ಆಪ್ತ ಕವನ: ಈ ಅಮ್ಮನಿಗೆ ಯಾವತ್ತೂ ಅನುಮಾನ…

ಈ ಅಮ್ಮನಿಗೆ ಯಾವತ್ತೂಅನುಮಾನ...
ಯಾರು ಎತ್ತಿದರೂ ಅಂದಾಳು 'ಜೋಪಾನ'
ಕೂಸು ಸೊಂಟದಲ್ಲಿದ್ದರೆ ಅದೆಂತಾ ಬಿಗುಮಾನ!
ಎಷ್ಟು ಅಲಂಕರಿಸಿದರೂ ಇಲ್ಲ ಸಮಾಧಾನ
ಯಾರ ದೃಷ್ಟಿ ತಾಕೀತೋ, ಮತ್ತೆ ಅನುಮಾನ!

ಆಕೆಯರಿಯಳೆ ಕಂದನ ಹಸಿವು- ಬಾಯರಿಕೆಯನ್ನ
ಕೂಸು ತೇಗಿದರಷ್ಟೇ ಆಕೆಗೆ ಸಮಾಧಾನ
ತಾನೆಂದಿಗೂ ಉಣ್ಣಳು ಬಿಟುು ಕರುಳ ಬಳ್ಳಿಯನ್ನ
ಅದೆಲ್ಲಿ ಸೊರಗಿತೋ, ಅಮ್ಮನಿಗೆ ಅನುಮಾನ

ಬಿಟ್ಟೇನೆಂದರೂ ಬಿಡಳು ಆಕೆ 'ಕಂದ'ನನ್ನ
ಯಾರು ಬೆೈದಾರು, ಹೆತಡೆದಾರು ಎಂಬ ಚಿಂತೆಯನ್ನ
ಹೇಳ್ವಳು ಕಳಬೇಡ, ಕೊಲಬೇಡ ಎಂಬ ಮಾತನ್ನ
ಕಾಣ್ವಳು ಕಂದನ ಭವಿಷ್ಯದ ಸಿಹಿಗನಸನ್ನ!

Mothers Day Special Kannada poem Lecturer Guruprasad TN

'ಇದೆಂತಾ, ನಿಂಗೊತ್ತಿಲ್ಲ ಈ ಹೊಸ ಜಮಾನ'
'ಕಂದ' ಬೆೈದೇ ಬಿಟ್ಟ 'ಹಳೆಯ' ಅಮ್ಮನನ್ನ
'ಏನೋ ಎರಡು ಮಾತಂದ', ಆಕೆಗಿಲ್ಲ ಅಸಮಾಧಾನ!
ಬಿಡಳಾಕೆ 'ಕಂದನ' ನೊಂದಿಗೆ ಮಾತನ್ನ

'ಆಕೆ' ಬಂದರೂ ಅಮ್ಮನಿಗೆ ಅನುಮಾನ
ಬಿಡಳು 'ಕಂದನಿಗೆ' ಎಲ್ಲಿ ಕುಂದಾದೀತು ಎಂಬ ಭಯವನ್ನ
ಕೊನೆಗೊಮ್ಮೆ ಬೇಸರ, ಜೊತೆಗೆ ನೋವಡಗಿದ ಮೌನ
ಆ ವಾತ್ಸಲ್ಯವೋ ಅದು ಸಾಗರ, ಅರಿತವರರುಂಟೇ ಇದನ್ನ

ಈ ಅಮ್ಮನಿಗೆ ಯಾವತ್ತೂ ಅನುಮಾನ...
-ಗುರುಪ್ರಸಾದ್‌ಟಿ.ಎನ್‌,
ಪತ್ರಿಕೋದ್ಯಮ ಉಪನ್ಯಾಸಕ
ವಿವಿ ಕಾಲೇಜ್, ಮಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+