ಸರಳತೆ
- ಶ್ರೀಪಾದ ವಿ. ಹೆಗಡೆ
E-mail : [email protected]
ವಿಷದ ವಿಷಯವ ಬಾಳಲಿ ಬೆರಸಿವಿಷಾದ ಪಡುತಿದೆ, ಈ ಎನ್ನ ಬದುಕು
ಸರಳ ಬದುಕನು ಬದಿಗೆ ಸರಿಸಿ
ಸೋತು ಸೋರಗಿದೆ ಜೀವನ ವನವು
ಹೊಲಸುಗೊಂಡಿದೆ ದೇಹದ ಗುಡಿಯು
ಗಡಿಯ ಮೀರಲು ಎಲ್ಲ ನಡೆ-ನುಡಿಯು
ಹೂತುಹೋಗಿದೆ ಬಾಳ ರಥವು
ಗೊತ್ತಿಲ್ಲದೆ ಸಮರಸ, ಒಲವು
ಕೊರಗಿ ಕೊರಗಿ ಸೋತಿದೆ, ಈ ಎನ್ನ ಬದುಕು
ಕಡಿದು ಕೆಡಿಸಿಲು ನಾ ಅದನು, ಅದರಲ್ಲಿ ನಿಂತು
ಸವೆದು ಸವೆದು ಸಣ್ಣಾಗಿದೆ, ಆ ನನ್ನ ಬದುಕು
ಸಾಕುಮಾಡದೆ ಮನವು ಬೇಡಲು, ಮನಬಂದಲ್ಲಿ ತಾ ನಿಂತು
ಸೇಡಿನ ರಣಹದ್ದು ಕುಕ್ಕಿ ತಿನುತಿರಲು
ಸಿರಿವಂತಿಕೆಯಾ ಬಯಕೆ ಬಳಲಿಸಿರಲು
ಕರುಣೆಯ ಅದು ಬಹು ದೂರ ತೊರೆದಿರಲು
ಕಾಪಾಡುವರು ಅದನು ಇಲ್ಲಾರು ?
ಕುಹಕ ನಡೆ-ನುಡಿಯೇ ಅದರ ಇಂದಿನ ಮಧುಪಾನ
ಕಣ್ಣಿಗೆ ಕಾಣುವುದು ಬರಿ ಕುರುಡು ಕಾಂಚಾಣ
ಮರ್ಕಟ ಮನದ ವಶವಾದುದೇ ಎಲ್ಲದಕು ಕಾರಣ
ಮರುಗಿದರೆ ಅಗುವದಿಲ್ಲ ಅದರ ಕಲ್ಯಾಣ
ಬೇಕಾಗಿದೆ ಬಾಳಿಗೆ ಹಸಿರು ಮೇವು
ಸರಿಸಿ ಮನದ ಬಾಗಿಲ ಹುಡುಕುವ ನಾವು
ಬಾಡಿ ಬಸವಳಿದು, ಕೊರಗಿ ಮರಗುವ ಜೀವನಕೆ
ಯ ಸಂಜೀವಿನಿ ಕೊಡೋಣ ನಾವು
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ











Click it and Unblock the Notifications