ಕಾಂಗ್ರೆಸ್‌ IT ಸೆಲ್ ಪಾಕಿಸ್ತಾನಿ ಉಗ್ರರ ಸ್ಲೀಪರ್ ಸೆಲ್! ಅನುಮಾನವೇ ಬೇಡ: ಆರ್.ಅಶೋಕ್

ಬೆಂಗಳೂರು, ಮೇ 12: ಪಹಲ್ಗಾಮ್ ಯುದ್ಧ ನಡೆದ ಸಂದರ್ಭದಲ್ಲಿ ಧರ್ಮ ಕೇಳಿ ಹತ್ಯೆ ಮಾಡಿಲ್ಲ. ಯದ್ಧ ಬೇಡ ಎಂದೆಲ್ಲ ಹೇಳಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ನಂತರ ಪಾಕಿಸ್ತಾನದೊಂದಿಗೆ ಭಾರತ ಯುದ್ಧ ಆರಂಭಿಸಿದ ಬೆನ್ನಲ್ಲೆ ಕರ್ನಾಟಕ ಕಾಂಗ್ರೆಸ್ 'ಶಾಂತಿ ಮಂತ್ರ' ಜಪಿಸಿತ್ತು. ಇದೀಗ ಮ್ಯಾಪ್ ಹಂಚಿಕೊಂಡು ಅಂಥದ್ದೆ ಮತ್ತೊಂದು ಮಹಾ ಯಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ನಡೆ ವಿರುದ್ಧ ಬಿಜೆಪಿ ಕಿಡಿ ಕಾರಿದೆ.

ಈ ಕುರಿತು ಆರ್.ಅಶೋಕ್ ಅವರು ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ. ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮೊದಲೇ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾಕ್ರೋಶ ನೋಟಿ ಉಲ್ಟಾ ಹೊಡೆದರು. ಅಪರೇಷನ್ ಸಿಂಧೂರ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಿದ್ದಂತೆ ಟ್ವೀಟ್ ಮೂಲಕ ಶಾಂತಿ ಜಪ ಮಾಡಿ ಜನರ ಕೈಯಲ್ಲಿ ಉಗಿಸಿಕೊಂಡ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಟ್ವೀಟ್ ಡಿಲೀಟ್ ಮಾಡಿತ್ತು.

No Doubt That Congress IT Cell is a Sleeper Cell of Pakistani Terrorists R Ashok

ಇದೀಗ ಏಕಾಎಕಿ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸುವ ಮ್ಯಾಪ್ (ನಕ್ಷೆ) ಅನ್ನು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಪಾಪಿ ಪಾಕಿಸ್ತಾನದ ಮೇಲೆ ತನಗೆ ಎಷ್ಟು ಪ್ರೀತಿ ಇದೆ ಎಂದು ತೋರಿಸಿದೆ ಎಂದು ಅವರು ದೂರಿದ್ದಾರೆ. ಮರಳಿ ಈ ಟ್ವಿಟ್ ಡಿಲೀಟ್ ಮಾಡಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಪಾಕ್ ಉಗ್ರರ ಸ್ಲೀಪರ್ ಸೆಲ್

ಇದೆಲ್ಲ ಬೆಳವಣಿಗೆ ಗಮನಿಸಿದರೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಪಾಕಿಸ್ತಾನಿ ಉಗ್ರರ ಸ್ಲೀಪರ್ ಸೆಲ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಭಾರತದ ವಿರೋಧವನ್ನು ಲೆಕ್ಕಿಸದೆ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನಕ್ಕೆ ರೂ.8500 ಕೋಟಿ ಸಾಲ ನೀಡಿದೆ ಎಂದು ಅವರು ಆರ್.ಅಶೋಕ್ ದೂರಿದ್ದಾರೆ.

ದೇಶದ್ರೋಹಿ ಕಾಂಗ್ರೆಸ್ ಪಕ್ಷ: ಜನ ಕಿಡಿ

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ದೇಶದ್ರೋಹಿ ಕಾಂಗ್ರೆಸ್ ಪಕ್ಷ ಎಂದು ಸಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಡೆಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ತುಷ್ಠೀಕರಣದ ಪೋಸ್ಟ್ ಹಾಕುವುದು, ಜನ ಉಗಿದ ಮೇಲೆ ಡಿಲೀಟ್ ಮಾಡುವುದು. ಇದು ಕಾಂಗ್ರೆಸ್ ನ ಹುಟ್ಟುಗುಣವಾಗಿದೆ. ಕಾಂಗ್ರೆಸ್ ಗೆ ದೇಶಕ್ಕಿಂತ ರಾಜಕೀಯವೇ ಮುಖ್ಯವಾಯಿತೆ? ಎಂದು ದೇಶಪ್ರೇಮಿಗಳು ಹರಿಹಾಯ್ದಿದ್ದಾರೆ.

ಪೋಸ್ಟ್ ಡಿಲೀಟ್ ಬಳಿಕ ಡಿಕೆ ಶಿವಕುಮಾರ್ ಸ್ಪಷ್ಟನೆ

ಕಾಶ್ಮೀರ ಎದುರಾಳಿ ಉಗ್ರರ ದೇಶ ಪಾಕಿಸ್ತಾನಕ್ಕೆ ಸೇರಿದೆ ಎಂಬುದಾಗಿ ಕಾಣು ಮ್ಯಾಪ್ ಹಂಚಿಕೊಂಡಿದ್ದ ಕಾಂಗ್ರೆಸ್ ಪೋಸ್ಟ್ ಡಿಲೀಟ್ ಆದ ಬಳಿಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಕೆಲಸ ಮಾಡಿದವರನ್ನು ತೆಗೆದು ಹಾಕಿದ್ದೇವೆ. ಇದೆಲ್ಲ ಸುಳ್ಳು ಸಣ್ಣ ತಪ್ಪು ಇತ್ತು ಅದನ್ನು ಸರಿಪಡಿಸಿದ್ದೇವೆ. ಯಾರೋ ಈ ಕೆಲಸ ಮಾಡಿದ್ದಾರೋ ಅವರನ್ನೆಲ್ಲ ತೆಗೆದು ಹಾಕಿದ್ದೇವೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+