ಶಬ್ದವೇ ಭಗವಂತನೆಂದ ಲೌಡ್ ಸ್ಪೀಕರ್ ಕಥೆಯಿದು..
ಸಂಗ್ರಹ : ಶ್ರೀಮತಿ ಶಶಿರೇಖ ವಿ. ಪರಾಂಜಪೆ, ಮೈಸೂರು
ಕರ್ಣ ಮಂಡಲ ಮಧ್ಯದೊಳಗೆ
ನೆತ್ತಿಯಿಂದ ಸ್ವಲ್ಪ ಕೆಳಗೆ
ತಮಿಳು ಚಿತ್ರದ ಗೀತೆಯಾಂದು
ಅರಚಿ ಕೊರೆಯುತಲಿದ್ದಿತು
ಚೌತಿ ಗಣಪ ನೀನು ಬಾರೋ
ನವಮಿ ರಾಮ ಓಡಿ ಬಾರೋ
ಏಸುಕ್ರಿಸ್ತನೆ ಬೇಗ ಬಾರೋ
ಎಂದು ಸ್ಪೀಕರು ಕರೆಯಲು
ದೇವ ನಮ್ಮನು ಕ್ಷಮಿಸಬೇಕು
ಚಿತ್ರಗೀತೆಯ ಕೇಳಬೇಕು
ನೀನು ಒಂದನು ಹಾಡಬೇಕು
ಎಂದು ಸ್ಪೀಕರು ಕೊರೆಯಲು
ತೆಲುಗಿನಲ್ಲಿ ತೆಂಗು ಚೆನ್ನ
ತಮಿಳಿನಲ್ಲಿ ಬಳ್ಳಿ ಚೆನ್ನ
ಕನ್ನಡಿಗನ ಗೀತೆ ಚೆನ್ನ
ಸ್ಪೀಕರರಚುತಲಿದ್ದಿತು
ಲೌಡ್ ಸ್ಪೀಕರ್ ಕಥೆಯ ಕೇಳಿ
ಎಲ್ಲ ದೇವರು ಬಂದು ನಿಂತು
ಕಣ್ಣಿನಿಂದ ನೀರು ಸುರಿಸಲು
ಅಲ್ಲಿ ತುಂಬಿತು ಬಿಂದಿಗೆ
ಯಾವಗೀತೆ ಕೇಳಲಮ್ಮ
ಯಾವ ಗೀತೆ ಹಾಡಲಮ್ಮ
ಯಾವ ಗೀತೆ ಮೆಚ್ಚಲಮ್ಮ
ಯಾರು ನನಗೆ ಹಿತವರು
ಮುಂದಿನಿಂದ ಅರಚಬೇಡಿ
ಹಿಂದಿನಿಂದ ಕೂಗಬೇಡಿ
ಕಿವುಡನಲ್ಲ ಎಂದು ತಿಳಿಯಿರಿ
ದೇವ ನಿನ್ನ ಗಣಪನ
ಇಲಿಯನೇರಿ ಹೊರಟ ಗಣಪನು
ಕೇಳಲಾರದೆ ಮೂರ್ಛೆ ಹೋದನು
ನೀರಿನಲ್ಲಿ ಅದ್ದಿ ಬಿಟ್ಟರು
ತಬ್ಬಲಿಯನೀ ಗಣಪನ












Click it and Unblock the Notifications