• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂತೆ ಕನ್ನಡಕ್ಕೆ ಗಂಡಾಂತರ?

By Staff
|
ಕನ್ನಡಿಗರು ತಮ್ಮ ಮಾತೃಭಾಷೆಯ ಬಗೆಗೆ ಹೀಗೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದರೆ ಕನ್ನಡ ಭಾಷೆ ನಿಧಾನವಾಗಿ ಅಳಿಯುತ್ತದೆ, ಕ್ರಮೇಣ ಸವಕಲು ಭಾಷೆಯಾಗಿ ಒಂದು ದಿನ ಸತ್ತೇಹೋಗುತ್ತದೆ ಎಂಬ ಮಾತುಗಳು ಆಗಾಗ, ಅಲ್ಲಲ್ಲಿ ಕಿವಿಗೆ ಬೀಳುವುದುಂಟು. ಇದು ಕೇವಲ ಊಹಾಪೋಹನಾ? ಅಥವಾ ಈ ವಾದದಲ್ಲಿ ಏನಾದರೂ ತಿರುಳು ಇದೆಯಾ? ನಿಜಕ್ಕೂ ಎನ್ಸಮಾಚಾರ? ಕಳವಳಕ್ಕೆ ಗುರಿಮಾಡುವ ಸಂಗತಿಗಳ ಬಗೆಗೆ ಆಳವಾದ ಅಧ್ಯಯನ ನಡೆಸಿರುವ ಅಮೆರಿಕಾದ ಕನ್ನಡ ವಿದ್ವಾಂಸರೊಬ್ಬರ ಬರೆಯುತ್ತಾರೆ, ಓದಿ.

* ಪ್ರಾ|| ಎಚ್. ಷಿಫ್‌ಮನ್, ಅಮೆರಿಕ.

ಕನ್ನಡವು ಒಂದು ಆಪದ್ಗ್ರಸ್ತ(endangered) ಭಾಷೆ ಮತ್ತು ಅದನ್ನು ಕಾಪಾಡಲು ತುರ್ತು ರಕ್ಷಣೆ ಅವಶ್ಯ ಎಂದು ಕರ್ನಾಟಕದಿಂದ ಅಗಾಗ ಬರುತ್ತಿರುವ ವರದಿಗಳು ಸಾಧಿಸುತ್ತಿವೆ. ಇತರ ಭಾಷೆಗಳ ಆಪದ್‌ಗ್ರಸ್ತ ಸ್ಥಿತಿಯ ಬಗ್ಗೆ ಗೊತ್ತಿರುವುದನ್ನು ಗಮನದಲ್ಲಿರಿಸಿ, ಕನ್ನಡದ ಪ್ರಶ್ನೆಯನ್ನು ಪರಿಶೀಲಿಸುವುದೇ ಈ ಲೇಖನದ ಉದ್ದೇಶ.

ಒಂದು ಭಾಷೆ ನಿಜವಾಗಿಯೂ ಆಪದ್‌ಗ್ರಸ್ತ ಆಗಿದೆ ಎಂದು ನಿರ್ಧರಿಸಲು ಕೆಲ ಪ್ರಮಾಣಗಳನ್ನು ಸಿದ್ಧಪಡಿಸಲಾಗಿದೆ:

1. ಆ ಭಾಷೆಯಲ್ಲಿ ಮಾತಾಡುವ ಯುವಕರು ಇಲ್ಲ, ಅಂದರೆ, ಒಂದು ತಲೆಮಾರಿನಿಂದ ಇನ್ನೊಂದಕ್ಕೆ ಆ ಭಾಷೆ ವರ್ಗಾವಣೆಗೊಳ್ಳುತ್ತಿಲ್ಲ.
2. ಅಕ್ಷರತೆ, ಇದ್ದರೂ, ಅತಿ ಕಡಿಮೆ ಆಗಿದೆ.
3. ಆ ಭಾಷೆ ತಮ್ಮ ಮಾತೃಭಾಷೆ ಎಂದು ಹೇಳಿಕೊಳ್ಳುವವರ ಸಂಖ್ಯೆ, ಒಂದು ಜನಗಣತಿಯಿಂದ ಇನ್ನೊಂದಕ್ಕೆ, ಕಡಿಮೆ ಆಗುತ್ತಿದೆ.
4. ಮಾತೃಭಾಷೆ ಮಾತಾಡುವವರೆಲ್ಲ ವಯೋವೃದ್ಧರಾಗಿದ್ದಾರೆ.

