ವ್ಯಕ್ತಿಚಿತ್ರಣ ಕಟ್ಟಿಕೊಡುವಲ್ಲಿ ನಿಸಾರ್ ಸಾಧಿಸಿದ ಕೌಶಲ್ಯ
ಕೆ.ಎಸ್.ನಿಸಾರ್
ಅಹಮದ್ ತಮ್ಮ ಸಮಕಾಲೀನ ಹಿರಿಯ ಲೇಖಕ ಮಾಸ್ತಿ ವೆಂಕಟೇಶ ಆಯ್ಯಂಗಾರ್ ಅವರನ್ನು ಕುರಿತು ಬರೆದ href="/literature/poem/2012/0125-gandhi-bazaar-and-masti-venkatesh-iyengar-aid0038.html" target="_blank">ಕವಿತೆ “ಮಾಸ್ತಿ”. ವ್ಯಕ್ತಿ ಚಿತ್ರಣ ಕಟ್ಟಿ ಕೂಡುವಲ್ಲಿ ನಿಸಾರ್ ಸಾಧಿಸಿದ ಕೌಶಲ್ಯವನ್ನು ಈ ಕವಿತೆಯಲ್ಲಿ ಕಾಣಬಹುದು. ಇದು ಮಾಸ್ತಿಯವರ ಒಂದು ದಿನದ ದಿನಚರಿಯನ್ನು ಹಿನ್ನೆಲೆಯಾಗಿಟ್ಟುಕೊಂಡ ಕವಿತೆ. id="toptextpromo">ಕೇವಲ
ದಿನದ ದಿನಚರಿಗೆ ಮಾತ್ರ ಸೀಮಿತಗೊಳ್ಳದೆ ಮಾಸ್ತಿಯವರ ಸಂಪೂರ್ಣ ಬದುಕು, ಸ್ವಭಾವ, ವ್ಯಕ್ತಿತ್ವ, ನಡೆನುಡಿಗಳ ರೂಪ ಸ್ವರೂಪವನ್ನು ವಿವಿಧ ಕೋನಗಳಿಂದ ಅಳೆದು ಕವಿ ನಿಸಾರ್ ಕೊಡುತ್ತಾರೆ. ಈ ಕವಿತೆಯ ನಿರೂಪಕನಿಗೆ ಮಾಸ್ತಿ ಗಾಂಧಿಬಜಾರಿನಲ್ಲಿ ಎದುರಾಗುವ ಪ್ರಕ್ರಿಯೆಯು ಸೋಜಿಗದಂತಿದೆ. ಅವರ ಸಮಯ ಪರಿಪಾಲನೆಯಲ್ಲಿ ತೋರಿಸಿಕೊಡುತ್ತದೆ. ಮಾಸ್ತಿ ಎದುರಾಗಿ ಹಾದು ಹೋದಾಗಲೆಲ್ಲ ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆ ನಗರಕ್ಕೆ ಸಂದಂತೆ ಭಾಸವಾಗುವುದನ್ನು ಸೂಚಿಸುತ್ತಾರೆ. id='are-slot-1' class='oiad oi-axt oiadv'> id='top-searched-articles'>ಮಾಸ್ತಿ
ವಾಸವಾಗಿದ್ದ ಬೆಂಗಳೂರಿನ ಗವಿಪುರಂ ಹಾಗೂ ಸಂಜೆ ಅವರ ತಮ್ಮ ಗೆಳೆಯರ ಸಂಸರ್ಗಕ್ಕಾಗಿ ನಡೆದು ಬರುತ್ತಿದ್ದ ಗಾಂಧಿಬಜಾರಿನ ಕ್ಲಬ್ಬನ್ನು ಈ ಕಾಲದ ಓದುಗನ ಕಣ್ಣಿಗೆ ಕಟ್ಟುವಂತೆ ಕವಿ ಚಿತ್ರಿಸುತ್ತಾರೆ. ಮಾಸ್ತಿಯವರನ್ನು ನೋಡುವುದೆಂದರೆ ಕಳೆದುಹೋದ ಜೀವನದೊಂದು ರೀತಿಯನ್ನು ಹಾಗೂ ಸರಳ ಸದಭಿರುಚಿಯ ಖ್ಯಾತಿಯನ್ನು ಸ್ಪರ್ಶಿಸಿದಂತೆ ಎಂದು ಹೇಳುವ ಮೂಲಕ ಅವರ ಬಗೆಗಿನ ಗೌರವ ಇಮ್ಮಡಿಗೊಳ್ಳುವಂತೆ ನಿಸಾರ್ ಈ ಕವಿತೆಯನ್ನು ಬರೆದಿದ್ದಾರೆ.











Click it and Unblock the Notifications