ಗಾಲಿಕುರ್ಚಿಯಲ್ಲಿ ಚಲನಶೀಲತೆ

*ಹಿಂದೋಲ್‌ ಸೇನ್‌ಗುಪ್ತ

ನವದೆಹಲಿ : ಸ್ಟೀಫನ್‌ ಹಾಕಿಂಗ್‌- ವಿಶ್ವ ಪ್ರಸಿದ್ಧ ಭೌತವಿಜ್ಞಾನಿ. ಆತನ ಬದುಕೊಂದು ವಿಷಾದಗಾಥೆ. ಕಥೆಯೆನ್ನುವುದಕ್ಕಿಂಥ ದಂತಕಥೆ ಅನ್ನುವುದೇ ಸರಿ. ವಿಷಾದದ ಸಂಗತಿಯೆಂದರೆ, ಅದೇ ಜೀವಂತ ದಂತಕಥೆಗೀಗ ದುರಂತದ ಲೇಪ. ಮುಡಿಯಿಂದ ಅಂಗುಷ್ಠದವರೆಗೆ ಸ್ಟೀಫನ್‌ರ ಶರೀರ ಹೇಳಿದ ಮಾತು ಕೇಳುತ್ತಿಲ್ಲ . ಸ್ವರ ಕೂಡ ಸ್ವಂತದ್ದಲ್ಲ , ಸ್ಪೀಚ್‌ ಸಿಂಥಸೈಜರ್‌ ಮೂಲಕವಷ್ಟೇ ಅವರು ವ್ಯವಹರಿಸಬಲ್ಲರು. ಆವರ ಕ್ರಿಯಾಶೀಲ ಬದುಕಿನ ವೈಫಲ್ಯವನ್ನು ವೈದ್ಯಕೀಯ ಪರಿಭಾಷೆ ಬಣ್ಣಿಸುವುದು- ಮೋಟಾರ್‌ ನ್ಯೂರಾನ್‌ ಡಿಸೀಸ್‌.

ಹಾಕಿಂಗ್‌ ಎಂದೂ ತಮ್ಮ ಅಂಗವೈಕಲ್ಯವನ್ನು ಸಾಧನೆಗೆ ಅಡ್ಡಿ ಎಂದುಕೊಂಡದ್ದೇ ಇಲ್ಲ . ಗಾಲಿ ಕುರ್ಚಿಯ ಮೇಲೆ ಕುಳಿತೇ ಬದುಕನ್ನು ಅರ್ಥಪೂರ್ಣವಾಗಿಸುವ ಹಂಬಲ ಅವರದ್ದು . ಅವರೊಂದಿಗೆ ಬದುಕುವುದೆಂದರೆ ಉತ್ಸಾಹದ ಚಿಲುಮೆಯಾಂದಿಗಿನ ಸಹವಾಸ ಎಂದೇ ಅರ್ಥ ಅನ್ನುತ್ತಾರೆ ನೀಲ್‌ ಷಿಯರರ್‌. ಅವರು ಹಾಕಿಂಗ್‌ರ ಸಹಾಯಕ, ವಕ್ತಾರ.. ಎಲ್ಲವೂ.

ಅವರು ಗಾಲಿ ಕುರ್ಚಿಯ ಮೇಲೆ ಕುಳಿತಿರಬಹುದು ಅಷ್ಟೇ. ಆದರೆ, ನನಗೆಂದೂ ಅಂಗವಿಕಲರಂತೆ ಕಂಡಿಲ್ಲ ಎಂದು ಷಿಯರರ್‌ ಹೇಳುತ್ತಾರೆ. ಹಾಕಿಂಗ್‌ರ ಎಲ್ಲಾ ಪ್ರವಾಸ ಹಾಗೂ ಕಾರ್ಯಕ್ರಮಗಳನ್ನು ರೂಪಿಸುವುದು ಅವರೆ. ಹಾಕಿಂಗ್‌ರ ಪ್ರವಾಸವಾಗಲೀ, ಭಾಷಣವಾಗಲೀ, ಕೊನೆಗೆ ಅವರ ಗಾಲಿಕುರ್ಚಿಯಾಗಲೀ ನನ್ನ ಉಸ್ತುವಾರಿಯಲ್ಲೇ ನಡೆಯಬೇಕು ಅನ್ನುವಾಗ ನೀಲ್‌ರ ಮುಖದಲ್ಲಿ ಧನ್ಯತೆಯ ಸೆಳಕೊಂದು ಮಿಂಚಿ ಮಾಯವಾಗುತ್ತೆ .

