ನನಗೆ ಮೊದಲೆ ಗೊತ್ತಿದ್ದರೆ...
- ಚಂದ್ರಮ
E-mail : [email protected]
mp;#3221;ೊನೆಯಬಾರಿನೀನು ಮಲಗಿ ಏಳಲಾರೆಯೆಂದು
ಇನ್ನಷ್ಟು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದೆ
ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೆ
mp;#3221;ೊನೆಯಬಾರಿ
ನೋಡುವೆನೆಂದು ನೀ ಬಾಗಿಲ ಹೊರಗೆ ಹೋಗುವುದನ್ನ
ನಿನ್ನ ತಬ್ಬಿ ಮುದ್ದಾಡುತ್ತಿದ್ದೆ
ಹೋಗಿ ಬಾ ಎಂದು ಹೇಳಿರುತ್ತಿದ್ದೆ
mp;#3221;ೊನೆಯಬಾರಿ
ನಿನ್ನ ಬಾಯಿಂದ ನನ್ನ ಹೆಸರು ಕೇಳುವೆನೆಂದು
ಇನ್ನೊಮ್ಮೆ ಹೆಸರಿಡಿದು ಕರೆಯೆಂದು ಕೇಳಿಕೊಳ್ಳುತ್ತಿದ್ದೆ
ನಿನ್ನ ಧ್ವನಿಯ ನಕಲು ಮಾಡಿಕೊಳ್ಳುತ್ತಿದ್ದೆ
mp;#3221;ೊನೆಯಬಾರಿ
ನಿನ್ನ ಜೊತೆ ನನ್ನ ಸಮಯ ಕಳೆಯುವೆನೆಂದು
ನಿನಗೆ ಹೊಸದೆನಿಸದಿದ್ದರೂ ಹೇಳಿರುತ್ತಿದ್ದೆ
ನಾ ನಿನ್ನ ಪ್ರೀತಿಸುತ್ತೆನೆಂದು, ಪ್ರೀತಿಸುತ್ತಿರುತ್ತೇನೆಂದು
mp;#3221;ೊನೆಯಬಾರಿ
ನಾಳೆ ಬರದು ಎಂದು
‘ಕ್ಷಮಿಸು’, ‘ಸ್ಸಾರಿ’ ಎಂದಿರುತ್ತಿದ್ದೆ
‘ಧನ್ಯವಾದಗಳು’, ‘ಥ್ಯಾಂಕ್ಯೂ’ ಹೇಳಿರುತ್ತಿದ್ದೆ
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ











Click it and Unblock the Notifications