ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ
- ಪರಶಿವ ಧನಗೂರು,
ಧನಗೂರು ಗ್ರಾಮ ಮತ್ತು ಅಂಚೆ, ಮಳವಳ್ಳಿ ತಾಲೂಕು, ಮಂಡ್ಯ ಜಿಲ್ಲೆ - 571430.
ಬೆನ್ನು ಬಿದ್ದಿದೆ ಸಮಯದ ಬೇತಾಳಸರಸರನೆ ಸರಿದು ಹೋಗುತ್ತಿದೆ ; ಕಾಲದ ಜೊತೆ ಬದುಕು !
ಕಾಣದ ಭವಿಷ್ಯವಿಲ್ಲಿ
ಇತಿಹಾಸವಾಗಲು ಹವಣಿಸುತ್ತಿದೆ ; ವಾಸ್ತವದೊಳಗೆ ಇಣುಕಿ !
ಪ್ರಪಂಚಕ್ಕೆ ವಯಸ್ಸಾಗುತ್ತಿದೆ !
ಎಲ್ಲರ ಮೇಲು ಸಮಯದ ಭಾರ ; ಎಲ್ಲರಿಗೂ ಸಮಯದ ಅಭಾವ !
ಹೀಗಾಗಿ ; ಅವಸರ- ಉದ್ವೇಗ
ಆರೋಹಣವಿಲ್ಲದೆ ಶಿಖರ ಮುಟ್ಟುವಾಸೆ !
ಕಾಲವನ್ನೆ ಕೈಲಿಡಿದು ಕುಣಿಸುವ ಕಲೆಗಾಗಿ ಹುಡುಕಾಟ !
ಇತಿಹಾಸ ಮೀರುವ ತವಕ !
ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು












Click it and Unblock the Notifications