ವೆಂಕಟನಾರಾಯಣ : ಕನ್ನಡಪ್ರಭ ಪತ್ರಿಕೆಗೆ ಹೊಸ ಸೂಲಗಿತ್ತಿ

* ಎಸ್ಕೆ. ಶಾಮಸುಂದರ

ಇದೀಗ ಉದಯ ಟಿವಿಯ ಸ್ವಿಚ್‌ ಆಫ್‌ ಮಾಡಿ, ಕನ್ನಡಕ ಸರಿಮಾಡಿಕ್ಳೊತ್ತಾ ಕನ್ನಡಪ್ರಭ ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿರುವ ಆಸಾಮಿ Kannadaprabha Editor designate ವೆಂಕಟನಾರಾಯಣ. ಕನ್ನಡ ಓದುಗ ಬಳಗಕ್ಕೆ ಇದೊಂದು ಹೊಸ ಹೆಸರು ಎಂದು ನಿಮಗನಿಸಿದರೆ ಕ್ಷಮಿಸಿ. ಜತೆಯಲ್ಲೇ ಕನ್ನಡ ಪತ್ರಿಕಾ ವಲಯಗಳಲ್ಲಿದ್ದೂ ಈ ಹೆಸರು ಕೇಳಿಲ್ಲ ಎನ್ನುವವವರು ಯಾರಾದರೂ ಇದ್ದರೆ ಅವರನ್ನು ಕರ್ನಾಟಕದಿಂದ ಈ ಕೂಡಲೇ ಗಡೀಪಾರು ಮಾಡಲು ಶಿಫಾರಸ್ಸು ಮಾಡಿ!

ನಿಮಗೆ ಗೊತ್ತಿರಲಿಕ್ಕಿಲ್ಲ. ಕರಡು ತಿದ್ದುಗನಾಗಿ (ಪ್ರೂಫ್‌ರೀಡರ್‌) ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ವಿಭಾಗ ಸೇರಿಕೊಂಡ ವೆಂಕಟ್‌ ಆ ಪತ್ರಿಕೆಯ ಅಧಿಕಾರ ಸ್ಥಾನಗಳನ್ನು ಏರುತ್ತಾ ಸಾಗಿದ ಕತೆ ಸ್ವಾರಸ್ಯಕರ. ತನ್ನದಲ್ಲದ ಸಂಸ್ಥೆಯಲ್ಲಿ ಇತ್ತೀಚಿನವರೆವಿಗೂ ಆಲ್‌ ಪವರ್‌ಫುಲ್‌ ನಾಯಕರಾಗಿದ್ದ ಶಿಖಾಮಣಿಯಾಬ್ಬರ ಕೆಂಗಣ್ಣಿಗೆ ಗುರಿಯಾಗುವುದಕ್ಕೆ ಮೊದಲು ವೆಂಕಟನಾರಾಯಣರಿಗೆ ಸಂಕ ಆಡುಂಬೊಲವೇ ಆಗಿತ್ತು. ಪತ್ರಿಕೆಯಿಂದ Unceremoniously ಹೊರಬಂದ ಮೇಲೆ ವೆಂಕಟನಾರಾಯಣರಿಗೆ ವಿಶಾಲ ಜಗತ್ತಿನ ನಿಜಪರಿಚಯವಾಗಿರಬೇಕು. ಸುಮಾರು ಮೂರು ದಶಕದ ಸಂಯುಕ್ತ ಕರ್ನಾಟಕದ ಅನುಭವ ಬುತ್ತಿಯಲ್ಲಿ 58ರ ಈ ಹಿರೀಕ ಹಲವು ಬಗೆಯ ಸಿಹಿ-ಕಹಿ ಮಾತ್ರೆಗಳನ್ನು ನುಂಗಿದ್ದಾರೆ. ಆ ಒಂದು ಗುಳಿಗೆಯನ್ನು ಬಿಟ್ಟು ಮತ್ತೆಲ್ಲವನ್ನೂ ಚೆನ್ನಾಗಿ ಜೀರ್ಣಿಸಿಕೊಂಡಿದ್ದಾರೆ.

