278700thiruvalluvarಆ.10 ರಂದು ತಿರುವಳ್ಳುವರ್ ಪ್ರತಿಮೆ ಅನಾವರಣ/news/2009/07/12/sarvajna-thiruvalluvar-statue-unveiling-dates-fix.htmlಬೆಂಗಳೂರು, ಜು. 12 : ಕರ್ನಾಟಕ-ತಮಿಳುನಾಡು ನಡುವೆ ಹಲವು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆಗಳ ಅನಾವರಣಕ್ಕೆ ಅಂತೂ ಇಂತೂ ಕಾಲ ಕೂಡಿ ಬಂದಿದೆ. ಆಗಸ್ಟ್ 10 ರಂದು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಹಾಗೂ ಆಗಸ್ಟ್ 13 ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆಗಳು ಅನಾವವರಣಗೊಳ್ಳಲಿವೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮುಖ್ಯಮಂತ್ರಿ ಬಿ 37930http://kannada.oneindia.com/img/2009/07/12-thiruvalluvar1e.jpg278700thiruvalluvarಜಗತ್ತಿನ ಅತ್ಯಂತ ಹಳೆ ಪ್ರತಿಮೆ ಇದೆನಾ?/news/2009/08/03/oldest-statue-in-the-world-perhaps.htmlಜಗತ್ತಿನ ಅತ್ಯಂತ ಪ್ರಾಚೀನ ಪ್ರತಿಮೆ ಯಾವುದು? ಈ ಬಗ್ಗೆ ಮಾಹಿತಿ ಹುಡುಕಲು ಗೂಗಲ್ ಮಾಡುತ್ತಾ ಹೋದರೆ ನಾನಾ ವಾದ ಪ್ರತಿವಾದಗಳನ್ನು ಮಂಡಿಸುವ ಚಿತ್ರಸಮೇತ ವರದಿಗಳು ಎದುರಾಗುತ್ತವೆ. ಅನೇಕರು, ಪಂಡಿತರು, ಪುರಾತತ್ವ ತಜ್ಞರು ಹಾಗೂ ಬ್ಲಾಗಿಗಳು 'ಇದೇ ಪ್ರಪಂಚದ ಪ್ರಥಮ ಪ್ರತಿಮೆ' ಎಂದು ಚಿತ್ರ ಸಮೇತ, ಪುರಾವೆ ಸಮೇತ ವಾದ ಮಂಡಿಸುತ್ತಾರೆ. ಆದರೂ ಮನುಷ್ಯ ಸ್ಥಾಪಿಸಿದ ಮೊಟ್ಟಮೊದಲ 38385http://kannada.oneindia.com/img/2009/08/03-oldest-statue1.jpg278700thiruvalluvarತಿರುವಳ್ಳುವರ್ : ಎಲ್ಲಾ ಬಿಟ್ಟು ಭಂಗಿ ನೆಟ್ಟ ಯಡಿಯೂರಪ್ಪ!/literature/my-karnataka/2009/0805-thiruvalluvar-yeddyurappa-karunanidhi.htmlಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ರಾಶಿರಾಶಿ ಸಮಸ್ಯೆಗಳಿರುವಾಗ ನಮ್ಮ ಯಡಿಯೂರಪ್ಪ ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ? ವಿಶ್ರಾಂತಿಗಾಗಿ ಬೆಂಗಳೂರಿಗೆ ಬಂದಿರುವ ಕರುಣಾನಿಧಿಯೊಂದಿಗೆ ಪ್ರತಿಮೆ ಸ್ಥಾಪನೆ ಕುರಿತ ಚರ್ಚೆಯ ಅಗತ್ಯವೇನಿತ್ತು? ಅಪ್ಪಟ ಕನ್ನಡಿಗರ ಮೂಗಿಗೆ ಕೆಟ್ಟ ವಾಸನೆ ಬಡಿಯುತ್ತಿದೆ.* ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರುನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ 38437http://kannada.oneindia.com/img/2009/08/05-bsy-invites-karuna1.jpg278700thiruvalluvarತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ/literature/my-karnataka/2009/0806-thiruvalluvar-statue-war-in-bengaluru.htmlಬೆಂಗಳೂರು, ಆ. 6 : ಬೆಂಗಳೂರಿನ ಪ್ರಶಾಂತ ಹಲಸೂರು ಕೆರೆ ಆವರಣದಲ್ಲಿ ಉದ್ದೇಶಿತ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಗತ್ಯವಾದ ಸರಕಾರಿ ಸಿದ್ಧತೆಗಳು ಭರದಿಂದ ಸಾಗಿವೆ. ಅಂತೆಯೇ, ಪ್ರತಿಮೆ ಅನಾವರಣಕ್ಕೆ ಪ್ರತಿಭಟಿಸಲು ಸಜ್ಜಾಗಿರುವ ಕನ್ನಡ ಗುಂಪುಗಳು ತಮ್ಮ ಅಸ್ತ್ರಗಳನ್ನು ಮೊನಚುಗೊಳಿಸುತ್ತಿವೆ. ಈ ಮಧ್ಯೆ, ಪ್ರತಿಮೆ ಅನಾವರಣ ನೆನೆಗುದಿಗೆ ಬಿದ್ದಿದ್ದರಿಂದ ಕಳೆದ 18 ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ 38458http://kannada.oneindia.com/img/2009/08/06-ulsoor-lake1.jpg278700thiruvalluvarಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?