ಕರ್ನಾಟಕ ಅಕಾಡಮಿಗಳ ಹೊಸ ಅಧ್ಯಕ್ಷರ ಕಿರುಪರಿಚಯ

ಪ್ರೊ. ಹಿ.ಶಿ. ರಾಮಚಂದ್ರೇ ಗೌಡ : ಮೈಸೂರು ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರೇಗೌಡರು ಹಿರಿಯ ಜಾನಪದ ವಿದ್ವಾಂಸರು. ಜನಪದ - ಜನಪದರ ಅಧ್ಯಯನ ಮಾಡಿರುವ ಗೌಡರು ಕಳೆದ ಬಾರಿ ಅಕಾಡೆಮಿಯ ನಾಮಕರಣ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಮಲ್ಲೇಪುರಂ ಜಿ. ವೆಂಕಟೇಶ್‌ : ಹಂಪಿ ಕನ್ನಡ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿ ಸೇವೆ ಸಲ್ಲಿಸಿರುವ ಮಲ್ಲೇಪುರಂ ಜಿ. ವೆಂಕಟೇಶ್‌ ಪುಸ್ತಕ ವಿಮರ್ಶಕರಾಗಿಯೇ ಹೆಸರು ಮಾಡಿದವರು. ಶಂಬಾಜೋಷಿ ಅವರ ಸಾಹಿತ್ಯ ಸಂಪುಟವನ್ನೂ ಇವರು ಸಂಪಾದಿಸಿದ್ದಾರೆ.

ಪುಸ್ತಕ ಪ್ರಕಾಶನ ಕ್ಷೇತ್ರದಲ್ಲೂ ಸಾಕಷ್ಟು ಪರಿಶ್ರಮ ವೆಂಕಟೇಶರಿಗಿದೆ.

ಆರ್‌. ನಾಗೇಶ್‌ : ವಾರ್ತಾ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಗೇಶ್‌ ಇತ್ತೀಚೆಗಷ್ಟೇ ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಇವರ ಹೆಸರು ಕೇಳಿ ಬಂದಿತ್ತು.

ಅಂತಿಮ ಕ್ಷಣದಲ್ಲಿ ನಾಗೇಶ್‌ ಅವರ ಹೆಸರನ್ನು ಕೈಬಿಟ್ಟು ಪ್ರಸನ್ನ ಅವರನ್ನು ರಂಗಾಯಣದ ನಿರ್ದೇಶಕರಾಗಿ ನೇಮಿಸಲಾಯಿತು. ರಂಗಭೂಮಿಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಹಾಗೂ ರಂಗ ಕಲಾವಿದರ ಕಷ್ಟ ಸುಖ ಅರಿತಿರುವ ನಾಗೇಶ್‌ ಅವರ ಬಗ್ಗೆ ರಂಗಪ್ರೇಮಿಗಳು ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

ಪೀಟರ್‌ ಲೂಯಿಸ್‌ : ಸಮಕಾಲೀನ ಕಲಾವಿದರಾಗಿ ಹೆಸರು ಮಾಡಿರುವ ಪೀಟರ್‌ ಲೂಯಿಸ್‌ ಉಡುಪಿಯ ಪ್ರತಿಭೆ. ಕುಂಚ ಕಲೆಯನ್ನು ಕರಗತ ಮಾಡಿಕೊಂಡಿರುವ ಲೂಯಿಸ್‌ ಸರಕಾರಿ ಸೇವೆಯ ನಡುವೆಯೂ ತಮ್ಮ ಕಲಾ ಸೇವೆಯನ್ನು ಮುಂದುವರಿಸಿದ್ದರು.

ನಿವೃತ್ತಿಯ ಬಳಿಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಲೂಯಿಸ್‌ ಕಲಾಕೃಷಿಯನ್ನು ಮಾತ್ರ ಮರೆತಿಲ್ಲ.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+