ಕನ್ನಡ ಮೀಡಿಯಂ ಮಕ್ಕಳಿಗೆ ಜೈ

*ಲೋಹಿತ್ ದ್ಯಾ ಶಿವಮೂರ್ತಿ, ದಾವಣಗೆರೆ
ಇಂಗ್ಳೀಷ್ ಮಾಧ್ಯಮದಿಂದ ಬಂದಂತಹ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ಬಂದಂತ ವಿದ್ಯಾರ್ಥಿಗಳು ಅಂದ್ರೆ ಅಥ್ವಾ ಗ್ರಾಮೀಣ ಮಟ್ಟದಿಂದ ಬಂದಂತಹ ಮಕ್ಳು ಅಂದ್ರೆ ಒಂದ್ರೀತಿ ಕೀಳರಿಮೆಯಿಂದ, ಸಂಕುಚಿತ ಭಾವದಿಂದ ನೋಡೊದಂತು ಸಾಮಾನ್ಯ ಸಂಗ್ತಿ. ಅದಕ್ಕೆ ವಿದ್ಯಾರ್ಥಿಗಳನ್ನ ಮಾತ್ರ ದೂಷಿಸಿ ಏನೂ ಪ್ರಯೋಜ್ನ ಇಲ್ಲಾ. ಯಾಕಂದ್ರೆ ಬಾಲ್ಯದಿಂದ್ಲೆ ಆ ರೀತಿ ಭಾವ್ನೆಗಳನ್ನ ಅವ್ರ ಪೋಷಕರು ಮಕ್ಳ ತಲೆಗೆ ತುಂಬಿರ್ತಾರೆ. ಮೊದ್ಲು ನಮ್ಮ ಸಮಾಜದಲ್ಲಿರೋ ಇಂಗ್ಲೀಷ್ ಪ್ರಿಯರ ಮಡಿವಂತಿಗೆ ಕಡ್ಮೆ ಹಾಗ್ಬೇಕು. ಇಲ್ದೇ ಹೋದ್ರೆ ಇದೇ ಸಂಸ್ಕ್ರತಿ ಮುಂದುವರ್ದು ಭವಿಷ್ಯದಲ್ಲಿ ಕನ್ನಡ ಭಾಷೆ ಕಣ್ಮರೆ ಆಗೋಕ್ಕೆ ಶತಮಾನಗಟ್ಲೆ ಕಾಯೋ ಅವಶ್ಯಕತೆ ಇಲ್ಲಾ ಅನ್ಸುತ್ತೆ.
ಇಷ್ಟಕ್ಕೂ ಇಂಗ್ಲೀಷೇ ಮಾತೃ ಭಾಷೆ ಆಗಿದ್ರೂ, ಇವತ್ತು ಅಮೇರಿಕದಲ್ಲಿ ಯಾಕೆ ಈ ರೀತಿ ನಿರುದ್ಯೋಗ ಸಮಸ್ಯೆ ಅಂತ ಪ್ರಶ್ನೆನೇ ಬರಲ್ವೇ? ಅದಕ್ಕೆ ಇತರೇ ಹಲ್ವಾರು ಕಾರಣಗಳು ಇರ್ಬೌದು. ಆದ್ರೆ ಕೇವ್ಲಾ ಇಂಗ್ಳೀಷ್ ಬರುತ್ತೆ ಅಂದ ಮಾತ್ರಕ್ಕೆ ಉದ್ಯೋಗ ಖಾತ್ರಿ ಅಂತೇನೂ ಇಲ್ವಲ್ಲಾ? ಮೊದ್ಲು ಈ ಭ್ರಮೆ ದೂರ್ವಾಗ್ಬೇಕು.