/literature/my-karnataka/2009/0806-around-thiruvalluvar-statue-installation.html* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ 38468http://kannada.oneindia.com/img/2009/08/06-thiruvalluvar1.jpg537279statueತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯ/literature/articles/2009/0720-thirukkural-tamil-poet-thiruvalluvar.htmlತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ 38088http://kannada.oneindia.com/img/2009/07/20-thiruvalluvar1.jpg537279statueವಚನಕಾರ ಸರ್ವಜ್ಞನಿಗೆ ಒಂದು ಡಜನ್ ಬಹುಪರಾಕ್/literature/people/2009/0721-kannada-vachanakara-poet-sarvajna.html"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ. ಚರಿತ್ರಕಾರರ ಪ್ರಕಾರ, ಈತನ ನಿಜವಾದ ಹೆಸರು ಪುಷ್ಪದತ್ತ , ಈತನ ತ೦ದೆಯ ಹೆಸರು ಯಾರಿಗೂ ಗೊತ್ತಿಲ್ಲ. ಬೆಳೆದದ್ದು ಒಬ್ಬ ಶೈವ ದ೦ಪತಿಗಳ ಬಳಿಯಲ್ಲಿ. ಸಾಕು ತ೦ದೆ 38112http://kannada.oneindia.com/img/2009/07/21-sarvajna1.jpg537279statueತಿರುವಳ್ಳುವರ್ ಪ್ರತಿಮೆ : ಆಗಸ್ಟ್ 3 ರಂದು ಸಭೆ/news/2009/07/28/tiruvalluvar-statue-all-party-meet-on-aug-3.htmlಬೆಂಗಳೂರು, ಜು. 28 : ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ರಾಜ್ಯ ಸರಕಾರದ ವತಿಯಿಂದಲೇ ಬಹಳ ಅರ್ಥಪೂರ್ಣವಾಗಿ ನಡೆಸಲಾಗುವುದು. ಈ ಕುರಿತು ಚರ್ಚಿಸಲು ಆಗಸ್ಟ್ 3 ರಂದು ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ಕಾರ್ಯಕ್ರಮದ ಸ್ವರೂಪ ಕುರಿತು ಚರ್ಚಿಸಲು ಪ್ರತಿಪಕ್ಷ ನಾಯಕರು, ಎಲ್ಲಾ ಪಕ್ಷಗಳ ಅಧ್ಯಕ್ಷರು, ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ 38252http://kannada.oneindia.com/img/2009/07/28-thiruvalluvar1.jpg537279statueತಿರುವಳ್ಳುವರ್ ಪ್ರತಿಮೆ ಅನಾವರಣ ಮುಂದೂಡಿಕೆ ?/news/2009/07/31/tiruvalluvar-statue-unveil-likely-to-postpone.htmlಬೆಂಗಳೂರು, ಜು. 31 : ತೀವ್ರ ವಿವಾದಕ್ಕೆ ಕಾರಣವಾಗಿರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಂದೂಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದ ಐದು ಕ್ಷೇತ್ರಗಳಲ್ಲಿ ಆಗಸ್ಟ್ 18 ರಂದು ಉಪಚುನಾವಣೆಗಳು ನಡೆಯುತ್ತಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಿಂದ ಉಂಟಾಗಬಹುದಾದ ಗದ್ದಲದಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. 38330http://kannada.oneindia.com/img/2009/07/31-thiruvalluvar1.jpg537279statueಜಗತ್ತಿನ ಅತ್ಯಂತ ಹಳೆ ಪ್ರತಿಮೆ ಇದೆನಾ?/news/2009/08/03/oldest-statue-in-the-world-perhaps.htmlಜಗತ್ತಿನ ಅತ್ಯಂತ ಪ್ರಾಚೀನ ಪ್ರತಿಮೆ ಯಾವುದು? ಈ ಬಗ್ಗೆ ಮಾಹಿತಿ ಹುಡುಕಲು ಗೂಗಲ್ ಮಾಡುತ್ತಾ ಹೋದರೆ ನಾನಾ ವಾದ ಪ್ರತಿವಾದಗಳನ್ನು ಮಂಡಿಸುವ ಚಿತ್ರಸಮೇತ ವರದಿಗಳು ಎದುರಾಗುತ್ತವೆ. ಅನೇಕರು, ಪಂಡಿತರು, ಪುರಾತತ್ವ ತಜ್ಞರು ಹಾಗೂ ಬ್ಲಾಗಿಗಳು 'ಇದೇ ಪ್ರಪಂಚದ ಪ್ರಥಮ ಪ್ರತಿಮೆ' ಎಂದು ಚಿತ್ರ ಸಮೇತ, ಪುರಾವೆ ಸಮೇತ ವಾದ ಮಂಡಿಸುತ್ತಾರೆ. ಆದರೂ ಮನುಷ್ಯ ಸ್ಥಾಪಿಸಿದ ಮೊಟ್ಟಮೊದಲ 38385http://kannada.oneindia.com/img/2009/08/03-oldest-statue1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ | Thiruvalluvar | Statue wars | Halasuru Lake | Law and order | KaRaVe | Waterloo - ತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ - Kannada Oneindia

ತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ

Thiruvalluvar statue will be installed at Ulsoor lake in Bengaluru
ಬೆಂಗಳೂರು, ಆ. 6 : ಬೆಂಗಳೂರಿನ ಪ್ರಶಾಂತ ಹಲಸೂರು ಕೆರೆ ಆವರಣದಲ್ಲಿ ಉದ್ದೇಶಿತ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಗತ್ಯವಾದ ಸರಕಾರಿ ಸಿದ್ಧತೆಗಳು ಭರದಿಂದ ಸಾಗಿವೆ. ಅಂತೆಯೇ, ಪ್ರತಿಮೆ ಅನಾವರಣಕ್ಕೆ ಪ್ರತಿಭಟಿಸಲು ಸಜ್ಜಾಗಿರುವ ಕನ್ನಡ ಗುಂಪುಗಳು ತಮ್ಮ ಅಸ್ತ್ರಗಳನ್ನು ಮೊನಚುಗೊಳಿಸುತ್ತಿವೆ. ಈ ಮಧ್ಯೆ, ಪ್ರತಿಮೆ ಅನಾವರಣ ನೆನೆಗುದಿಗೆ ಬಿದ್ದಿದ್ದರಿಂದ ಕಳೆದ 18 ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ತಯಾರಾಗಿದ್ದ ತಿರುವಳ್ಳವರ್ ಪ್ರತಿಮೆಯನ್ನು ಬಟ್ಟೆ ಕಟ್ಟಿ ಇಡಲಾಗಿತ್ತು. ಇದೀಗ ಆ ಪ್ರತಿಮೆಯನ್ನು ತೆಗೆದು ಮೂಲ ಕಂಚಿನ ಪ್ರತಿಮೆಯನ್ನು ಉದ್ದೇಶಿತ ಜಾಗದಲ್ಲಿ ಕುಳ್ಳಿರಿಸಲಾಗಿದೆ.