ಈ ನಾಲ್ಕು ಪ್ರಮಾಣಗಳಲ್ಲಿ ಕನ್ನಡಕ್ಕೆ ಯಾವುದ ಅನ್ವಯಿಸುತ್ತವೆ?

ಜನಗಣತಿ : ಕಳೆದ 2001 ರ ಜನಗಣತಿಯ[1] ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 52,850,562; ಅಕ್ಷರತೆ 66.6%. ಸೋಜಿಗವೆಂದರೆ, ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುವವರ ಸಂಖ್ಯೆಯೂ 66 %![2]. ಅಂದರೆ, ಹಿಂದಿನ ಗಣತಿಗಳಂತೆ ಈಗಲೂ ಕನಿಷ್ಟ 66.2% ಕನ್ನಡ ಮಾತಾಡುವವರು ಕರ್ನಾಟಕದಲ್ಲಿ ಇದ್ದಾರೆ. ಕನ್ನಡದ ನಂತರ, 9.96 % ಉರ್ದು, 7.39% ತೆಲುಗು, ಆ ನಂತರ 3.84% ತಮಿಳು ಮಾತಾಡುವವರು ಇದ್ದಾರೆ.

ಇದು 1991 ರ ಗಣತಿಯನ್ನೆ ಹೋಲುತ್ತದೆ .ಶೇಕಡ ಸಂಖ್ಯೆಗಳು ಸುಮಾರು ಸಮವಾಗಿವೆ. ತಮಿಳು ಮಾತಾಡುವವರ ಸಂಖ್ಯೆ ಮೂರು ಅತಿ ಹೆಚ್ಚಿನ ಭಾಷಿಕರಲ್ಲಿ ಒಂದಾಗಿಲ್ಲ ಎಂದು ಗಮನಿಸಿ. ಖೂಬಚಂದಾನಿ[3]ಪ್ರಕಾರ,ಉರ್ದು 10% ಎಂದರೆ ಅವರು ತಮ್ಮ ವಂಶಿಕತೆಯನ್ನು ಹೇಳಿಕೊಳ್ಳುತ್ತಿದ್ದಾರೆ ಹೊರತು ಮಾತೃಭಾಷೆಯನ್ನಲ್ಲ. ನಂತರ ಬರುವುದು ತೆಲುಗು, ಆದರೆ ತಮಿಳು ಅಪಾಯಕಾರಿ ಎಂದು ಗಣಿಸಲ್ಪಡುತ್ತಿದೆ. ಕನ್ನಡ, ಉರ್ದು, ತೆಲುಗು ಶೇಕಡ ಸಂಖ್ಯೆಗಳನ್ನು ಕೂಡಿಸಿದರೆ ಸಿಗುವುದು 83.6%. ಇನ್ನುಳಿದ 16.4%ದಲ್ಲಿ ತಮಿಳು, ಕೊಂಕಣಿ, ತುಳು, ಕೊಡಗು, ಮಲಯಾಳ, ಗುಜರಾತಿ, ಹಿಂದಿ, ಸಿಂಧಿ ಎಲ್ಲ ಸೇರಿವೆ!

ಇದಕ್ಕೆ ವಿಭಿನ್ನವಾಗಿ, ಅತಿ ಹೆಚ್ಚು ಮಾತೃಭಾಷಿಕರು ಕೇರಳ ರಾಜ್ಯದಲ್ಲಿದ್ದಾರೆ. ಮಲಯಾಳ 28,096,375(96.6%), ತಮಿಳು 616,010 (2.1%), ಮತ್ತು ಕನ್ನಡ 75,571 (0.3%). ಸಹಜವಾಗಿ, ಕನ್ನಡ ಮಾತಾಡುವವರು ಆಂಧ್ರ, ತಮಿಳು ನಾಡು, ಮುಂಬಯಿ ಇತ್ಯಾದಿ ಪ್ರದೇಶಗಳಲ್ಲೂ ಕಂಡು ಬರುತ್ತಾರೆ.

