ಕಳೆದು ಹೋಗಿದೆ ನನ್ನ ಬಾಲ್ಯವು
- ಚಂದ್ರಗೌಡ ಕುಲಕರ್ಣಿ
[email protected]
ಕಳಚಿ ಕೊಂಡಿದೆ ಕರುಳ ಬಳ್ಳಿಯು!
ಕುದುರೆ ಕುಕ್ಕೋಟದಲ್ಲಿ
ಗಾಣದೆತ್ತಿನಾವರ್ತದಲ್ಲಿ‰‰‰ ಕಳೆದು...
ಪಠ್ಯಪುಸ್ತಕ ಭಾರದಲ್ಲಿ
ಪಾಠ- ಮನೆ ಪಾಠಗಳಲಿ
ಕಂಠಪಾಠ ಉರುಹೊಡೆಯುವಲ್ಲಿ
ಹೋಂವರ್ಕ ಜಂಜಾಟದಲ್ಲಿ‰‰ ‰ಕಳೆದು...
ತಂದೆ- ತಾಯ್ ಅತಿ ನಿರೀಕ್ಷೆಯಲ್ಲಿ
ಬಂಧು- ಬಾಂಧವರತಿರಕ್ಷೆಯಲ್ಲಿ
ಶಿಕ್ಷಕರ ಅತಿ ಶಿಸ್ತಿನಲ್ಲಿ
ರ್ಯಾಂಕು ಪುರಸ್ಕಾರಗಳಲಿ‰‰‰ ಕಳೆದು...
ಟಿ.ವಿ. ಪರದೆಯ ಚಿತ್ರಗಳಲಿ
ಜಾಹಿರಾತಿನ ಪ್ರೇತಗಳಲಿ
ಮಾರುಕಟ್ಟೆ ಬಿರುಗಾಳಿಯಲ್ಲಿ
ತಾರಾ ಸಂಸ್ಕೃತಿ ಭ್ರಮೆಗಳಲ್ಲಿ‰‰ ಕಳೆದು...
ಮಾಹಿತಿಗಳ ಮಾರ್ಜಾಲದಲ್ಲಿ
ಕುಶಲ ತಂತ್ರ- ಯಾಂತ್ರಿಕತೆಯಲಿ
ತರಾತುರಿಯ ತುರ್ತಿನಲ್ಲಿ
ಮರಳು ಅರೆವ ಅರೆ ಹುಚ್ಚಿನಲ್ಲಿ‰ ಕಳೆದು...
ಐ.ಟಿ.-ಬಿ.ಟಿ. ಅಬ್ಬರದ ಅಲೆಯಲಿ
ಮೇಲ್-ಮೊಬೈಲ್ ಐಲುಗಳಲಿ
ಜಾಲ- ಅಂತರ್ಜಾಲದಲ್ಲಿ
ರೂಪಿ- ತದ್ರೂಪಿಗಳಲಿ ‰‰‰ ಕಳೆದು...
ಕೊ ಕೊ ಕೋಲಾ ಪೆಪ್ಸಿಗಳಲಿ
ಬ್ರೆಡ್-ಕೇಕ್-ಬೋರ್ನ ವೀಟಗಳಲಿ
ಬಳಸಿ ಎಸೆವ ವಸ್ತುಗಳಲಿ
ಸರಕು ಸಂಸ್ಕೃತಿ ಬಿರುಕುಗಳಲ್ಲಿ ಕಳೆದು...
ಕುದುರೆ ಕುಕ್ಕೋಟದಲ್ಲಿ
ಗಾಣದೆತ್ತಿನಾವರ್ತದಲ್ಲಿ‰‰‰ ಕಳೆದು...
More From
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications