ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ತುಂಬಿರುವ ತಲೆಯನ್ನು ಮತ್ತೆ ತುಂಬಿಸಲಾಗದು

|
Google Oneindia Kannada News

ಪ್ರಸಿದ್ಧ ಜಪಾನಿ ಝೆನ್ ಗುರು ನಾನ್-ಇನ್‌ನನ್ನು ಭೇಟಿ ಮಾಡಲು ಧರ್ಮಶಾಸ್ತ್ರದ ವಿಶ್ವವಿದ್ಯಾಲಯದ ಉಪನ್ಯಾಸಕನೊಬ್ಬ ಆಗಮಿಸಿದ. 'ನಾನೊಬ್ಬ ಉಪನ್ಯಾಸಕ. ಅನೇಕ ಧರ್ಮಶಾಸ್ತ್ರಗಳನ್ನು ಕಲಿತಿದ್ದೇನೆ ಮತ್ತು ಕಲಿಸುತ್ತಿದ್ದೇನೆ. ಈಗ ನಿಮ್ಮಿಂದ ಝೆನ್ ಜ್ಞಾನವನ್ನು ಕಲಿಯಲು ಬಂದಿದ್ದೇನೆ' ಎಂದು ತನ್ನನ್ನು ಪರಿಚಯಿಸಿಕೊಂಡ.

ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?

ಅತಿಥಿಯನ್ನು ಸ್ವಾಗತಿಸಿದ ನಾನ್-ಇನ್ ವಾಡಿಕೆಯಂತೆ, ಚಹಾ ಕಪ್ ತೆಗೆದು ಅವನ ಮುಂದಿಟ್ಟು, ಚಹಾ ಪಾತ್ರೆಯಿಂದ ಚಹಾ ಸುರಿಯಲಾರಂಭಿಸಿದ. ಕಪ್ ತುಂಬಿತು. ಆದರೂ ನಾನ್-ಇನ್ ಚಹಾ ಸುರಿಯುವುದನ್ನು ನಿಲ್ಲಿಸಲಿಲ್ಲ. ಕಪ್ ತುಂಬಿ ಚಹಾ ಚೆಲ್ಲಲಾರಂಭಿಸಿತು.

ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ

ಉಪನ್ಯಾಸಕನಿಗೆ ಇದೇನು ಮಾಡುತ್ತಿದ್ದಾನೆ ಎಂದು ಆಶ್ಚರ್ಯವಾದರೂ ಸುಮ್ಮನೆ ಕುಳಿತ. ಕಪ್ಪಿನಿಂದ ಹೊರಚೆಲ್ಲಿದ ಚಹಾ ಬಳಿಕ ಸಾಸರಿನಲ್ಲಿ ತುಂಬತೊಡಗಿತು. ಅಲ್ಲಿಯೂ ತುಂಬಿ ಮೇಜಿನ ಮೇಲೆ ಚೆಲ್ಲಲಾರಂಭಿಸಿತು. ಅಲ್ಲಿಯವರೆಗೂ ಸುಮ್ಮನಿದ್ದ ಉಪನ್ಯಾಸಕ, ತಡೆಯಲಾರದೆ, 'ಗುರುಗಳೇ, ಕಪ್ ತುಂಬಿದೆ. ಅದರೊಳಗೆ ಇನ್ನು ಚಹಾ ಹಿಡಿಸಲಾರದು' ಎಂದ.

Zen Stories Master Nan-In And Professor Tea Cup Of Mind

ಆ ಮಾತನ್ನು ಕೇಳಿದ ತಕ್ಷಣ ಚಹಾ ಸುರಿಯುವುದನ್ನು ನಿಲ್ಲಿಸಿದ ನಾನ್-ಇನ್, ಪಾತ್ರೆ ಬದಿಗಿಟ್ಟು ತಲೆಯೆತ್ತಿ ಹೇಳಿದ, "ಈ ಕಪ್ಪಿನಂತೆಯೇ, ನಿನ್ನ ಮನಸ್ಸು ಕೂಡ ಬೇರೆ ಬೇರೆ ಅಭಿಪ್ರಾಯ ಮತ್ತು ಊಹಾಪೋಹದ ಆಲೋಚನೆಗಳಿಂದ ತುಂಬಿ ತುಳುಕುತ್ತಿದೆ. ನಾನು ನಿನಗೆ ಏನನ್ನೇ ಕಲಿಸಿದರೂ ಅದು ಹೊರಚೆಲ್ಲುತ್ತದೆಯೇ ಹೊರತು, ನಿನ್ನೊಳಗೆ ಹೋಗಲಾರದು. ಮೊದಲು ನಿನ್ನ ಆ ಚಹಾ ಕಪ್ಪನ್ನು ಖಾಲಿ ಮಾಡಿಕೊಂಡು ಬಾ. ಆಮೇಲೆ ಝೆನ್ ಕಲಿಯುವುದರ ಬಗ್ಗೆ ಯೋಚಿಸುವೆಯಂತೆ".

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದುಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

ಆ ಉಪನ್ಯಾಸಕನಿಗೆ ತಾನು ಕಲಿಯಬೇಕಿರುವುದು ಏನು ಎಂಬ ಸತ್ಯದ ಅರಿವಾಯಿತು. ನಾನ್-ಇನ್‌ಗೆ ನಮಸ್ಕರಿಸಿ ಅಲ್ಲಿಂದ ನಿರ್ಗಮಿಸಿದ. ಎರಡು ತಿಂಗಳ ನಂತರ ಮರಳಿ ಬಂದು ನಾನ್ ಇನ್ ಶಿಷ್ಯನಾದ.

English summary
Zen Story of the day: A professor wanted to learn Zen and come to master Nan-in. Nan-in put a tea cup infront of him and poured tea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X