಬಸ್ ಸ್ಟಾಪ್ ವೊಂದರಲ್ಲಿ ಬಿಟ್ಟು, ನಂತರ ನಾನು ಆಟೋ ಹತ್ತುವವರೆಗೂ ಕಾದು, ನಾನು ಆಟೋ ಹತ್ತಿದ ನಂತರ ಹೊರಟು ನನಗೆ ಭದ್ರ ಭಾವ ನೀಡಿದ ಅವರಿಗೆ ನನ್ನ ಅನಂತ ಕೃತಜ್ಞತೆಗಳು. ನಾಣು ಆಟೊ ಹತ್ತುವವರೆಗೂ ಇಡೀ ಬಸ್ಸೂ ನನ್ನನ್ನು ಕಾದಿತ್ತು" ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಅದು ನಮ್ಮ ಕರ್ತವ್ಯ!

'ಅದು ನಮ್ಮ ಕರ್ತವ್ಯ ಸರ್...' ಈ ಬಗ್ಗೆ ಬಸ್ ಡ್ರೈವರ್ ಪ್ರಶಾಂತ್ ಮಾಯೆಕರ್ ಮತ್ತು ಕಂಡಕ್ಟರ್ ರಾಜ್ ದಿನಕರ್ ಅವರನ್ನು ಕೇಳಿದರೆ ಅವರು ನೀಡಿದ ಉತ್ತರ ಇದು! ನಾವು ಕೆಲಸಕ್ಕೆ ಸೇರುವ ಮೊದಲು ನಮಗೆ ನೀಡುವ ತರಬೇತಿಯಲ್ಲಿ, 'ಮಹಿಳೆಯರು, ವೃದ್ಧರು ಅಥವಾ ಯಾವುದೇ ಪ್ರಯಾಣಿಕರನ್ನು ಎಷ್ಟು ಗೌರವಿಸಬೇಕು ಎಂಬ ಪಾಠವನ್ನೂ ಮಾಡಿರುತ್ತಾರೆ. ಮಹಿಳೆಯರ ರಕ್ಷಣೆ ನಮ್ಮ ಹೊಣೆ' ಎಂದು ಡ್ರೈವರ್ ಪ್ರಶಾಂತ್ ಮಾಯೆಕರ್ ಹೇಳುವಾಗ ದಿನ ದಿನವೂ ಕೇಳುತ್ತಿರುವ ಅತ್ಯಾಚಾರದಂಥ ಸುದ್ದಿಗಳ ನಡುವಲ್ಲಿ ಹೊಸ ಆಶಾಕಿರಣವೊಂದು ಗೋಚರಿಸಿಸಂತೆನ್ನಿಸುತ್ತದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Story of a Mumbai woman Mantasha Shaikh restores respect on Humanity. She thanks BEST Bus driver of 398 ltd Who droppedher at 1.30 am at a deserted bus stop and asked her if someone is there to pick her up. and He made the entire bus wait until she got the auto,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more