ತಂದೆಯ ಮನಸ್ಸು ಮತ್ತು ಕವಿತೆಯ ಕಣ್ಣು

ನನ್ನ ಕವನದ ಬಗೆಗೆ ಅನೇಕರ ಬಗೆಬಗೆಯ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. ಹಲವು ಸ್ನೇಹಿತರು ಸರಿಯಾಗಿ ಗುರುತಿಸಿರುವಂತೆ ಕವನದ ಜೀವಾಳ ಮಕ್ಕಳ ಆಸೆಯ ತಂದೆಯ ಮನಸ್ಸು ಮತ್ತು ಮಹಾರಾಜ ಧೃತರಾಷ್ಟ್ರನ ಬಗ್ಗೆ ಅಚ್ಚರಿ ಅಷ್ಟೆ! ಕವಿತೆಯ ಅರ್ಥ ಹುಟ್ಟ ಬೇಕಾಗಿದ್ದು ಸಹೃದಯ ಓದುಗನ ಅಂತರಾಳದಲ್ಲಿ. ಹಾಗಾಗಿ ಕವಿತೆಯನ್ನು ವಿವರಿಸಲು ಹೋಗುವುದಿಲ್ಲ. ಒಬ್ಬ ಕವಿ ತನ್ನ ಕವಿತೆಯನ್ನು ತಾನೇ ವಿವರಿಸುವುದು ಕವಿತೆಯ ಸಾಧ್ಯತೆಯನ್ನೇ ಕೊಂದಂತೆ.
ಕವಿತೆಯ ಬಗ್ಗೆ ಮಹಾಜನತೆ ತೋರಿದ ಆಸಕ್ತಿ, ಕುತೂಹಲ ಮತ್ತು ಹಲಕೆಲವು ಜಿಜ್ಞಾಸೆಗಳಿಗೆ ನಾನು ಮೇಲೆ ಹೇಳಿದ ಟಿಪ್ಪಣಿ ಬಿಟ್ಟರೆ ಮತ್ಯಾವ ಮಾರುತ್ತರವೂ ನನ್ನಿಂದ ಇಲ್ಲ. ಅಂದಹಾಗೆ, ನನ್ನ ಕವನಕ್ಕಿಂತ ಮಹಾಕಾವ್ಯ ಮಹಾಭಾರತ ಬಗ್ಗೆ ವ್ಯಕ್ತಪಡಿಸಿದ ಕಾಳಜಿಗೆ ಓದುಗ ಮಿತ್ರ ಸಾಗರಕ್ಕೆ ನಮೋನ್ನಮಃ.
ಇಂತಿ ನಿಮ್ಮ ಪ್ರೀತಿಯ,
ವಿದ್ಯಾಶಂಕರ ಹರಪನಹಳ್ಳಿ











Click it and Unblock the Notifications