ನಾದಯೋಗ : 55 ಸಿ.ಡಿ.ಗಳಲ್ಲಿ ಸಂಗೀತ, ಸಮಾಧಾನ!


ದಿ ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ರಿಂದ ಗಾಂಧಿ ಜಯಂತಿ ದಿನ ಸಿ.ಡಿ. ಬಿಡುಗಡೆ

ಬೆಂಗಳೂರು : ಮನಸ್ಸಿಗೆ ನೆಮ್ಮದಿ ಹಾಗೂ ಮಿದುಳಿಗೆ ಶಾಂತಿ ? ಕಷ್ಟ ಕಷ್ಟ! -ಈ ಕಷ್ಟಗಳ ನಡುವೆಯೇ ಪ್ರಶಾಂತ ಭಾವಗಳನ್ನು ಸ್ಫುರಿಸುವ ಸಂಗೀತವನ್ನು ಆಸ್ವಾದಿಸುವುದಕ್ಕೆ ನಿಮಗೆ ಆಸಕ್ತಿ ಇದೆಯೇ?

ಗಂಡನ ಅಸಡ್ಡೆ, ಹೆಂಡತಿಯ ಪಿರಿಪಿರಿ, ಮಕ್ಕಳ ಕಿರಿಕಿರಿಗಳ ಜತೆಗೆ ಬದುಕಿನ ಅನೇಕ ಜಂಜಡಗಳಿಂದ ಮತ್ತು ಈ ದಿವಸಗಳ ಸಿನಿಮಾ ಸಂಗೀತದಿಂದ, ಟಿವಿ ಷೋಗಳ ನಿತ್ಯ ಕಿರುಕುಳದಿಂದ ಹಾಗೂ ಎಫ್‌.ಎಂ. ಜಾಕಿಗಳ ಕಂಗ್ಲಿಷ್‌ ಕೊರೆತದಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಇರಾದೆ ಇದ್ದರೆ ಇಲ್ಲೊಂದು ಮಾರ್ಗವಿದೆ.

ತಿಳಿಗೊಳದಿಂದ ಹೊರಸೂಸುವ ಸಂಗೀತ ಆಲಿಸುತ್ತಾ ಆಲಿಸುತ್ತಾ ಭಾರತೀಯ ಸಂಸ್ಕೃತಿಯ ಬೇರುಗಳನ್ನೂ ಕಾಣುವ ಕುತೂಹಲಗಳೂ ಹಿಂಗುತ್ತದೆ ಇಲ್ಲಿ. ಇಂತಿಪ್ಪ ಕಿವಿಗಳಿಗಾಗಿ ಶಾಂತ ಸರೋವರದಿಂದ ತುಂಬಿತಂದ ಅಂಥದೊಂದು ಸಂಗೀತ ನಿಮಗಾಗಿ ಕಾಯುತ್ತಿದೆ, ಆಡಿಯೋ ತಟ್ಟೆ ಒಳಗೆ ! ಒಂದಲ್ಲ 55 ಸಿ.ಡಿ.ಯಾಳಗೆ!

ಈ ಸಿ.ಡಿ.ಯ ಹೆಸರು ‘ನಾದಯೋಗ’.

Sri Ravishankarನಾದಯೋಗ ಸಿ.ಡಿ.ಗೆ ಶಾಸ್ತ್ರೀಯ ಸಂಗೀತದ ಪರಿಕಲ್ಪನೆ ಹಾಗೂ ರಾಗಸಂಯೋಜನೆ ಮಾಡಿರುವವರು ಗಾನಕಲಾಶ್ರೀ ಆನೂರು ಅನಂತಕೃಷ್ಣಶರ್ಮ. ಸಿಡಿಯ ಉತ್ಪಾದನೆ ಮತ್ತು ಪ್ರಸರಣ ವ್ಯವಸ್ಥೆ ಮಾಡಿರುವವರು ಬೆಂಗಳೂರಿನ ‘ರೂಟ್ಸ್‌ ಮ್ಯೂಸಿಕ್‌.’ ಸಂಸ್ಥೆ.

ದಿ ಆರ್ಟ್‌ ಆಫ್‌ ಲಿವಿಂಗ್‌ ಇಂಟರ್‌ನ್ಯಾಷನಲ್‌ ಆಶ್ರಮದಲ್ಲಿ (ವೇದ ವಿಜ್ಞಾನ ಮಹಾವಿದ್ಯಾಪೀಠ 21 ಕಿಮಿ. ಕನಕಪುರ ರಸ್ತೆ, ಬೆಂಗಳೂರು-82) ಇದೇ ಅಕ್ಟೋಬರ್‌ 2ರ ಸೋಮವಾರ ಸಿಡಿ ಬಿಡುಗಡೆ ಕಾರ್ಯಕ್ರಮ ಇದೆ. ರಾತ್ರಿ 8 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಿಡಿ ಉದ್ಘಾಟನೆ ನೆರವೇರಿಸುವವರು ರವಿಶಂಕರ್‌.

ಸಮಾರಂಭದಲ್ಲಿ ಉಪಸ್ಥಿತರಿರುವ ಗಣ್ಯರ ಸಾಲಿನಲ್ಲಿರುತ್ತಾರೆ; ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಭಾರತ ಸರ್ವೇಕ್ಷಣ ಇಲಾಖೆಯ ನಿವೃತ್ತ ಮುಖ್ಯಸ್ಥ ಡಾ. ಎಂ.ಎಸ್‌. ನಾಗರಾಜರಾವ್‌, ಕರ್ನಾಟಕ ರಾಜ್ಯದ ಪ್ರಿನ್ಸಿಪಲ್‌ ಸೆಕ್ರೆಟರಿ ಎ. ರಾಮಸ್ವಾಮಿ ಹಾಗೂ ಸಂಗೀತ ಕಲಾನಿಧಿ ಡಾ. ಆರ್‌. ಕೆ. ಶ್ರೀಕಂಠನ್‌.

ಸಿಡಿಗಳು ಎಲ್ಲಾ ಸಂಗೀತ ಮಳಿಗೆಗಳಲ್ಲಿ ದೊರೆಯುತ್ತವೆ. ಹೆಚ್ಚಿನ ಮಾಹಿತಿ ಮತ್ತು ಸಿ.ಡಿ.ಗಳಿಗಾಗಿ 080-41512323, 22997110, 22997258, 22997103, 41156043, 22103039 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಆರ್‌ಎಸ್‌ವಿಪಿ : ಪ್ರತಾಪ್‌ ಕುಮಾರ್‌- 98440 21877

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+