ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.25ರಂದು ಅನಕೃ 'ಆಡಿಯೋ ಬುಕ್' ಬಿಡುಗಡೆ

By Staff
|
Google Oneindia Kannada News
Anakruಬೆಂಗಳೂರು, ಜೂ.23 : ಕನ್ನಡದಲ್ಲೊಂದು ಹೊಸ ಪ್ರಯೋಗ ಎಂದೇ ಹೇಳಬಹುದಾದ ಚಟುವಟಿಕೆಗೆ ಚಾಲನೆ ದೊರೆತಿದೆ. ಅದು ಖ್ಯಾತ ಸಾಹಿತಿ ಅನಕೃ ಅವರ ಹೆಸರಿನ ಮೂಲಕ ಹೊಸ ಪರಿಚಯ ಆಡಿಯೋ ಬುಕ್.

ಕನ್ನಡ ಸಾರಸ್ವತ ಲೋಕಕ್ಕೆ ಅ.ನ.ಕೃಷ್ಣರಾಯರು ವಿಶೇಷ ಕೊಡುಗೆ ಅಪಾರ. 1908 ರಿಂದ 1971ರ ವರೆಗೆ ಕನ್ನಡ ಕಾದಂಬರಿಯ ಸಾರ್ವಭೌಮರೆಂದೇ ಗುರುತಿಸಲ್ಪಟ್ಟವರು. ಅವರದು ಬಹುಮುಖ ಪ್ರತಿಭೆ. ಬರಹಗಾರ, ಪತ್ರಕರ್ತ, ನಾಟಕಕಾರ, ವಿಮರ್ಶಕ ಹೀಗೆ ಹಲವು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಂತಹ ವ್ಯಕ್ತಿಯ ಶತಮಾನೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಅನಕೃ ಪ್ರತಿಷ್ಠಾನ ಮತ್ತು ಕುಟುಂಬ ವರ್ಗದ ಸಹಕಾರದೊಂದಿಗೆ ಈ ಪ್ರಯತ್ನ ನಡೆದಿದೆ. ಇದರ ಬಿಡುಗಡೆ ಜು. 25 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಏನಿದು ಆಡಿಯೋ ಬುಕ್?

ಕನ್ನಡದ ಬಗ್ಗೆ ಆಸಕ್ತಿ ಇರುವ, ಆದರೆ ಕನ್ನಡ ಓದಲು ಬಾರದ ಅಥವಾ ಓದಲು ಸಮಯವಿರದವರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಗೊಂಡಿರುವ ಪ್ರಸ್ತುತಿ. ಅನಕೃ ವಿರಚಿತ ಸಂಧ್ಯಾರಾಗ ಕೃತಿಯನ್ನು ಆಡಿಯೋ ಬುಕ್ ನಲ್ಲಿ ಅಳವಡಿಸಲಾಗಿದೆ. ಇದು ಡೈಲಾಗ್ ರೂಪದಲ್ಲಿದ್ದು,ಕಲಾವಿದ ರಾಜಾರಾಮ್ ನಿರ್ದೇಶನದಲ್ಲಿ ಅಪರ್ಣಾ ನಿರೂಪಿಸಿದ್ದಾರೆ. ಕೇಶವ ರಾವ್ ಸಹನಿರ್ದೇಶನ ಮಾಡಿದ್ದಾರೆ. ಅನಕೃ ಕುಟುಂಬದ ಒಂದಿಬ್ಬರು ಕಂಠದಾನವನ್ನೂ ಮಾಡಿದ್ದಾರೆ. ಒಟ್ಟು 180 ನಿಮಿಷದ ಕಾರ್ಯಕ್ರಮದ ಟ್ರ್ಯಾಕ್ ಎಂಪಿ 3 ರೂಪಾಂತರದಲ್ಲಿದೆ. ಇದರ ಬೆಲೆ 150 ರು.ಗಳು.

ಕನ್ನಡದ ಬಗ್ಗೆ ಆಸಕ್ತಿ ಇರುವ ಆದರೆ ಕನ್ನಡಓದಲು ಬಾರದವರಿಗೆ ಅನಕೃ ಅವರ ಸಂಧ್ಯಾರಾಗ ಕೃತಿಯನ್ನು ತಲುಪಿಸುವ ಪ್ತಯತ್ನ ಇದಾಗಿದೆ ಎಂದು ಅನಕೃ ಮೊಮ್ಮಗ ಅನಿರುದ್ಧ ಗೌತಮ ಹೇಳುತ್ತಾರೆ.ಸದ್ಯ ಸಂಧ್ಯಾರಾಗ ಕೃತಿ ಆಡಿಯೋ ಬುಕ್ ಬಿಡುಗಡೆಗೆ ಸಿದ್ಧವಾಗಿದ್ದು, ನಂತರ ಇನ್ನು ನಾಲ್ಕು ಕೃತಿಯನ್ನು ಇದೇ ರೂಪಾಂತರಕ್ಕೆ ತರಲು ಯೋಚನೆ ಇದೆ ಎಂದರು.

ಆಡಿಯೋ ಬುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಅನಕೃ ರಚಿತ ಮೊದಲನೇ ಪುಸ್ತಕ 'ಮದುವೆ ಮನೆ ಹಾಳು'ನಾಟಕವನ್ನು ಕಲಾಗಂಗೋತ್ರಿ ತಂಡದವರು ಪ್ರದರ್ಶಿಸಲಿದ್ದಾರೆ. ಆಡಿಯೋ ಬುಕ್ ನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845038246 ಸಂಪರ್ಕಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X