ಅಂದಹಾಗೆ ಪ್ರಸ್ತುತದ ಭಾರತ ಪ್ರವಾಸದ ನೀಲನಕ್ಷೆ ಸಿದ್ಧವಾದದ್ದೂ ನೀಲ್‌ರಿಂದಲೇ. ಹಾಕಿಂಗ್‌ ಮೊನ್ನೆ (ಜ.14) ಮುಂಬಯಿಯಲ್ಲಿ ನಡೆದ ಅಂತರರಾಷ್ಟ್ರೀಯ ಭೌತಶಾಸ್ತ್ರ ಸಮಾವೇಶವೊಂದರಲ್ಲಿ ಮಾತನಾಡಿದರು. ದೆಹಲಿಯಲ್ಲೂ ಅವರ ಉಪನ್ಯಾಸ ಕಾರ್ಯಕ್ರಮವಿದೆ.

ಬದುಕು ಗಾಲಿಕುರ್ಚಿ, ಹಾಕಿನ್ಸ್‌ ಅದರ ಸಾಹೇಬ : ಹಾಕಿಂಗ್‌ರ ವೀಲ್‌ಚೇರ್‌ ಅಂತಿಂಥದ್ದಲ್ಲ. ಇತರರ ಮೇಲೆ ಅವಲಂಬಿತರಾಗುವುದನ್ನು ಅದು ಸಾಕಷ್ಟು ಕಡಿಮೆ ಮಾಡಿದೆ. ಹೆಚ್ಚುವರಿ ಬ್ಯಾಟರಿಗಳನ್ನು ಹೊಂದಿರುವ ವೀಲ್‌ಚೇರ್‌ ಮೇಲೆ ಕೂರುವ ಹಾಕಿಂಗ್‌ ಹೆಚ್ಚೂಕಮ್ಮಿ ಸ್ವತಂತ್ರರು. ಅದರ ಚಾಲನೆ ಅವರ ಅಂಕೆಯಾಳಗೇ ಇದೆ. ಗಾಲಿಕುರ್ಚಿಯಲ್ಲಿ ಲ್ಯಾಪ್‌ಟ್ಯಾಪ್‌ ಕೂಡ ಅಳವಡಿಸಲಾಗಿದೆ. ಅದಕ್ಕೊಂದು ವಿಶೇಷ ಒತ್ತುಗುಂಡಿಯೂ ಇದೆ. ಪರದೆ ಮೇಲಿರುವ ಮೆನುಗಳ ಸರಣಿಯಲ್ಲಿ ನ ಪದಗಳನ್ನು ವಾಕ್ಯಗಳನ್ನಾಗಿ ಜೋಡಿಸುವ ಅವಕಾಶವೂ ಇದೆ. ಈ ರೀತಿ ನಿಮಿಷಕ್ಕೆ 15 ಪದಗಳನ್ನು ಹಾಕಿಂಗ್‌ ನಿರ್ವಹಿಸಬಲ್ಲರು.

