ಭಾವದಾ ತುಡಿತ, ಮೋಹದಾ ಮಿಡಿತ, ಯಾರು ನೀ?

ಜ್ವಾಲೆಯಾ ಉರಿಯು ನೀ
ಗಾಳಿಯಾ ವೇಗ ನೀ
ಭಾವದಾ ತುಡಿತ ನೀ
ಮೋಹದಾ ಮಿಡಿತ ನೀ
ಪ್ರೀತಿಯಾ ಸೆಳೆತ ನೀ
ಬಸಿರಿನಾ ಹಸಿರು ನೀ
ಹಸಿರಿನಾ ಉಸಿರು ನೀ
ಉಸಿರಿನಾ ಪ್ರಾಣ ನೀ
ಒಳಗಿನಾ ಧ್ವಂದ್ವ್ಹ ನೀ
ಹೊರಗಿನಾ ಛಂದ ನೀ
ಎನ್ನ ಒಳ ಹೊರಹುಗಳೆಲ್ಲವ ತಿಳಿದೊಬ್ಬನೇ ನೀ
ಜ್ಞಾನದಾ ಉಕ್ತಿ ನೀ
ಭಕ್ತಿಯಾ ಶಕ್ತಿ ನೀ
ಕರ್ಮದಾ ಫಲವು ನೀ
ಭಕ್ತಿಯಾ ಶಕ್ತಿ ನೀ
ಕರ್ಮದಾ ಫಲವು ನೀ
ನಿನ್ನೊಳಗೆ ನಾನಿಹೆನೋ?
ಎನ್ನೊಳಗೆ ನೀನಿಹೆಯೋ?
ತಿಳಿಯದಾ ಮರ್ಮವನು ಹಾಗೆ ಬಿಡಲುಂಟೇನು?












Click it and Unblock the Notifications