ಜಯ ನಾಯಕ್ ಅವರ ಕವನ ಮನಸು
*ಜಯ ನಾಯಕ್
ಉಕ್ಕೇರುತ್ತಿರುವ ಭಾವನೆಗಳ ಅದುಮಿ
ಕಣ್ಣಿಂದು ಜಲಧಾರೆಯೇಕೆ ಗೆಳತಿ?
ವಸಂತ ಮಾಸದ ನವಚಿಗುರಂತೆ
ಎನ್ನ ಮನಕೆ ತಂಪನೀಡು ಗೆಳತಿ
ತನು ಬೇರೆಯಾದರೇನಾಯಿತು ನಮ್ಮಿಬ್ಬರ
ಮನ ಒಂದೇ ಅಲ್ಲವೆ?
ಇಂದೆನ್ನ ಹೃದಯಮಂದಿರದಲ್ಲಿರುವೆ
ಮುಂದೊಮ್ಮೆ ಸತಿಯಾಗಿ ಮನೆಗಡಿಯಿರಿಸುವೆ
ನಿನ್ನ ಸರಳತೆಗೆ ಮೆಚ್ಚಿ ನಾ ನಿನ್ನ
ವರಿಸಬೇಕೆಂದುಕೊಂಡೆನೋ ಅಥವಾ
ಆ ನಿನ್ನ ಸುಲಲಿತ ನುಡಿಯನಾಲಿಸಿ
ನಿನ್ನ ಬಯಸಿದೆನೋ ನಾನರಿಯೆ
ಆದರಿಂದು ನನ್ನೆದೆಯ ಅಂತರಾಳದಲಿ
ನಿನ್ನ ನೆನಪಿನ ವೃಕ್ಷ ಬೇರುಬಿತ್ತಿಹುದು
ಕ್ಷಣ ಕ್ಷಣವೂ ನಿನ್ನ ಸಂಘ ಬಿಟ್ಟಿರಲಾಗದೆ
ಮನದೊಳಗೆ ಕಣ್ಣೀರು ಮಿಡಿಯುತಿಹೆನು
ಆದರಿಂದುನನಗೆ ನಿಜವನರುಹದೆ ವಿಧಿಯಿಲ್ಲ
ನನಗಿಂದು ನಿನಗಿರುವನೆ ಬೇರೆ ನಲ್ಲ
ಇಲ್ಲಿವರೆಗೆ ನಾ ನಿನಗಾಗಿ ಪರಿತಪಿಸಿದೆನಲ್ಲ
ಇದಕ್ಕಿಂತ ನನಗೆ ಬೇರೆ ಬೇಕೆ ಬೇವು-ಬೆಲ್ಲ


Click it and Unblock the Notifications
