ವೆಂಕಟಪ್ಪ ಅಲ್ಲ ಇದು ಕನ್ನಡ ಸಂಕಟಪ್ಪ ಗ್ಯಾಲರಿ

ಈ ಬಗೆಯ ಕನ್ನಡ ಗೋಡೆ ಬರಹ, ಕನ್ನಡ ಫಲಕಗಳನ್ನು ನೋಡಿದರೆ ಏನು ಅನ್ನಿಸುತ್ತದೆ? ನಗುವುದೋ ಅಳುವುದೋ ನೀವೇ ಹೇಳಿ. ವ್ಯಾಕರಣ, ಕಾಗುಣಿತ ಶುದ್ಧಿಗಿಂತ ಆ ಬರಹದ ಹಿಂದಿನ ಭಾವವನ್ನು ಒಪ್ಪಿಕೊಳ್ಳುವುದೋ? ಅಥವಾ ಮುಗುಳ್ನಗೆ ಉಕ್ಕಿಸುವ ತಮಾಷೆಯ ಬರಹಗಳನ್ನು ಸುಮ್ಮನೆ ಒಮ್ಮೆ ಓದಿ ನಕ್ಕುಬಿಡುವುದೋ?
ಇಂತಹ ಬರಹಗಳು ಗಲ್ಲಿಗಲ್ಲಿಗಳಲ್ಲಿ, ಊರುಊರುಗಳಲ್ಲಿ ಸಿಗುತ್ತವೆ. ಕನ್ನಡ ಬರೆಯಲು ಬರದ ಬೇರೆ ರಾಜ್ಯಗಳಲ್ಲಿ ಅಲ್ಲ ಕರ್ನಾಟಕದಲ್ಲಿಯೂ ಕಾಣಸಿಗುತ್ತವೆ. ಕೆಲವು ಕೆಣಕುತ್ತವೆ, ಕೆಲವು ಕಿಚಾಯಿಸುತ್ತವೆ, ಕೆಲ ಬರಹಗಳಲ್ಲಿನ ಅರ್ಥ ಹುಡುಕಲು ಹೊರಟರೆ ತಲೆ ಕೆಟ್ಟು ಚಿತ್ರಾನ್ನವಾಗಿರುತ್ತದೆ.
ಇಲ್ಲಿ ಇದೇ ರೀತಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ವಿವಿಧ ಊರುಗಳಲ್ಲಿ ಬರೆದ ತಮಾಷೆಯ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆದ ಗೋಡೆ ಬರಹಗಳನ್ನು, ಫಲಕಗಳ ಚಿತ್ರಗಳನ್ನು ಸಂಗ್ರಹಿಸಿ ನಮ್ಮ ಓದುಗರೊಬ್ಬರು ಕಳಿಸಿದ್ದಾರೆ. ಅವುಗಳ ಚಿತ್ರಸಂಪುಟ ಇಲ್ಲಿದೆ ನೋಡಿ. ಸರಣಿ ಈಮೇಲ್ ಮುಖಾಂತರ ಅನೇಕ ಸ್ನೇಹಿತರಿಗೆ ಇವು ತಲುಪಿರಬಹುದು. ಆದರೆ, ಇಂತಹ ಬರಹಗಳ ಚಿತ್ರಗಳನ್ನು ತೆಗೆದು, ಸಂಗ್ರಹಿಸಿದ ವ್ಯಕ್ತಿಗೆ ಅವರ ಹಾಸ್ಯಪ್ರಜ್ಞೆಗೆ ನಮೋನ್ನಮಃ.
ಆಶ್ಚರ್ಯದ ಸಂಗತಿಯೆಂದರೆ, ಇಂತಹ ಸಾಕಷ್ಟು ಕಾಗುಣಿತ ತಪ್ಪುಗಳನ್ನು ಕಂಡರೂ ನಕ್ಕು ಸುಮ್ಮನಾಗುತ್ತೇವೆಯೇ ಹೊರತು, ತಿದ್ದುಪಡಿ ಮಾಡಿಸಲು, ತಿದ್ದಿಕೊಳ್ಳಲು ಸಲಹೆ ನೀಡುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಯ್ಯ ಎಂದು ಕೆಲವರಿಗೆ ಹೇಳಿದರೆ ಕೆಲವರು ಸಿಡಿದೇಳಬಹುದು, ಕೋಪಿಸಿಕೊಳ್ಳಬಹುದು. ಆದರೆ, ಈ ಮೂಲಕವಾದರೂ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರೆ ತಪ್ಪೇನೂ ಇಲ್ಲವಲ್ಲ?
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications