ಪಂಚಾರತಿ
- ಸುಪ್ತ ದೀಪ್ತಿ , ಮಣಿಪಾಲ
[email protected]
ಪಕ್ಕದಲ್ಲೊಬ್ಬ ಗಂಡ,
ಬಗಲಲ್ಲೊಬ್ಬ ಗುಂಡ,
ಇವೇ ನಿನ್ನ ಗುರಿಯಾದರೆ
ಹೆಣ್ಣೇ, ಬಾಳು ದಂಡ
*
ಶ್ರೀ ಹರಿಹರೇಶ್ವರ ಅವರಿಗೆ-
ನಮ್ಮೀ ಸಹೃದಯ ಮೇಷ್ಟ್ರು ಬಹಳ ಸ್ಟ್ರಿಕ್ಟು,
ಮೊಂಡು ವಿದ್ಯಾರ್ಥಿಯರನ್ನೂ ಹಿಡಿದಿಟ್ಟು-
ಹೋಂವರ್ಕ್ ಮಾಡಿಸುವ ಗಟ್ಟಿತನದ ಗುಟ್ಟು
ಅವರೊಬ್ಬರಿಗೇ ಗೊತ್ತು ; ಇದೋ ನನ್ನ ಸೆಲ್ಯೂಟ್.
*
ಬೀಗರಿಗೆ ಪತ್ರ
ನಮ್ಮ ಹುಡುಗಿ ಬಸುರಿದ್ದವಳು
ಬಾಣಂತಿಯಾದಳು,
ನಿಮ್ಮ ಮನೆಯಲಿ ನಗುವನು ಹರಡಲು
ಮಗುವನ್ನಿತ್ತಳು.
*
ನಮ್ಮ ಬೆನ್ನ ಮೇಲೆ...
ಕನ್ನಡ ಕೂಟದ ಕಾರ್ಯಕ್ರಮ,
ಬಣ್ಣದ ಲೋಕದ ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ ನಡುವೆ-
ವೇದಿಕೆ ಮೇಲೆ ಏನಾಗ್ತಿದೆ, ಸ್ವಲ್ಪ ಹೇಳಮ್ಮ !
*
ಸಾಕ್ಷಿ
ಜಾಲಿಯ ಮರದಲಿ ಗೀಜಗನ ಗೂಡು,
ಮುಳ್ಳೂ ಮನೆಯಾಗಬಹುದೆಂಬ ಸಾಕ್ಷಿ ;
ಆಲದ ಬೀಳಲ ಜೋಲಿಯಲ್ಲಿ ನಗು,
ಎಲ್ಲೂ ಮಮತೆ ಮಡಿಲು ಇಹುದೆಂಬ ಸಾಕ್ಷಿ .
ಚಳಿ-ಚುಟುಕು












Click it and Unblock the Notifications