ಕೇರಳದ ಈ ವಿಷಮ ಹೋಲಿಕೆ ಎತ್ತಿ ತೋರಿಸುವಂತೆ, ಶೇಕಡ ಅತಿ ಕಡಮೆ ಆ ನೆಲದ ಭಾಷಿಕರನ್ನು ಹೊಂದಿರುವ ರಾಜ್ಯ, ಬಹುಶಃ, ಕರ್ನಾಟಕ ಒಂದೆ. ಹೀಗೆ, ಶೇಕಡವಾರು ಗಣನೀಯ ಇತರ ಭಾಷಿಕರನ್ನು ಹೊಂದಿದ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪ ಸಂಖ್ಯಾತರು ಎನ್ನುವ ಗ್ರಹಿಕೆ ವ್ಯಾಪಕವಾಗಿದೆ.

ಕರ್ನಾಟಕದಲ್ಲಿ ತಮಿಳು : ಉರ್ದು ಮತ್ತು ತೆಲುಗುಗಳ ನಂತರದ ಸ್ಥಾನದಲ್ಲಿದ್ದರೂ, ವಿವಿಧ ಕಾರಣಗಳಿಂದ ತಮಿಳು ಹೆಚ್ಚು ಅಪಾಯಕಾರಿ ಎಂದು ಗ್ರಹಿಸಲ್ಪಡುತ್ತದೆ.ಇದಕ್ಕೆ ಕಾರಣ ಇನ್ನೂ ಅಳಿಯದಿರುವ ಐತಿಹಾಸಿಕ ಬೇರುಗಳು. ಆದ್ದರಿಂದ ತುಸು ಇತಿಹಾಸವನ್ನು ಕೆದಕಿ ನೋಡೋಣ. ಬ್ರಿಟಷರ ವಸಾಹತುಶಾಹಿಯಲ್ಲಿ, ಮೈಸೂರು ಬ್ರಿಟಿಶ್ ಭಾರತದ ಅಂಗವಾಗದೆ "ಅರಸ ನಾಡು" (ಪ್ರಿನ್ಸ್ಲೀ ಸ್ಟೇಟ್) ಆಗಿತ್ತು. ಆಂತೆ, ಬ್ರಿಟಿಶ್ ಸಾಮ್ರಾಜ್ಯದ ಪ್ರತಿನಿಧಿ ಒಬ್ಬ ಅಲ್ಲಿ ಇರುತ್ತಿದ್ದ. ಇಂಥ ಪ್ರತಿನಿಧಿಗಳು ವಾಸಿಸುತ್ತಿದ್ದ ಜಾಗಗಳು ಅರಸನಾಡುಗಳ ಸಮೀಪದಲ್ಲಿದ್ದು "ಕಂಟೊನ್ಮೆಂಟ್" ಎಂದು ಹೆಸರಾಗಿದ್ದವು. ಇಂಥ ವಸತಿ ಬೆಂಗಳೂರಿನ ಹತ್ತಿರದ ಜಾಗದಲ್ಲಿ ಬೆಳೆಯಿತು. ಬ್ರಿಟಿಷರು ತಮ್ಮ ದಂಡು, ಆಳು ಮತ್ತು ಕೆಸಲಗಾರರನ್ನು ತಮ್ಮೊಂದಿಗೆ ತಂದರು. ಬ್ರಿಟಷರು ಆಗಲೆ ಮದ್ರಾಸ್ ಪ್ರೆಸಿಡೆನ್ಸಿ ಎಂಬ ಬಹುಪಾಲು ತಮಿಳು ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು. ಹೀಗಾಗಿ, ಅವರು ಕರೆತಂದ ಆಳು ಮತ್ತು ಕೆಲಸಗಾರರು ಬಹುಪಾಲು ತಮಿಳರೆ ಆಗಿದ್ದರು.