ರಾತ್ರೋರಾತ್ರಿ ತಿರುವಳ್ಳುವರ್ ಪ್ರತಿಮೆಯನ್ನು ಬದಲಾಯಿಸಲಾಗಿದೆ ಎಂಬ ಪುಕಾರನ್ನು ಕೆಲವು ಇಲೆಕ್ಟ್ರಾನಿಕ್ ಮಾಧ್ಯಮಗಳು ಬುಧವಾರ ಸೃಷ್ಟಿಸಿದ್ದವು. ಆದರೆ, ತಾತ್ಕಾಲಿಕ ಪ್ರತಿಮೆಯನ್ನು ಕೆಳಗಿಳಿಸಿ ಉದ್ದೇಶಿತ ಮೂಲ ಪ್ರತಿಮೆಯನ್ನು ಮಾತ್ರ ಕುಳ್ಳಿರಿಸಲಾಗಿದೆಯಷ್ಟೆ ಎಂದು ತಮಿಳು ಸಂಘದ ಪದಾಧಿಕಾರಿಗಳು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಇನ್ನೊಂದೆಡೆ, ಕನ್ನಡ ಸಾಹಿತಿಗಳು ಹಾಗೂ ವಿರೋಧ ಪಕ್ಷಗಳ ಬೆಂಬಲದಿಂದ ಮತ್ತು ಭದ್ರತಾದಳದ ತೋಳ್ಬಲದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪ್ರತಿಮೆ ಅನಾವರಣ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.

ತಿರುವಳ್ಳುವರ್ ಪ್ರತಿಮೆ ಅನಾವರಣ ವಿವಾದದಲ್ಲಿ ಮೂರು ಮುಖ್ಯ ಅಂಗಗಳು ಕಾರ್ಯೋನ್ಮುಖವಾಗಿವೆ. ಒಂದು ಸರಕಾರ. ಇನ್ನೊಂದು, ಅನಾವರಣಕ್ಕೆ ವಿರೋಧ ಪಡಿಸುತ್ತಿರುವ ವಾಟಾಳ್ ಮತ್ತು ಕರವೇ ಕನ್ನಡ ಚಳವಳಿ ಗುಂಪುಗಳು. ಮೂರನೆಯ ಅಂಗ ಹರ್ಷೋಲ್ಲಾಸದಿಂದ ತುಂಬಿರುವ ಕರ್ನಾಟಕದಲ್ಲಿರುವ ತಮಿಳು ಸಮುದಾಯ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತಮಿಳರ ಆರಾಧ್ಯ ಗುರು ತಿರುವಳ್ಳುವರ್ ಪ್ರತಿಮೆ ಅನಾವರಣ ಸಮಾರಂಭಕ್ಕೆ ರಾಜ್ಯದಲ್ಲಿರುವ ಎಲ್ಲ ತಮಿಳು ಬಂಧುಗಳು ಆಗಮಿಸಬೇಕೆಂದು ಬೆಂಗಳೂರು ತಮಿಳು ಸಂಘ ಕರೆಕೊಟ್ಟಿದೆ. ರಾಜ್ಯದಲ್ಲಿರುವ ಎಲ್ಲ ತಮಿಳು ಸಂಘ ಸಂಸ್ಥೆಗಳಿಗೆ ತಲುಪಿರುವ ಈ ಆಹ್ವಾನ ಸುತ್ತೋಲೆಯಲ್ಲಿ ಈ ವಿಷಯವನ್ನು ಸಾರಲಾಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ತಮಿಳರು ಹಲಸೂರಿಗೆ ಲಗ್ಗೆ ಇಡಲು ಸನ್ನದ್ಧರಾಗಿದ್ದಾರೆ. ತಮಿಳರ ಮುಖ್ಯಮಂತ್ರಿ ಕರುಣಾನಿಧಿ ಇದೀಗ ಬೆಂಗಳೂರಿನಲ್ಲಿ ಠಿಕಾಣಿ ಹೂಡಿರುವುದು ತಮಿಳರ ಉತ್ಸಾಹಕ್ಕೆ ಬಿಸಿನೀರು ಎರಚಿದೆ. ಇದೇ ವೇಳೆ ಕಾರ್ಯಕ್ರಮ ನಡೆಸುವುದಕ್ಕೆ ತಮಿಳುನಾಡು ಸರಕಾರ ತಮಿಳು ಸಂಘಕ್ಕೆ 40 ಲಕ್ಷರೂ ಕೊಟ್ಟಿದೆ.

