ಜಿಜ್ಞಾಸೆ

ಮನುಷ್ಯಪ್ರಯತ್ನಕ್ಕೆ ಏನು ಅರ್ಥ?
ಬ್ರಹ್ಮನೇ ಸಕಲವನ್ನೂ ಬರೆದುಬಿಟ್ಟರೆ
ಮಾನವಯತ್ನವೆಂಬುದು ವ್ಯರ್ಥ
ಹಾಗೆಂದು, ನಮ್ಮ ಕೈಯಲ್ಲಿದೆಯೇ
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ಹುಟ್ಟು ನನ್ನಧೀನದಲ್ಲಿರಲಿಲ್ಲ,
ಸಾವು ನನ್ನಧೀನದಲ್ಲಿರದು;
ನಡುವಿನ ಜೀವನ ನನ್ನದು
ಎಂದುಕೊಂಡರೆ ಅದೂ ಎಷ್ಟೋ ಸಲ
ನನ್ನಧೀನಕ್ಕೆ ಬರದು
ಇದೆಲ್ಲ ತಂತಾನೆಯೇ?
ಅಥವಾ ನಿಯಾಮಕನಿದ್ದಾನೆಯೇ?
ತಂತಾನೇ ಎಂದಾದರೆ
ಜೀವನಕ್ಕಿಲ್ಲ ಅರ್ಥ;
ಮೌಲ್ಯವೆಂಬುದಕ್ಕೂ ಅರ್ಥವಿಲ್ಲ,
ವಿಶ್ವಕ್ಕೂ ಇಲ್ಲ ಅರ್ಥ.
ಆದರೆ, ವಾಸ್ತವ ಹೀಗಿಲ್ಲ.
ಸೃಷ್ಟಿಯ ಕಣಕಣದಲ್ಲೂ
ಬಾಳಿನ ಕ್ಷಣಕ್ಷಣದಲ್ಲೂ
ಗೋಚರಿಸುತ್ತಿದೆಯಲ್ಲ
ಅರ್ಥಗಳ ಮಾಲೆ!
ಇದುವೇ ವಿಧಿಲೀಲೆ!
ಅಂದಮೇಲೆ,
ವಿಧಿಯುಂಟು;
ವಿಧಿಲಿಖಿತ ಉಂಟು.
ಜೊತೆಯಲ್ಲೇ,
ಬಾಳಿನ ನಿಧಿಯಾದ
ಸ್ವಪ್ರಯತ್ನಗಳಿಗೂ
ನೆಲೆಯುಂಟು,
ಬೆಲೆಯುಂಟು.
ವಿಧಿಲಿಖಿತಕ್ಕೂ ಸ್ವಪ್ರಯತ್ನಕ್ಕೂ
ಪರಸ್ಪರ ನಂಟು











Click it and Unblock the Notifications