ಜಾಸ್ತಿ ಇಲ್ಲ, ಬರೀ ನಾಲ್ಕೇ ನಾಲ್ಕು ..
ನಾಲ್ಕೇ ನಾಲ್ಕು ಸಾಲು ಇದು. ಕವನ , ಕಾವ್ಯ ಅಥವಾ ಇನ್ಯಾವುದೋ ಎಂದು ಆರೋಪಿಸಬೇಡಿ.... ಸುಮ್ಮನೇ ನಾನು ನನಗಿಷ್ಟ ಎಂದು ಬರೆದೆ.ಅದು ನಿಮ್ಮ ಇಷ್ಟವೂ ಆದೀತು..
1
ಮುಗಿಲನ್ನು ನೋಡಿ
ಕಾಲಾಂತರದಿಂದ ಜನ
ಕಾವ್ಯ ಬರೆದರು
ಚಿತ್ರ ಬಿಡಿಸಿದರು
ಯಾರೂ
ಮುಗಿಲನ್ನು ಮುಟ್ಟಲೇ ಇಲ್ಲ
ಮುಗಿಲು
ಸ್ಪರ್ಶಾತೀತ
2
ಒಳಗೊಂದು
ಸಣ್ಣ ದೀಪಕ್ಕೆ
ಪೂರ್ತಿ ಬೆಳಕಾಗಿದ್ದವಳು
ಹೊರಗಿನ ಕಡುಗತ್ತಲೆಯಲ್ಲಿ
ಬೀಸಿದ ಮಿಂಚ ಹಿಡಿಯಲೋಡಿದಳು
ಆಮೇಲೆ
ಒಳಗಿನ ದೀಪ ಉರಿಸಲು
ಅವಳಿಗೆ .....
ಆಗಲೇ ಇಲ್ಲ.
3
ಬಿಸಿಲಲ್ಲಿ ನಡೆಯತ್ತಾ
ಅವನು ಬಸವಳಿದ
ಮಳೆ ಬರಲಿ ಎಂದ
ಮಳೆ ಬಂತು
ಅವನು ಮಳೆಯಲ್ಲಿ ನೆನೆದ
ಆಮೇಲೆ ಬಿಸಿಲಿಗಾಗಿ
ಹುಡುಕಾಡಿದ
ಬಿಸಿಲು ಮಳೆಯಲ್ಲಿ
ಲೀನವಾಗಿತ್ತು.
ಅವನು ಕಾಣಲಿಲ್ಲ..!
4
ಇನ್ನೊಂದು ಊರಿನಲ್ಲೂ
ಇದೇ ಬಾನು
ಇದೇ ಸೂರ್ಯ
ಮತ್ತು ತಾರೆ ಚಂದಿರ ಹೀಗೇ..
ತೋರಬಹುದು.
ಆದರೆ
ಅಲ್ಲಿ ಅದನ್ನು ಕಾಣುವ
ಮನಸು
ಈ ಊರಿನ
ಬಾನು ಅಥವಾ ತಾರೆಗಳಂತೆ
ಇರಲಾರದು
ಇದೇ ಜಗತ್ತಿನ ಸಂಹಿತೆ.
(ಕೃಪೆ :http://kuntini.blogspot.com/)












Click it and Unblock the Notifications