ಅತ್ತ ಚೆನ್ನೈನಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆ ಅನಾವರಣಕ್ಕೂ ಸಿದ್ಧತೆಗಳು ಸಾವಧಾನದಿಂದ ನಡೆಯುತ್ತಿವೆ. 9.1 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಚೆನ್ನೈನ ಜನನಿಬಿಡ, ಆದರೆ ಪ್ರಶಾಂತ ಜೀವಾ ಪಾರ್ಕಿನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಕೆಲಸಕ್ಕಾಗಿಯೇ ಕರ್ನಾಟಕದಿಂದ 20 ಮಂದಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮತ್ತಿತರ ಸಿಬ್ಬಂದಿವರ್ಗವನ್ನು ನೇಮಿಸಲಾಗಿದೆ. ಸರ್ವಜ್ಞ ಮೂರ್ತಿಯ ವಿಗ್ರಹವನ್ನು ರೂಪಿಸಿರುವವರು ಹೊಸಕೋಟೆಯ ಹೆಸರಾಂತ ಶಿಲ್ಪಿ ಶಂಕರ ಸ್ತಪತಿ. ಚೆನ್ನೈನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಊರಿಗೆ ಸರ್ವಜ್ಞ ಬರುತ್ತಿರುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. 53 ವರ್ಷಗಳಿಂದ ತಮಿಳಿನಾಡಿನಲ್ಲಿದ್ದರೂ ಅಷ್ಟೇನೂ ಸುದ್ದಿಯಲ್ಲಿರದ ಅಯನಾವರಂ ಕನ್ನಡ ಸಂಘ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಸ್ವಲ್ಪ ಸುದ್ದಿ ಮಾಡುತ್ತಿದೆ.

ತಿರುವಳ್ಳುವರ್ ಪ್ರತಿಮೆ ಅನಾವರಣ ಗಲಾಟೆ ಕರ್ನಾಟಕದಲ್ಲಿ ಸಾಕಷ್ಟು ಧೂಳು ಎಬ್ಬಿಸಿದೆ. ಯಡಿಯೂರಪ್ಪ ಕನ್ನಡಿಗರ ದ್ರೋಹಿ ಎಂದು ಕನ್ನಡ ಕಾರ್ಯಕರ್ತರು ಆಪಾದಿಸುತ್ತಿದ್ದರೆ, ಉಭಯ ರಾಜ್ಯಗಳ ಸಂಬಂಧ ವೃದ್ಧಿಯಾಗುವುದಕ್ಕೆ ಪ್ರತಿಮೆ ಅನಾವರಣ ಮಹತ್ವದ ಹೆಜ್ಜೆ ಎಂದು ಸರಕಾರಿ ಗಂಟಲುಗಳು ಹೇಳುತ್ತಿವೆ. ಬುದ್ಧಿಜೀವಿ ಸಾಹಿತಿಗಳು ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಅನಾವರಣ ಕಾರ್ಯಕ್ರಮ ಭಂಗಕ್ಕೆ ತಾವು ಶತಸ್ಸಿದ್ದ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡರು ಘೋಷಿಸಿರುವುದು ನಗರದಲ್ಲಿ ಕಾನೂನು ಮತ್ತು ಶಿಸ್ತು ಅಲ್ಲೋಲಕಲ್ಲೋಲವಾಗುವ ಸೂಚನೆ ಕೊಡುತ್ತಿದೆ. ಕಾನೂನನ್ನು ಕೈಗೆತ್ತಿಕೊಂಡು ಗಲಾಟೆ ಸೃಷ್ಟಿಸುವ ಶಕ್ತಿಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಒಂದು ಸರಕಾರ ಏನು ಮಾಡುತ್ತದೋ ಅದನ್ನು ತಾನೂ ಮಾಡಲು ಯಡ್ಡಿ ಮತ್ತು ಗೃಹಮಂತ್ರಿ ಆಚಾರ್ಯ ರೆಡಿ ಆಗಿದ್ದಾರೆ.

