ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ಬೆಂಗಳೂರಿನ ಶಿಲ್ಪಿ ಶೇಷಾದ್ರಿ ಐಯ್ಯರ್

By Prasad
|
Google Oneindia Kannada News

Kumarapuram Sheshadri Iyer
ಬೆಂಗಳೂರು ಲಾಲಬಾಗ್‌ನ ಗಾಜಿನಮನೆ, ವಿಕ್ಟೋರಿಯಾ ಆಸ್ಪತ್ರೆ, ಕೋಲಾರದ ಚಿನ್ನದ ಗಣಿ ಸ್ಥಾಪನೆಗಳಿಗೆ ಕಾರಣರಾದ ಕುಮಾರಪುರಂ ಶೇಷಾದ್ರಿ ಅಯ್ಯರ್ ಅವರು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ನೀಡಿದ ಕಾಣಿಕೆ ಮರೆಯಲಾಗದ್ದು. ಮೈಸೂರು ದಿವಾನರಾಗಿ ಕಾರ್ಯ ನಿರ್ವಹಿಸಿದ್ದ ಅಯ್ಯರ್ ಅವರನ್ನು ಅವರ ಜನ್ಮದಿನ(ಜೂನ್ 1, 1883)ದಂದು ನೆನೆಯೋಣ.

* ಕೃಪೆ : ಮೂರ್ತಿ ಪೂಜೆ

ದಿವಾನ್ ಶೇಷಾದ್ರಿ ಐಯ್ಯರ್ ಅವರು ಓಡೆಯರ ಕಾಲದಲ್ಲಿ ಮೈಸೂರಿನ ದಿವಾನರಾಗಿದ್ದರು. ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನ ಸರ್ವೊತೊಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಆಧುನಿಕ ಬೆಂಗಳೂರಿನ ಶಿಲ್ಪಿಯೆಂದೇ ಪ್ರಸಿದ್ಧರಾಗಿದ್ದಾರೆ. ಇವತ್ತು (ಜೂನ್ 1) ಅವರ ಹುಟ್ಟಿದ ದಿನ. ಬನ್ನಿ ಕಬ್ಬನ್ ಉದ್ಯಾನವನದಲ್ಲಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ. ಈ ಮೂರ್ತಿಯನ್ನು ನವೆಂಬರ್ 20, 1913ರಲ್ಲಿ ಸ್ಥಾಪಿಸಲಾಗಿದೆ.

ದಿವಾನ್ ಶೇಷಾದ್ರಿ ಐಯ್ಯರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದಲ್ಲಿ ಮೈಸೂರಿನ ದಿವಾನರಾಗಿ (1883ರಿಂದ 1901ರವರೆಗೆ) ಕೆಲಸ ಮಾಡಿದರು. 1898ರಲ್ಲಿ ಬೆಂಗಳೂರು ಪ್ಲೇಗ್‌ನಿಂದ ತತ್ತರಿಸಿದಾಗ ಊರಿನ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ಜನರಲ್ಲಿ ನೈರ್ಮಲ್ಯ ಮತ್ತು ಆರೊಗ್ಯದ ಬಗೆಗಿನ ಕಾಳಜಿಯನ್ನು ಹೆಚ್ಚಿಸಿದ್ದರು. ಹಲವು ಕಡೆ ಚರಂಡಿಗಳನ್ನು ತೋಡಿಸಿದ್ದರು. ರಸ್ತೆಗಳನ್ನು ಅಗಲಗೊಳಿಸಿದ್ದರು. 1894ರಲ್ಲಿ ಬೆಂಗಳೂರಿಗೆ ಪ್ರಥಮ ಬಾರಿಗೆ ಹೆಸರಘಟ್ಟದ ಕೆರೆಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿದ್ದರು.

ಕೊಲಾರದಲ್ಲಿ ಚಿನ್ನದ ಗಣಿ ಪ್ರಾರಂಭವಾಗಿದ್ದು ಇವರು ದಿವಾನರಾಗಿದ್ದ ಕಾಲದಲ್ಲಿಯೇ. ಇಷ್ಟೆ ಅಲ್ಲದೆ ಏಷ್ಯಾದಲ್ಲಿಯೇ ಪ್ರಥಮ ಜಲ ವಿದ್ಯುತ್ ಕಾರ್ಯಗಾರವನ್ನು ಶಿವನಸಮುದ್ರದಲ್ಲಿ ಪ್ರಾರಂಭಿಸಲು ಶೇಷಾದ್ರಿ ಐಯ್ಯರ್ ಅವರು ಕಾರಣಿಭೂತರಾದ್ದರು.

ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆ ಪ್ರಾರಂಭಿಸಿದ್ದು, ಲಾಲಬಾಗ್‌ನ ಗಾಜಿನಮನೆ ಕಟ್ಟಿಸಿದ್ದು , ಬಸವನಗುಡಿ ಮತ್ತು ಮಲ್ಲೇಶ್ವರ ಬಡಾವಣೆಗಳ ವಿಸ್ತರಣೆ ಮಾಡಿದ್ದು ನಮ್ಮ ಈ ಆಧುನಿಕ ಬೆಂಗಳೂರಿಗೆ ಶೇಷಾದ್ರಿ ಐಯ್ಯರ್ ಅವರ ಕಾಣಿಕೆ. ಅಲ್ಲದೆ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲು ಮಹಾರಾಜರಿಂದ 372 ಎಕರೆಯಷ್ಟು ಭೂಮಿಯನ್ನು ದಾನವಾಗಿ ಕೊಡಿಸಿದ್ದು ಶೇಷಾದ್ರಿ ಐಯ್ಯರ್ ಅವರ ಹೆಗ್ಗಳಿಕೆ.

ಶೇಷಾದ್ರಿ ಐಯ್ಯರ್ ಅವರು ಸೆಪ್ಟೆಂಬರ್ 13, 1901ರಲ್ಲಿ ತೀರಿಕೊಂಡರು. ಅವರ ನೆನೆಪಿಗಾಗಿ ಬೆಂಗಳೂರಿನ ಒಂದು ಬಡಾವಣೆಗೆ ಶೇಷಾದ್ರಿಪುರಂ ಏಂದು ನಾಮಕರಣ ಮಾಡಲಾಗಿದೆ. ಕುಮಾರಪುರಂ ಶೇಷಾದ್ರಿ ಅಯ್ಯರ್ ಅವರ ಖಾಸಗಿ ಮನೆ "ಕುಮಾರ ಕೃಪಾ" ಈಗ ರಾಜ್ಯದ ಅತಿಥಿ ಗೃಹವಾಗಿ ಬಳಕೆಯಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X