ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ್ಳೆ ಸಂಗೀತ ನಿರ್ದೇಶಕರ ಕೊರತೆ ಇದೆ : ರತ್ನಮಾಲಾ

By Staff
|
Google Oneindia Kannada News


ನಾಡಿನ ಸಿರಿಕಂಠದ ಕೋಗಿಲೆ ಜೊತೆ ಕಿರು ಮಾತುಕತೆ. ಐದು ಪ್ರಶ್ನೆಗಳಲ್ಲಿ ಸದ್ಯದ ಸಂಗೀತ ಲೋಕದ ಸ್ಥಿತಿಗತಿ ಪ್ರತ್ಯಕ್ಷ!



  • ಶುಭಾ ಕಡಬಾಳ
An interview with Rathnamala Prakash1. ಯುವ ಪ್ರತಿಭೆ ಗುರ್ತಿಸುವ ಟೀವಿ ಚಾನೆಲ್ ಗಳ ಕಾರ್ಯಕ್ರಮಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಸ್ಪರ್ಧೆ ಉಂಟಾಗಿದೆಯೇ?

ಕೇವಲ ಸ್ಪರ್ಧೆಗಾಗಿ ಸಂಗೀತ ಕಲಿಯುವವರ ಹಾಗೂ ಪಾಠ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕಾಗಿ ಕಲಿಯುವುದು ಸಂಗೀತವೇ ಅಲ್ಲ.

2. ಇದರಿಂದ ಸಂಗೀತದ ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದೆಯೇ?

ಹೌದು. ಯಾವ ವಿದ್ಯೆಯೂ ಸತತ ಅಭ್ಯಾಸ ಇಲ್ಲದೆ ಪರಿಪಕ್ವವಾಗುವುದಿಲ್ಲ. ಅರೆಬರೆ ಕಲಿತು ಕೇವಲ ಯಶಸ್ಸು, ಹಣಕ್ಕಾಗಿ ಹಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಪ್ರತಿಭೆಗಳು ಬರುತ್ತಿವೆ. ಆದರೆ ಹಳೆ ತಲೆಮಾರಿನ ಗಾಯಕರಲ್ಲಿರುವ ಪ್ರಬುದ್ಧತೆ ಈಗಿನ ಗಾಯಕ, ಗಾಯಕಿಯರಲ್ಲಿ ಕಂಡು ಬರುತ್ತಿಲ್ಲ.

3. ಕನ್ನಡದಲ್ಲಿ ಗಾಯಕಿಯರು ಬರುತ್ತಿದ್ದಾರೆ ಆದರೆ ಗಾಯಕರು ಏಕಿಲ್ಲ?

ಇಂಥದ್ದೊಂದು ಪ್ರಶ್ನೆ ಯಾವಾಗಲೂ ಕಾಡುತ್ತದೆ. ಹುಡುಗಿಯಲ್ಲಿದ್ದಷ್ಟು ಪ್ರತಿಭೆ ಹುಡುಗರಲ್ಲಿ ಎದ್ದು ಕಾಣುತ್ತಿಲ್ಲ. ಸಂಗೀತದಲ್ಲಿ ಬರುವ ಕೆಲವು ಸಂಗತಿಗಳನ್ನು ಹಾಡಲು ಹುಡುಗರು ಯಶಸ್ವಿ ಆಗುತ್ತಿಲ್ಲ. ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲವೋ ಏನೋ?

4. ಯುವ ಸಂಗೀತಗಾರರಿಗೆ ನೀಡುವ ಪ್ರಾಧಾನ್ಯತೆಯನ್ನು ಹಳಬರಿಗೆ ಇತ್ತೀಚಿಗೆ ಕೊಡುತ್ತಿಲ್ಲ ಎಂಬ ನಿಮ್ಮ ಅಭಿಪ್ರಾಯ?

ಭಾವಗೀತೆಗಳಿಗಿಂತ ಸಿನಿಮಾ ಸಂಗೀತದಲ್ಲಿ ಹಲವು ಯುವ ಕಲಾವಿದರು ಗುರುತಿಸಿಕೊಂಡಿದ್ದಾರೆ. ಕೆಲವು ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಈ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಹೊಸ ಪ್ರತಿಭೆಗಳನ್ನು ಓಲೈಸುವಲ್ಲಿ ಹಳೆ ಪ್ರತಿಭೆಗಳನ್ನು ಮರೆಯುತ್ತಿದ್ದಾರೆ. ಇದಕ್ಕೆ ಟೀವಿ ಚಾನೆಲ್ ಗಳೇ ಕಾರಣ. ಯುವ, ಹಳೆಯ ಎಂಬ ತಾರತಮ್ಯ ಬೇಡ.

5. ಯುವ ಗಾಯಕರಿಗೆ ವೇದಿಕೆ ಸಿಕ್ಕಷ್ಟು ಸಂಗೀತ ನಿರ್ದೇಶಕರಿಗೆ ಸಿಗುತ್ತಿಲ್ಲ ಏಕೆ?

ಹಳೆ ಹಾಡುಗಳೇ ಮರುಕಳಿಸುತ್ತಿವೆ. ಹೊಸ ಹಾಡುಗಳಿಗೆ ಯಶಸ್ವಿಯಾಗಿ ಸಂಗೀತ ನಿರ್ದೇಶನ ಮಾಡುವವರು ಕಂಡು ಬರುತ್ತಿಲ್ಲ.

ಇದನ್ನೂ ಓದಿ :

ಜೋಗಿ ಪ್ರೇಮ್ ಗೆ ಐದೇ ಐದು ಪ್ರಶ್ನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X