ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!
ಶ್ರೀನಗರ, ಜುಲೈ 09: ತಮ್ಮ 80 ರ ಇಳಿ ವಯಸ್ಸಿನಲ್ಲಿ ಜನರು ಮೋಕ್ಷದ ಬಗ್ಗೆ ಮಾತನಾಡುತ್ತ ಅಥವಾ ಹಾಸಿಗೆ ಮೇಲೆಯೇ ಜೀವನ ಸಾಗಿಸುವುದೇ ಹೆಚ್ಚು. ಆದರೆ ಜಮ್ಮು-ಕಾಶ್ಮೀರದ ರಾಖ್ಖಿ ದೇವಿ ಇಂಥ ಮಹಿಳೆಯರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.
87 ರ ಇಳಿವಯಸ್ಸಿನಲ್ಲೂ ಆದರ್ಶನೀಯ ಕಾರ್ಯಗಳನ್ನು ಮಾಡುವ ಮೂಲಕ ಇಲ್ಲಿನ ಯುವಕರಿಗೆ ರಾಖ್ಖಿ ದೇವಿ ಸ್ಫೂರ್ತಿಯಾಗಿದ್ದಾರೆ.
ಇಲ್ಲಿ ಉಧಂಪುರದ ಬದಾಲಿ ಎಂಬಲ್ಲಿ ಶೌಚಾಲಯವನ್ನು ಕಟ್ಟಿಸುವ ಮೂಲಕ ಬಯಲು ಮಲವಿಸರ್ಜನೆಗೆ ಇತೀಶ್ರೀ ಹಾಡಿದ್ದಾರೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನಕ್ಕೆ ನಿಜವಾದ ಅರ್ಥ ನೀಡಿದ್ದಾರೆ.

ತಮ್ಮ ಊರಿನ ಎಲ್ಲರಿಗೂ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳುವಂತೆ ಸಲಹೆ ನೀಡುತ್ತಿರುವ ಈ ಅಜ್ಜಿ, ಅದಕ್ಕಾಗಿ ಜಿಲ್ಲಾಡಳಿತ ನೀಡುವ 12000 ರೂಪಾಯಿಯ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ರಾಖ್ಖಿ ದೇವಿ ಮೂಲತಃ ಬಡ ಕುಟುಂಬದ ಮಹಿಳೆ. ಶೌಚಾಲಯ ಕಟ್ಟುವಷ್ಟು ಹಣ ಇಲ್ಲದಿದ್ದರೂ, ಅದರ ಮಹತ್ವವನ್ನು ಜನರಿಗೆ ತೋರಿಸುವ ನಿಟ್ಟಿನಲ್ಲಿ ಶೌಚಾಲಯ ಕಟ್ಟಿದ್ದಾರೆ.
J&K: Rakkhi Devi, 87-year-old woman from Udhampur's Badali who constructed a toilet near her house in a bid to make her village open defecation free, felicitated by Dist Admn. GoI provided her a cheque of Rs 12,000 via Dy Commissioner & also got a Pucca toilet constructed for her pic.twitter.com/XW5P7CYP5Q
— ANI (@ANI) July 8, 2018
"ಬಯಲು ಮಲವಿಸರ್ಜನೆ ಎಂದರೆ ಮನುಷ್ಯ ತಾನೇ ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ. ನಾನು ಬಡವಳಲು. ನನ್ನ್ ಬಳಿ ಹಣವಿಲ್ಲ. ಆದ್ದರಿಂದಲೇ ಕಡಿಮೆ ಬೆಲೆಯಲ್ಲಿ, ನಾನೇ ಶೌಚಾಲಯ ಕಟ್ಟಿಕೊಳ್ಳಲು ಶುರುಮಾಡಿದೆ.ಇದಕ್ಕೆ ಬೇಕಾದ ಇಟ್ಟಿಗೆಗಳನ್ನೂ ನಾನೇ ತಯಾರಿಸಿಕೊಂಡೆ. ಕೇವಲ 7 ದಿನದಲ್ಲಿ ಶೌಚಾಲಯ ಸಿದ್ಧವಾಗಿದೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಅಜ್ಜಿ.
"ನಮ್ಮ ಸಾಂಪ್ರದಾಯಿಕ ಮನಸ್ಥಿತಿಯಿಂದ ಹೊರಬಂದು ಹೊಸ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗೆ ಹೊಂದಿಕೊಳ್ಳುವುದು ಎಲ್ಲರಿಗೂ ಅನಿವಾರ್ಯ. ಅಂಥ ಕೆಲಸವನ್ನು 87 ವರ್ಷದ ಅಜ್ಜಿ ಮಾಡಿದ್ದಾರೆ. ಅವರಿಂದ ಪ್ರತಿಯೊಬ್ಬರೂ ಪಾಠ ಕಲಿಯುವ ಅಗತ್ಯವಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications