ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಕಿಂ ನಂಜುಂಡ' ನ ದೃಶ್ಯಮಾಲಿಕೆ ನೋಡಿ

By Staff
|
Google Oneindia Kannada News

nanjangudu,mysuru, img courtsey:http://shutterbug.nu/ದೇವಾಲಯಗಳ ತವರೂರು ಮೈಸೂರು. ಈ ಊರಿಗೆ ಕಡಿಮೆ ದೂರದಲಿದೆ ನಂಜನಗೂಡು. ಕಪಿಲ ನದಿಯ ತಟದಲ್ಲಿರುವ ಶ್ರೀನಂಜುಂಡೇಶ್ವರನ ದಿವ್ಯ ಸನ್ನಿಧಿಯ ಈ ಊರು ಆಸ್ತಿಕರ ಪಾಲಿಗೆ ಸ್ವರ್ಗ. ನಂಜುಂಡನಿಗೆ ಶ್ರೀಕಂಠೇಶ್ವರನೆಂಬ ಹೆಸರು ಉಂಟು. ಈತನ ದೇಗುಲವನ್ನು ದರ್ಶಿಸಲು ಒಂದು ದಿನ ಕೂಡ ಸಾಲದು.

ಅಷ್ಟು ವಿಶಾಲ ಪ್ರಾಂಗಣ ಹಾಗೂ ಪರಿವಾರ ದೇವತೆಗಳೊಂದಿಗೆ ನೆಲೆಸಿದ್ದಾನೆ ನಮ್ಮ ನಂಜುಂಡ. ಮೈಸೂರು ಒಡೆಯರಿಗೆ ಈತನ ಮೇಲೆ ಮಹಾಭಕ್ತಿ. ನಂಜುಂಡನಿಗೆ ಅಪಾರ ಕೊಡುಗೆಗಳನ್ನು ನಿಡಿರುವ ರಾಜ ವಂಶಸ್ಥರು ಶ್ರೀಕಂಠಮುಡಿ ಎಂಬ ವಿಶೇಷ ಉತ್ಸವವನ್ನು ನಡೆಸಿಕೊಂಡು ಬಂದಿದ್ದು ಈ ಉತ್ಸವಕ್ಕಾಗಿ ದೇವರಿಗೆ ವಿಶೇಷ ಆಭರಣಗಳನ್ನು ನೀಡಿದ್ದಾರೆ. ಟಿಪ್ಪುಸುಲ್ತಾನನ ಪಟ್ಟದಾನೆಗೆ ಕಣ್ಣುಕೊಟ್ಟಿದರಿಂದ ಈತನಿಗೆ 'ಹಕಿಂನಂಜುಂಡ' ಎಂಬ ಹೆಸರು ಇದೆ.

ದೇವಾಲಯದಲ್ಲಿ ನೆರವೇರುವ ಶ್ರೀಕಂಠಮುಡಿ, ಗೌತಮ ರಥೋತ್ಸವ, ಗಿರಿಜಾ ಕಲ್ಯಾಣೋತ್ಸವ, ತೆಪ್ಪೋತ್ಸವ ಮೊದಲಾದ ವಿಶೇಷ ಉತ್ಸವಗಳನ್ನು ಹಾಗೂ ಆತನ ದೇಗುಲವನ್ನು ನೇರವಾಗಿ ನೋಡಲಾಗದ ಭಕ್ತಜನತೆಗೆ ವಿ.ಸಿ.ಡಿ ರೂಪದಲ್ಲಿ ತೋರಿದ್ದಾರೆ ರೇವತಿ ಮೆಲೋಡಿಸ್ ಸಂಸ್ಥೆಯವರು. ಈ ದೃಶ್ಯಾವಳಿಯಲ್ಲಿ ಶ್ರೀಕಂಠನ ಉತ್ಸವವನ್ನು ಕುರಿತಾದ ಹತ್ತು ಗೀತೆಗಳಿದೆ. ಯುವರಾಜ್, ಕಸ್ತೂರಿಶಂಕರ್, ವಿಷ್ಣು, ಜ್ಯೋತಿ ಈ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಸೊರಟ್ ಅಶ್ವತ್ ರಚಿಸಿರುವ ಈ ಭಕ್ತಿಸಾಹಿತ್ಯಕ್ಕೆ ವೀರಮಣಿ-ಸೋಮು ಸಂಗೀತ ಸಂಯೋಜಿಸಿದ್ದಾರೆ.

ಈ ಭಕ್ತಿ ಸಂಪುಟದ ಬೆಲೆ - 40.ರು

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X