ಹಾಕಿಂಗ್‌ರ ಸಂಗಕ್ಕೆ ಷಿಯರರ್‌ ಬಂದದ್ದು ಮತ್ತೊಂದು ಕಥೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಸುದ್ದಿಪತ್ರಿಕೆಯಾಂದರಲ್ಲಿ ಸಹಾಯಕರೊಬ್ಬರಿಗಾಗಿ ಹಾಕಿಂಗ್‌ ನೀಡಿದ್ದ ಜಾಹಿರಾತಿನ ಮೇರೆಗೆ ಅರ್ಜಿ ಗುಜರಾಯಿಸಿದ್ದ ಅಸಂಖ್ಯರಲ್ಲಿ ಷಿಯರರ್‌ ಕೂಡ ಒಬ್ಬರು. ಆದರೆ, ನಾನು ಅದೃಷ್ಟವಂತ, ಕೆಲಸ ನನಗೇ ಸಿಕ್ಕಿತು ಎಂದು ಷಿಯರರ್‌ ಖುಷಿಯಿಂದ ಹೇಳುತ್ತಾರೆ.

ಸೌಂದರ್ಯ ದೈಹಿಕ ಚಲನಶೀಲರ ಸೊತ್ತಾ ? : ಹಾಕಿಂಗ್‌ರೊಂದಿಗೆ ಕೆಲಸ ಮಾಡುವುದೇ ಒಂದು ಖುಷಿ. ಆತ ನನಗೆ ಸ್ಫೂರ್ತಿದಾಯಕ. ಆತ ಸ್ಫೂರ್ತಿಯ ಚಿಲುಮೆ ಎಂದು ಯಜಮಾನನ್ನು ಷಿಯರರ್‌ ಬಣ್ಣಿಸುತ್ತಾರೆ. ಆದರೆ, ಕೆಲವೊಮ್ಮೆ ಹಾಕಿಂಗ್‌ ತಮ್ಮ ಯೋಚನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ಅಂಗವೈಕಲ್ಯ ಅಡ್ಡವಾದಾಗ ಷಿಯರರ್‌ ಕುಸಿದು ಹೋಗುತ್ತಾರೆ. ಸೌಂದರ್ಯ ಹಾಗೂ ಭವ್ಯ ಕಲಾಕೃತಿಗಳೆಲ್ಲ ನಡೆದಾಡುವ ಮನುಷ್ಯರಿಗೆ ಮಾತ್ರ ಸೀಮಿತವಾ ಅನ್ನುವ ಅವರ ಪ್ರಶ್ನೆಯಲ್ಲಿ ಎಂದೂ ತೀರದ ವಿಷಾದವಿದೆ.

ಆದರೆ, ಹಾಕಿಂಗ್‌ ಯಾವತ್ತೂ ಗೊಂದಲದ ಮನುಷ್ಯರಲ್ಲ . ಅವರು ಸದಾ ನಿರಾಳವಾಗಿರುತ್ತಾರೆ ಹಾಗೂ ಉತ್ಸಾಹಪೂರ್ಣರಾಗಿರುತ್ತಾರೆ. ಬಹುಶಃ ಅವರು ತಮ್ಮ ನ್ಯೂನತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು ಎನ್ನುತ್ತಾರೆ ಷಿಯರರ್‌.

ನಡೆದಾಡುವವರಿಗೂ ಮಾದರಿ : ಅಂಗವಿಕಲರೆಂದು ವಿಶೇಷ ಕಾಳಜಿ ಮಾಡುವುದನ್ನು ಹಾಕಿಂಗ್‌ ಇಷ್ಟಪಡುವುದಿಲ್ಲ . ಅಂಗವಿಕಲರು ಸಾಮಾನ್ಯವಾಗಿ ತೊಡುವ ಉಡುಪುಗಳನ್ನೂ ಇಷ್ಟಪಡುವುದಿಲ್ಲ . ಬದಲಾಗಿ ಅವರು ಮಾಮೂಲಿಯಾಗಿಯೇ ಬದುಕಲು ಬಯಸುತ್ತಾರೆ. ಅವರು ಕೇವಲ ಅಂಗವಿಕಲರಿಗೆ ಮಾತ್ರವಲ್ಲ , ಪ್ರತಿಯಾಬ್ಬರಿಗೂ ಆದರ್ಶ ಎನ್ನುತ್ತಾರೆ ಷಿಯರರ್‌.

(ಐಎಎನ್‌ಎಸ್‌)

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+