ಇತ್ತೀಚೆಗೆ ಬಂದಿರುವ ಸುದ್ದಿಯೇನೆಂದರೆ, ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ತಡೆಯಬೇಕೆಂದು ವಾಟಾಳ್ ನಾಗರಾಜ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕನ್ನಡಿಗರು ಮತ್ತು ತಮಿಳರ ಬಾಂಧವ್ಯ ವರ್ಧನೆಗೆ ಅಡ್ಡಗಾಲು ಹಾಕುತ್ತಿರುವುದಕ್ಕೆ ಅರ್ಜಿದಾರರನ್ನು ಕರ್ನಾಟಕ ಹೈಕೋರ್ಟ್ ನೇರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರಿಂದ ಅನಾವರಣದ ಕೆಲಸ ಮತ್ತಷ್ಟು ಸುಗಮವಾದಂತಾಗಿದೆ.

ಈಗತಾನೆ ವಾಹಿನಿಗೆ ಬಂದ ಒಂದು ಕವನವನ್ನು ದಟ್ಸ್ ಕನ್ನಡ ಸಾದರಪಡಿಸುತ್ತಿದೆ.

ಪ್ರತಿಮೆ ಅನಾವರಣ

ಇಂದೆಲ್ಲಿ ನೋಡಿದರಲ್ಲಿ ಗಲ್ಲಿ
ಗಲ್ಲಿಗಳಲ್ಲಿ ನಡೆಯುತಿಹುದು
ಪ್ರತಿಮೆಗಳ ಅನಾವರಣ
ಶಿಲ್ಪವಾಗಿ ನಿಲ್ಲುವವರೇ
ಇಳಿದು ಬಂದು ಮಾಡುತಿಹರು
ಅವರದೇ ಪ್ರತಿಮೆಗಳ ಅನಾವರಣ

ಹಿಂದೆಯೂ ನಡೆಯುತ್ತಿತ್ತು
ರಾಜ ಬೀಧಿಗಳಲ್ಲಿ
ಪ್ರತಿಮೆಗಳ ಅನಾವರಣ
ಮೂರ್ತಿಗಳಾಗಿ ನಿಲ್ಲಿರೆಂದು ಆ
ದೇವರುಗಳನೇ ಕೋರಿದರೂ ತಪ್ಪದೇ
ಮಾಡುತ್ತಿದ್ದರು ಪ್ರತಿಮೆಯ ನಿರಾಕರಣ

ಅಂದಿನ ಪ್ರತಿಮೆಗಳು ಆಗಿದ್ದವು
ನಮ್ಮೆಲ್ಲರಿಗೆ ಸ್ಪೂರ್ತಿಯಾಗಿ
ಇಂದಿನ ಪ್ರತಿಮೆಗಳೂ ಆಗುವವು
ರಾಜಕಾರಣಿಗಳ ಸಾಧನೆಗಳಾಗಿ
ಚಳುವಳಿಗಾರರ ಬ್ರಹ್ಮಾಸ್ತ್ರಗಳಾಗಿ
ಸರ್ಕಾರೀ ಪುಸ್ತಕದ ಅಂಕಿಗಳಾಗಿ
ಮುಂಪೀಳಿಗೆ ಉತ್ತರಿಸಬೇಕಾದ ಪ್ರಶ್ನೆಗಳಾಗಿ

ರಘುನಾಥ್. ಪಿ.ಜಿ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+