ಮೈಸೂರು ಮಹಾರಾಜನೂ ತನ್ನ ರಾಜ್ಯಾಡಳಿತಕ್ಕೆ ಬ್ರಿಟಷರಿಂದ ತರಬೇತಿ ಹೊಂದಿದವರನ್ನು ಸರಕಾರಿ ನೌಕರರನ್ನಾಗಿ ನೇಮಿಸಿಕೊಂಡ. ಇವರಲ್ಲಿ ತಮಿಳು ಬ್ರಾಹ್ಮಣರು ಸೇರಿದ್ದರು. ಇವರೆಲ್ಲ, ನಂತರದಲ್ಲಿ, ಕನ್ನಡ ಕಲಿತು, ಹೊರಗಿನ ವ್ಯವಹಾರಕ್ಕೆ ಕನ್ನಡವನ್ನೆ ಬಳಸಿದರೂ, ಮನೆಯಲ್ಲಿ ಕನ್ನಡ ಮಿಶ್ರಿತ ಅಥವ ಕನ್ನಡ ಪ್ರಭಾವಿತ ತಮಿಳು ಉಪಭಾಷೆಯೊಂದನ್ನು ಮುಂದುವರೆಸಿದರು. ಇದೆ "ಮೈಸೂರು ತಮಿಳು" ಎಂದು ಹೆಸರಾಗಿದೆ. ಸ್ವಾತಂತ್ರ್ಯದ ನಂತರ, ಮೈಸೂರು (ಕರ್ನಾಟಕ)ರಾಜ್ಯದ ಉದಯದೊಂದಿಗೆ ರಾಜಧಾನಿಯು ಬೆಂಗಳೂರಿಗೆ ವರ್ಗಾಯಿಸಲ್ಪಟ್ಟಿತು. ಕೂಡಲೆ, ತಮಿಳರು, ರಾಜಧಾನಿಯ ನಟ್ಟ ನಡುವೆಯೆ, ತಮ್ಮದೆ ಆದ ಕಾಲನಿ ಕಟ್ಟಿಕೊಂಡಿದ್ದಾರೆ ಎಂದು ಎದ್ದು ತೋರತೊಡಗಿತು. ಈಗ ಇದು ಕರ್ನಾಟದ ಐ.ಟಿ. ಉದ್ಯಮದ ಕೇಂದ್ರವಾಗಿದ್ದು, ಕನ್ನಡ ಬಾರದವರು (ಇಂಗ್ಲಿಷ್ ಮಾತಾಡುವವರು), ಕನ್ನಡ ಕಲಿಯುವ ಅವಶ್ಯಕತೆ ಕಾಣದವರು ಸೇರಿದ್ದಾರೆ. ಈ ಐ.ಟಿ. ಕೆಲಸಗಾರರಲ್ಲಿ ತಮಿಳರು ಇದ್ದರೂ ಎಲ್ಲ ಭಾರತೀಯರೂ ಸೇರಿದ್ದಾರೆ. ಇವರ ಮುಖ್ಯ ಭಾಷೆ ಇಂಗ್ಲಿಷು. ನಿಜಕ್ಕು, ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯಮಗಳ ಭಾಷೆ ಇಂಗ್ಲಿಷು. ಆದರೆ, ಹಲವಾರು ಕಾರಣಗಳಿಂದ, ಕನ್ನಡಿಗರ ಪಕ್ಕೆಯಲ್ಲಿ ಮುಳ್ಳಾಗಿ ಚುಚ್ಚುತ್ತಿರುವುದು, ಇಂಗ್ಲಿಷು ಅಲ್ಲ, ತಮಿಳು. ಇಂಗ್ಲಿಷು ಕೂಡ ಕನ್ನಡಿಗರ ಅಸಮಾಧನಕ್ಕೆ ಗುರಿಯಾಗಿದ್ದು, ಕನ್ನಡಿಗರ ತುಡಿತ ಈ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ:

* ಇಂಗ್ಲಿಷನ್ನು ಮೊದಲ ತರಗತಿಗಳಲ್ಲಿ ಕಲಿಸಬಾರದು ಎನ್ನುವ ಬೇಡಿಕೆ [4].
* ಕನ್ನಡೇತರ ಚಲನ ಚಿತ್ರ ಪ್ರದರ್ಶನಗಳಿಗೆ ಬಹಿಷ್ಕಾರ.
* ನಾಟಕೀಯವೆನಿಸಿದ ವೀರಪ್ಪನ್ ಪ್ರಸಂಗ.

ಮುಂದೆ ಓದಿ : ಕನ್ನಡ ಮತ್ತು ಇತರ ಭಾಷಿಕರ ದುರುಳತನ »

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more