ಹತ್ತನೇ ತರ್ಗತಿಗಿಂತ ಮುಂದೆ ಕೂಡ ನಮಗಿಷ್ಟ ಬಂನ್ದ ಯಾವ್ದೇ ವಿಷಯ್ವನ್ನಾ ಕನ್ನಡ ಮಾಧ್ಯಮದಲ್ಲಿಯೂ ಕಲಿಯೋ ವ್ಯವಸ್ಥೆ ಖಂಡಿತ ಬರ್ಬೇಕು. ಕಲಿಕೆಗೆ ಮಾಧ್ಯಮವಷ್ಟೇ ಮುಖ್ಯಾ ಅಲ್ಲ. ಕಲಿಯೋ ಭಾವ್ನೆ, ಛಲ, ಆಸಕ್ತಿ ಸೌಕರ್ಯ ಕೂಡ ಇರ್ಬೆಕು. ಸೌಕರ್ಯ ಅಂದಾಕ್ಷಣ ಅದು ಇಂಗ್ಳೀಷ್ ಮಾಧ್ಯಮ ಅಂತಲ್ಲಾ. ಮೊದ್ಲು ಇಂಗ್ಲೀಷ್ ಬಗೆಗಿನ ಅನಗತ್ಯ ವ್ಯಾಮೋಹ ದೂರ್ವಾಗ್ಬೇಕು.
ಇತ್ತೀಚೆಗೆ ಒಂದಿನ ಯುರೋಪಿನಲ್ಲಿ ರೈಲಲ್ಲಿ ಸಂಚರಿಸ್ತಾ ಇದ್ದೆ. ಆಗ ನನ್ನ ಪಕ್ಕ ಕೂತಿದ್ದ ಹುಡ್ಗಿ ದಾರಿ ತುಂಬಾ ಓದ್ತಿದ್ದನ್ನ ಗಮನ್ಸಿ ಪರಿಚಯ ಮಾಡ್ಕಂಡೆ. ಆಕೆ ಫಾರ್ಮಸಿ ವಿದ್ಯಾರ್ಥಿನಿಯಂತೆ. ಅವ್ಳ ಕೈಲಿದ್ದಾ ಪುಸ್ತಕ ಅವ್ಳ ಮಾತೃ ಭಾಷೆಯಲ್ಲಿಯೇ ಇದ್ದದ್ದನ್ನ ಕಂಡು, ನಾನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿದಾಗ (ಪಿ.ಯೂ.ಸಿ) ಮೊದ ಮೊದ್ಲು ಅನುಭವಿಸಿದ ಗೊಂದ್ಲದ ದಿನಗಳನ್ನ ಊಹಿಸ್ಕೊಂಡೆ. ನಂಗೆ ನನ್ನ ಮಾತೃ ಭಾಷೆಯಲ್ಲಿ ಕಲಿಯೋ ಸೌಭಾಗ್ಯ ಇರ್ಲಿಲ್ವಲ್ಲಾ ಅಂತ ಅನ್ನಿಸ್ತು.
ಇವತ್ತು ನಂದೇಶದ ಗ್ರಾಮೀಣ ಮಟ್ಟದ ಪ್ರತಿಭೆಗಳು ಸಹ ಬೆಳಕಿಗೆ ಬರ್ಬೆಕು ಅಂದ್ರೆ ನಮ್ನಮ್ಮಾ ಮಾತೃ ಭಾಷೆಯಲ್ಲೇ ಎಲ್ಲವನ್ನೂ ಕಲಿಯೋ ವ್ಯವಸ್ಥೆ ಖಂಡಿತ ಸ್ವಾಗತಾರ್ಹ. ಆ ಒಂದ್ಮಾತು, ಇಷ್ಟು ಮಾತ್ರಕ್ಕೆ ಇವತ್ತಿನವರ್ಗೆ ನಮ್ಮ ಸಮಾಜದಲ್ಲಿ ಆಗಿರೋ ಅಭಿವೃದ್ದಿ ಕಾರ್ಯಾಗಳೆಲ್ಲಾ ಕೆವ್ಲಾ ಇಂಗ್ಳೀಷ್ ಮಾಧ್ಯಮದ ವಿದ್ಯಾರ್ಥಿಗಳಿಂದ ಅಥ್ವಾ ನಗರ ಪ್ರದೇಶದಿಂದ ಬಂದಿರೋ ಮಕ್ಳಿಂದ ಮಾತ್ರ ಅನ್ನೋ ತೀರ್ಮಾನಕ್ಕೆ ಬಂದ್ಬಿಡ್ಬೇಡಿ. ಎಷ್ಟೇ ಅಸೌಕರ್ಯಗಳಿದ್ರೂ ಸಹ, ಗ್ರಾಮೀಣ ಮಟ್ಟದ ಹಾಗೂ ಕನ್ನಡ ಮಾದ್ಯಮದ ಮಕ್ಳು ಸಹ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಮಾಡ್ತಿದಾರೆ, ಮುಂದೆಯೂ ಮಾಡ್ತಾರೆ.
