ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈತರಣಿಯ ದಾಟುವುದೆ ಡಿಕೆ ರವಿಯ ಆತ್ಮ?

By ಕೆ.ವಿ. ಪ್ರಸಾದ್
|
Google Oneindia Kannada News

ಐಎಎಸ್ ಅಧಿಕಾರಿ ದೊಡ್ಡಕೊಪ್ಪಲು ಕರಿಯಪ್ಪ ರವಿಯ ಸಾವಿಗೆ ಕಾರಣವೇನಿರಬಹುದು, ಯಾರು ಕಾರಣರಿರಬಹುದು ಎಂದು ಇಡೀ ಕನ್ನಡ ನಾಡಿನ ಹುಲುಮಾನವರು, ಅವರಿಂದ ಆರಿಸಲ್ಪಟ್ಟ ರಾಜಕಾರಣಿಗಳು, ತನಿಖೆ ನಡೆಸುತ್ತಿರುವ ಸಂಸ್ಥೆಯ ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಯಾವ್ಯಾವ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು ಇದರ ಹಿಂದಿದ್ದಾರೆ ಎಂಬುದು ಕೂಡ ಚರ್ಚೆಯ ವಸ್ತುವಾಗಿದೆ. ಸಿಐಡಿಯಿಂದ ಸಿಬಿಐಗೆ ತನಿಖೆ ವರ್ಗಾವಣೆಯಾಗಿರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೆ? ಅಥವಾ ಇಂಥದೇ ದರಿದ್ರ ವ್ಯವಸ್ಥೆಯಲ್ಲಿ ನಾವು ಉಳಿದ ಜೀವನವನ್ನು ಸಾಗಿಸಬೇಕಾ? ಡಿಕೆ ರವಿ ಸಾವಿನ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆಗೆ ಕನ್ನಡಿ ಹಿಡಿದಂತೆ ಕೆ.ವಿ. ಪ್ರಸಾದ್ ಅವರು ಈ ಕವನ ಬರೆದಿದ್ದಾರೆ.

May DK Ravi's soul rest in peace

ನ್ಯಾಯಮಾರ್ಗದಿ ನಡೆವ
ಜನರಿಗೆ ಬೆಲೆಯಿಲ್ಲ
ದುಷ್ಟರಿಗಿಲ್ಲಿ ಶಿಕ್ಷೆಯು ಇಲ್ಲಾ
ಪ್ರಾಮಾಣಿಕರ ಜೀವಕೆ ಬೆಲೆ ಇಲ್ಲ
ಗೋಮುಖ ವ್ಯಾಘ್ರದ ರಾಜಕಾರಣಿಗಳಿವರೆಲ್ಲ [ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಲಂಚಾವತಾರಿಗೆ ಸತ್ ಚಿಂತನೆಯ ಪೇಳಲು
ಧನ ಸಂಚಯ ಬಿಟ್ಟು ದಾನಿಯಾಗುವನೆ

ತಪ್ಪು ಮಾಡಿದ ಕಡು ಧೂರ್ತರ ಹಿಡಿದು
ಕಠಿಣ ಶಿಕ್ಷೆಯ ನೀಡದಿದ್ದರೆ
ದಕ್ಷ ಅಧಿಕಾರಿ ರವಿಯ ಆತ್ಮವು
ಪರಲೋಕದ ವೈತರಣಿಯ ದಾಟುವುದೇ
ಪ್ರಸ್ತುತ ರಾಜಕಾರಣದ ವ್ಯವಸ್ಥೆ [ಸಾವಿನ ಸುದ್ದಿ ಕೇಳಿ ಸಿಹಿ ಹಂಚಿದ ಶಾಸಕರಾರು?]

ನ್ಯಾಯದಲಿ ನಡೆಯಬೇಡ, ಅನ್ಯಾಯವ ತಡೆಯಬೇಡ,
ಸತ್ಯ ಹೇಳಲು ಬೇಡ, ಅಸತ್ಯ ಖಂಡಿಸಬೇಡ,
ದುಷ್ಟರ ಶಿಕ್ಷಿಸಬೇಡ, ಶಿಷ್ಟರ ರಕ್ಷಿಸಬೇಡ
ಇದುವೇ ರಾಜಕಾರಣದ ಬುದ್ಧಿ, ಬರುವುದಿಲ್ಲ ಇವರಿಗೆ ಒಳ್ಳೆಯಾ ಬುದ್ಧಿ
ಇದುವೇ ಈ ದರಿದ್ರ ವ್ಯವಸ್ಥೆಯಲ್ಲಿ ಬದುಕುವಾ ಪರಿ.

ನೊಂದ ಅಭಿಮಾನಿ
{ಪುರಂದರ ದಾಸರು ಮತ್ತು ಬಸವಣ್ಣನವರ ಕ್ಷಮೆಯೊಂದಿಗೆ}

English summary
Corrupt politicians and bureaucrats have brought the situation in worst condition in Karnataka. DK Ravi's death is perfect example of situation where we are all living. Depicting the plight of common people, KV Prasad has written one Kannada poem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X