ಐಟಿ ಕನ್ನಡಿಗರ ಅದ್ಭುತ ಹಾಡು 'ಕರುನಾಡು ಕರುನಾಡು'

ಕನ್ನಡಾಭಿಮಾನ ಮೆರೆಯುವ ಮತ್ತೊಂದು ಸುಮಧುರ ಹಾಡೊಂದು ಜನವರಿ 26ರಂದು ಹೊಸದಾಗಿ ಸೇರ್ಪಡೆಗೊಂಡಿದೆ. ಐಟಿ ಕನ್ನಡಿಗರು ಅರ್ಪಿಸಿರುವ ಕನ್ನಡದ ಅದ್ಭುತ ಹಾಡು - "ಕರುನಾಡು ಕರುನಾಡು".

ವಿಶೇಷವೆಂದರೆ, ಐಟಿ ಕ್ಷೇತ್ರದಲ್ಲಿರುವ ಹೆಚ್ಚಿನವರೇ ಸೇರಿ ಮಾಡಿರುವ ಈ ಹಾಡು ಯಾವ ವೃತ್ತಿಪರರು ಸೃಷ್ಟಿಸುವ ಹಾಡಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ. ಪ್ರತಿ ವಿಭಾಗದಲ್ಲೂ ತಮ್ಮ ಮೊದಲ ಪ್ರಯತ್ನದಲ್ಲೇ ವೃತ್ತಿಪರರಂತೆ ಕಾರ್ಯ ನಿರ್ವಹಿಸಿದ್ದಾರೆ ಕನ್ನಡದ ಟೆಕ್ಕಿಗಳು.

ಈ ತಂಡದ ಹೆಚ್ಚಿನವರು ಫಿಲಿಪ್ಸ್ ಸಂಸ್ಥೆಯ ಐಟಿ ಉದ್ಯೋಗಿಗಳು. ನವೆಂಬರ್ ನಲ್ಲಿ ಫಿಲಿಪ್ಸ್ ನಲ್ಲಿ ನಡೆದ ಚೊಚ್ಚಲ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಹಾಡಿನ ಆಡಿಯೋ ಆವೃತ್ತಿಯನ್ನು ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ವಸಂತ್ ಶೆಟ್ಟಿ ಹಾಗು ಸಂಸ್ಥೆಯ ಮುಖ್ಯಸ್ಥರಾದ ಶ್ರೀನಿವಾಸ್ ಪ್ರಸಾದ್ ರವರುಗಳು ಬಿಡುಗಡೆ ಮಾಡಿದ್ದರು. ಅದರ ಲಿರಿಕಲ್ ವಿಡಿಯೋ ಆವೃತ್ತಿಯನ್ನು 26ರ ಜನವರಿ ಗಣರಾಜ್ಯೋತ್ಸವದಂದು ತಂಡವು ಯುಟ್ಯೂಬ್ ನಲ್ಲಿ ಬಿಡಿಗಡೆ ಮಾಡಿದೆ.

New kannada album song by Kannadiga techies

ನೋಡಿದವರೆಲ್ಲರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಗೀತೆಯ ಸಾಹಿತಿ ವೆಂಕಟೇಶ್ ಕುಲಕರ್ಣಿ ಅವರಿಗೆ ಈಗಾಗಲೇ ಅನೇಕ ಸಿನೆಮಾಗಳಿಗೆ ಸಾಹಿತ್ಯ ಬರೆದುಕೊಡುವಂತೆ ಅವಕಾಶಗಳು ಒದಗಿಬರುತ್ತಿವೆ. ತಂಡವು ಮುಂದಿನ ದಿನಗಳಲ್ಲಿ ಇದರ ವಿಡಿಯೋ ಆವೃತ್ತಿಯನ್ನು ಮಾಡುವ ಉದ್ದೇಶ ಹೊಂದಿದೆ.

ನೀವೂ ನೋಡಿರದಿದ್ದರೆ, ಈ ಲಿಂಕನ್ನು ಕ್ಲಿಕ್ಕಿಸಿ, ನೋಡಿ ಆನಂದಿಸಿ

ಸಾಹಿತ್ಯ : ವೆಂಕಟೇಶ್ ಕುಲಕರ್ಣಿ
ಸಂಗೀತ : ಅಭಿಲಾಶ್ ಮತ್ತು ಜೋಎಲ್
ಸಂಕಲನ : ಶಶಿಧರ ಪಿ
ಗಿಟಾರ್ : ಅರ್ಜಿತ್ ದಾಸ್
ಗಾಯನ : ಶಶಾಂಕ್ ಶೇಷಗಿರಿ, ಅನನ್ಯ ಪ್ರಕಾಶ್, ಚಂದನ್ ಗುಪ್ತ

ಈ ತಂಡದ ಕಲಾ ಸೇವೆಗೆ ಹಾಗು ಕನ್ನಡ ಸೇವೆಗೆ ಶುಭಾಶಯವನ್ನು ಒನ್ಇಂಡಿಯಾ ಕನ್ನಡ ತಂಡವು ಶುಭಕೋರುತ್ತದೆ. ಮತ್ತಷ್ಟು ನಮ್ಮ ಪ್ರತಿಭೆಗಳಿಗೆ ಅವಕಾಶಗಳು ಲಭಿಸಿ ಯಶಸ್ಸು ಕಾಣುವಂತಾಗಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+