ಯಾವ್ದೇ ವಿಷ್ಯಾವನ್ನಾ ಮಾತೃ ಭಾಷೆಯಲ್ಲಿಯೇ ಕಲಿ ಬೇಕಾದ್ರೆ, ವಿದ್ಯಾರ್ಥಿಗಳಿಗೂ ಸಾಕಷ್ಟು ಸರಳ್ವಾಗಿ, ಸುಲಭ್ವಾಗಿ ತಕ್ಷಣಕ್ಕೇನೇ ಅರ್ಥ ಆಗುತ್ತೆ. ಆದ್ರೇ ಅಲ್ಲೊಮ್ಮೆ ಇಲ್ಲೊಮ್ಮೆ ಬರುವಾ
* ಗಣಿತದ ಪ್ರಮೇಯಗಳ ನಿರಪಣೆಯೋ
* ವಿಗ್ನಾನದಲ್ಲಿ ಬರೋ ನಾಮಪದಗಳೋ ಅಥ್ವಾ
* ಇನ್ನೂ ಕೆಲ್ವೂ ಸಾಮಾನ್ಯ ಪದಗುಚ್ಚಗಳು
ಅಲ್ಪ ಸ್ವಲ್ಪ ಕಷ್ಟವಾಗ್ಬೌದು. ಅದಕ್ಕೇಂತ ಶಿಕ್ಷಣ ಮಾಧ್ಯಮವನ್ನೇ ಬದಲ್ಸೋದು ಎಷ್ಟು ಸೂಕ್ತ ಹೆಜ್ಜೆ? ಕಲಿಕೆಯಲ್ಲಿ ಮೊದಮೊದ್ಲು ಎಲ್ಲವೂ ಕಷ್ಟವಾಗೋದು ಸಾಮಾನ್ಯ. ಅದಕ್ಕೇ ಅದನ್ನ ಕಲಿಕೆ, ಶಿಕ್ಷಣ ಅಂತ ಅನ್ನೋದು.
ಇಂಗ್ಳೀಷ್ ಮಾಧ್ಯಮದಲ್ಲಿ ಅಂದ್ಮಾತ್ರಕ್ಕೆ ವಿಘ್ನಾನ, ಗಣಿತ ಎಲ್ವೂ ಕಲಿಯಕ್ಕೇ ಸರಲ್ವಾಗುತ್ತೆ, ಸುಲಭ್ವಾಗುತ್ತೆ ಅಂತಾದ್ರೆ
* ಇಂಗ್ಲೀಷ್ನಲ್ಲಿ ಕಠಿಣ ಪದಗಳೇ ಇಲ್ವೇ?
* ಆಗಿದ್ರೆ, ಇಂಗ್ಲೀಷ್ನಲ್ಲಿ ನಿಘಂಟು ಅಂತಾನೇ ಇಲ್ವೇ? ಇದ್ರೇ ಅದನ್ಯಾರೂ ವಿದ್ಯಾರ್ಥಿಗಳು ಬಳಸೊದೇ ಇಲ್ವೇ?
* ಯಾವ್ದೇ ಇಂಗ್ಳೀಷ್ ಪುಸ್ತಕ ಓದಿದ ಕೂಡ್ಲೇ ಎಲ್ವೂ ಸರಳ್ವಾಗಿ ಆಗ್ಬೇಕು ತಾನೇ?
* ಅಂಗಾದ್ರೇ, ಇಂಗ್ಳೀಷ್ ಮಾಧ್ಯಮದ ವಿದ್ಯಾರ್ಥಿಗಳೇಕೆ ಕಾಂನ್ವೆಟ್ಗೆ, ಶಾಲೆಗೆ, ಕಾಲೇಜ್ಗೆ ಹೋಗ್ತಾರೆ?
* ವಿಶೇಷ ಮನೆಪಾಠಕ್ಕೆ (ಟ್ಯೂಷನ್) ಯಾಕೇ ಹೋಗ್ತಾರೆ?
* ಮನೇಲೇ ಕೂತ್ಕಂಡು, ಸ್ವಂತ ಓದಿ ಎಲ್ಲಾ ಕಲ್ಕೋ ಬಹುದಲ್ವೇ?