ಯಾವುದದು ಜಾಪಾಳ ?

ಒಸಾಮಾ ಬಿನ್‌ ಲ್ಯಾಡನ್‌ನ ಹೆಸರಷ್ಟೇ ಭಯೋತ್ಪಾದಕವೂ, ಹೆಸರು ಕೇಳಿದರೆ ಸಾಕು ಥರಥರ ನಡುಕ ಹುಟ್ಟಿಸುವ ಆ ಜಾಪಾಳ ಮಾತ್ರೆಯ ಹೆಸರು ಕೆ. ಶಾಮರಾವ್‌ ಎಂದು. ತಾನು ಏನು ಮಾತನಾಡುತ್ತಿದ್ದೇನೆ ಎಂದು ಗೊತ್ತಿಲ್ಲದವರೂ ಕೂಡ , ಇವರನ್ನು ಪತ್ರಿಕಾ ಲೋಕದ ಭೀಷ್ಮ ಎಂದೂ ಇವತ್ತಿಗೂ ಬಣ್ಣಿಸಿ ಮುಂದೆ ಸಾಗುತ್ತಾರೆ. ತನ್ನ ಮೂಗಿನ ತುದಿಗೆ ತಕ್ಕಂತೆ ಕುಣಿಯದವರನ್ನು ಕ್ಷಣಾರ್ಧದಲ್ಲಿ ಮುಗಿಸಿಬಿಡುವ ಕಡಲಬಾಳ ಶಾಮರಾಯರ ಖ್ಯಾತಿ ಲೋಕವಿಖ್ಯಾತ . ಚಾಣಕ್ಯನನ್ನು ಮೀರಿಸುವ ಬುದ್ಧಿವಂತಿಕೆ, ವಿಶ್ವಾಮಿತ್ರನನ್ನು ನಾಚಿಸುವ ಕೋಪ ಅವರ ಆಜನ್ಮ ಆಸ್ತಿ. ಇಂಥ ಜಾಪಾಳಕ್ಕೂ ವೆಂಕಟ್‌ನಾರಾಯಣರಿಗೂ ಇದ್ದ ಗಳಸ್ಯ ಕಂಠಸ್ಯ ಸಂಬಂಧ ನಮ್ಮಂಥ ordinary mortal ಗಳಿಗೆ ಈ ಭೂಲೋಕದ ವಿಸ್ಮಯವೆಂಬಂತೆ ಕಂಡಿದುದರಲ್ಲಿ ವಿಶೇಶವೇನೂ ಇಲ್ಲ.

ಶನಿ ಬೆನ್ನು ಹತ್ತಿದರೆ , ಪಾಪಿ ಯಾರನ್ನೂ ಬಿಡುವುದಿಲ್ಲವಂತೆ. ಹೀಗಿರಲು ಒಂದುದಿನ ಶಾಮರಾಯರಿಗೆ ಅದೇನಾಯಿತೋ ? ವೆಂಕಟ್‌ ಮೇಲೆ ಕಾರ್ಕೋಟಕ ವಿಷ ಕಾರಿ ಸಂಸ್ಥೆಯಿಂದ ಹೊರಗಟ್ಟಿಬಿಟ್ಟರು. ನಾರಾಯಣರು ಒಂದು ಜಾಹಿರಾತು ಏಜೆನ್ಸಿ ತೆಗೆದು ಮುಚ್ಚಿದರು. ಈ ನಡುವೆ ಅರಾಜಕತೇ ತಾಂಡವವಾಡುತ್ತಿದ್ದ ಜನಪ್ರಿಯ ಉದಯ ಟಿವಿ ಇಂದ ಕರೆಬಂತು. ಕಸುಬು ಹಳೆಯದಾದರೂ ಮಾಧ್ಯಮ ಹೊಸತಾದ್ದರಿಂದ ತಿಣುಕುತ್ತಿದ್ದ ವೆಂಕಟನಾರಾಯಣರಿಗೆ ಕನ್ನಡಪ್ರಭದಿಂದ ಬಂದ ಕರೆ ಅನಿರೀಕ್ಷಿತ , ಆದರೆ ಮಧುರ ಆಘಾತವನ್ನೇ ನೀಡಿದೆ.

