ಕವನ: ಅನಾಮೃತ ಗಿಡ ನಾನು ಪಾಪಾಸು ಕಳ್ಳಿ
*ಸತೀಶ್ ಚಾರ್
ಅಮೃತವ ತುಂಬಿದ
ಅನಾಮೃತ ಗಿಡ ನಾನು
ಪಾಪಾಸುಕಳ್ಳಿ
ಹಚ್ಚ ಹಸಿರಾಗಿರುವೆ
ಎಲ್ಲರಂತೆ ರೂಪವಂತೆ
ಋಣವಂತೆ ಗುಣವಂತೆ
ಒಡಲಲ್ಲಿ ತುಂಬಿರುವುದು
ಬಿಳಿಯ ಅಮೃತ ಎನಗೆ
ಹೊರಗೆ ಕಳ್ಳಿಹಾಲದು ನಿಮಗೆ
ನಾನೇನು ಮಾಡಲಿ
ಭೂದಾಯಿ ಪ್ರೀತಿಯಲಿ
ಉಣಿಸಿದಳೆನಗೆ
ಕಾಮಧೇನುವಿಗೆ ಸಮನಾಗಲಿಲ್ಲ್ಲ
ನಾನೆರೆಸಿದ ಅಮೃತಗಳ್ಳಿ
ನನ್ನೊಳಗಿನ ಶ್ವೇತಗಳ್ಳಿ.
ಆದರೇನು ಮಾಡಲಿ
ತಾಯಿಯಾಲೆ ನಂಜಾಯಿತೆ
ಎನಗೆ
ಮುಳ್ಳುಗಳ್ಳಿದ್ದರು ಚೆಲುವಾಯಿತು
ಗುಲಾಬಿ ಗಿಡವು
ಚಂದದಲಿ
ಮುಳ್ಳುಗಳನೊಂದಿದ್ದರು ಅಂದದಲಿ
ಗೆಲುವು ಎನಗಾಗಲಿಲ್ಲ ನಾನು
ಮುಳ್ಳು ಗಿಡವಂತೆ
ಗುಲಾಬಿ ಬೆಳೆಯಿತು
ಅಂದದರಮನೆಯಲ್ಲಿ
ಎಲ್ಲರ ಮುದ್ದಿನ ಕಣ್ಮಣಿಯಾಗಿ
ನಾನು ಹುಟ್ಟಿದೆ ಕಾಡಿನಲಿ
ಬೆಳೆಯುತ್ತಿದ್ದೇನೆ ಗಡಿಯಲ್ಲಿ
ಎಲ್ಲರ ನೀಚದೃಷ್ಟಿ, ನಿಕೃಷ್ಠ ನೋಟದಲ್ಲಿ
ಕಾಯುತ್ತಿರುವೆನು ಎಲ್ಲರ
ಗಡಿಗಳನ್ನು ನಿಷ್ಠೆಯಿಂದ
ತಡೆಯುತ್ತಿರುವೆ ದುಷ್ಟತನಗಳನ್ನ
ಚುಚ್ಚಿದರೆ ನೋವು ಕಣ್ಣೀರಾಗಿ
ಕಣ್ಣೀರು ರಕ್ತವಾಗಿ; ರಕ್ತ ಹಾಲಾಗಿ;
ಸುರಿವುದು ಜೋರಾಗಿ


Click it and Unblock the Notifications