* ಕೊನೆಗೆ ಒಟ್ಟಿಗೇ ವರ್ಷದಲ್ಲಿ ಒಂದ್ಸಾರಿ ಪರೀಕ್ಷೆ ಬರಿಯೋಕ್ಕೆ ಮಾತ್ರ ಬಂದ್ರೆ ಸಾಕಾಗಲ್ವೇ?
* ಇದ್ರಿಂದಾ ನಮ್ಮ ಸರ್ಕಾರಕ್ಕೂ ಹಾಗೂ ಎಲ್ಲಾ ಪೋಷಕರಿಗೂ ಸಾಕಷ್ಟು ಖರ್ಚು ಕಡ್ಮೆ ಹಾಗ್ತಿತ್ತಲ್ವೇ?
* ಎಲ್ರೂ ತಮ್ತಮ್ಮಾ ಮನೇಲೇ ಒದ್ಕೊಂಡ್ರೆ ಸಾಕು ಅನ್ತಾಂದ್ರೆ ಕೇವ್ಲ ಆಸಕ್ತಿಯೊಂದಿದ್ರೆ ಸಾಕು, ಎಂತಹ ಬಡ ವಿದ್ಯಾರ್ಥಿ ಸಹ ಸಾಕಷ್ಟು ವಿದ್ಯಾಬ್ಯಾಸ ಮಾಡ್ಬೌದಾಗಿತ್ತಲ್ವೇ?
* ಆಗ, ನಂದೇಶದ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು ಇರ್ತಿದ್ದ್ರಲ್ವೇ?
ಆದ್ರೂ ಇವತ್ತು ಇಂಗ್ಲೇಂಡ್, ಅಮೇರಿಕ, ಆಸ್ಟ್ರೇಲಿಯಾ ಇಲ್ಲೇಲ್ಲಾ
* ಕಾಂನ್ವೆನ್ಟ್ ಗಳು
* ಕಾಲೇಜ್ಗಳು
* ವಿವಿಧವಿಶ್ವ ವಿದ್ಯಾನಿಲಯಗಳು
ಅಂತ ಯಾಕಿವೇ? ಅಲ್ಲೇಲ್ಲಾ ಜನರ ಮಾತೃ ಭಾಷೆನೇ ಇಂಗ್ಲೀಷ್ ಅಲ್ವೇ?
ಯುರೋಪ್ ರಾಷ್ಟ್ರಗಳಲ್ಲಿ, ರಷ್ಯಾದಲ್ಲಿ, ಜಪಾನ್ನಲ್ಲಿ, ಅಷ್ಟು ದೂರ ಏಕೆ? ಪಕ್ಕದ ಚೀನಾದಲ್ಲಿ, ಇಂದಿಗೂ ಇಂಗ್ಲೀಷ್ ಭಾಷೆ ಅಂದ್ರೆ ನಂಮ್ದೇಶ್ದಲ್ಲಿ ಸಿಗೋ ರೀತಿಲಿ ವಿಷೇಶ ಪ್ರತಿಷ್ಟೆ, ಘನತೆ, ಮಾರ್ಯಾದೇ ಯಾವ್ದೂ ಸಿಗಲ್ಲಾ. ಆದ್ರೂ ಈ ದೇಶಗಳು ನಂಮ್ದೇಶಕ್ಕಿಂತ ಯಾವುದ್ರಲ್ಲಿ ಹಿಂದೆ ಇದಾವೇ ಸ್ವಾಮಿ?
ನಮ್ಮ ಸಮಾಜ್ದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಳೀಷ್ ಭಾಷೇನ ಬಳ್ಸೋದು ಅಂದ್ರೆ ಅವ್ರ ಪ್ರತಿಷ್ಟೆ, ಘನತೆ, ಗೌರವ ಹೆಚ್ಚಾದಂತೆ ಭಾವಿಸ್ತಾರಲ್ಲಾ? ಅದು ಯಾಕೆ ಅಂತ ಪ್ರಶ್ನೆಗೆ ಉತ್ತರ ಹೇಳಿ ಸ್ವಾಮೀ. ನಿಮ್ಮ ಉತ್ರ ಬರೋವರ್ಗೆ ನಾನು ಜೈ ಹಿಂದ್ ಜೈ ಕರ್ನಾಟಕ ಮಾತೆ ಅಂತ ಏಳ್ತನೇ ಇರ್ತೀನಿ.












Click it and Unblock the Notifications