ಇಷ್ಟಕ್ಕೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಮಾಲಿಕರ ಕಣ್ಣಿಗೆ ವೆಂಕಟ್‌ನಾರಾಯಣ್‌ ಹೇಗೆ ಬಿದ್ದರು? ಹೇಗಾದರೂ ಬೀಳಲಿ. ಪತ್ರಿಕೆಗೆ ಬರವಣಿಗೆಯ ಮೂಲಕ ಹೊಸ ಆಯಾಮ ಕೊಡುವುದರ ಜತೆಗೆ ಕಪ್ಪೆಗಳನ್ನು ತಕ್ಕಡಿಯಲ್ಲಿ ಕೂಡಿಹಾಕಿ ಪೇಪರ್‌ಅನ್ನು ಸರಿಯಾಗಿ ತೂಗುವ ಸಮರ್ಥ ವ್ಯಕ್ತಿ ಮ್ಯಾನೇಜ್‌ಮೆಂಟ್‌ಗೆ ಜರೂರಾಗಿ ಬೇಕಾಗಿತ್ತು. ಆ ಶಕ್ತಿ ಮತ್ತು ಯುಕ್ತಿ ವೆಂಕಟನಾರಯಣ್‌ಗೆ ಕರಗತ.

ನಿರ್ಗಮಿಸುತ್ತಿರುವ ಕೆ. ಸತ್ಯನಾರಾಯಣ ಮಾಹಿತಿ ಪ್ರೇಮಿಯಾದರೆ ಹೊಸಸಂಪಾದಕ ವೆಂಕಟನಾರಾಯಣ ಮಾನವಪ್ರೇಮಿ. ಪ್ಯಾಕಿಂಗ್‌ ರೂಂನಲ್ಲಿ ಕೆಲಸ ಮಾಡುವ ದಿನಗೂಲಿ ನೌಕರನೇ ಆಗಲಿ, ಸಂಬಳ ಎಣಿಸುವ ಮಾಲೀಕನೇ ಆಗಿರಲಿ, ವ್ಯಕ್ತಿಯ ಸ್ವಭಾವನ್ನು ಅರಿತು ಅದಕ್ಕೆ ತಕ್ಕಂತೆ ಎಚ್ಚರಿಕೆ ಇಂದ ಹೆಜ್ಜೆ ಹಾಕುವ ಜಾಣ್ಮೆ ಯನ್ನು ವೆಂಕಟ್‌ ಲೀಲಾಜಾಲವಾಗಿ ನಿರ್ವಹಿಸಬಲ್ಲರು. ಇದೇ ಅವರ ಶಕ್ತಿ ಹಾಗೂ ದೌರ್ಬಲ್ಯ ಕೂಡಾ. ಅಹಂಕಾರದಿದ ದೂರ, ಸಜ್ಜನಿಕೆ ಹತ್ತಿರವಾಗುವ ಇವರು ಪೇಪರ್‌ಗೂ, ಸಹೋದ್ಯೋಗಿಗಳಿಗೂ ಮತ್ತು ಸಂಬಳ ಎಣಿಸುವ ಧಣಿಗೂ ತೂಗುಸೇತುವೆಯಾಗಿ ಜವಾಬ್ದಾರಿ ನಿರ್ವಹಿಸುವರೆಂಬ ಆಕಾಂಕ್ಷೆ ಕನ್ನಡಪ್ರಭ ಪ್ರೇಮಿಗಳದು.

ಕನ್ನಡ ಪತ್ರಿಕೋದ್ಯಮಕ್ಕೆ, ಇವತ್ತಿನ ಮಾತುಕತೆಯ ಸಂದರ್ಭದಲ್ಲಿ ವಿಶೇಷವಾಗಿ ಕನ್ನಡಪ್ರಭಕ್ಕೆ ಒಳ್ಳೆಯದಾಗಲಿ !

Do you think the paper changes if the editor is changed?

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+