Bengaluru Job: ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗುಡ್‌ನ್ಯೂಸ್
Bengaluru Job: ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗುಡ್‌ನ್ಯೂಸ್ ಕೊಡಲಾಗಿದೆ. ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ ಭಾರತದ ಜನಗಣತಿ-2027 ರ ಕಾರ್ಯ ನಿರ್ವಹಿಸಲು ಸುವರ್ಣಾವಕಾಶ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಹೇಳಿದ್ದಾರೆ.
ದಿನಾಂಕ: 22-04-2026 ರಂದು (ಬುಧವಾರ) ಸಮಯ: ಬೆಳಿಗ್ಗೆ 9.00 ಗಂಟೆಗೆ ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್), ಬೆಂಗಳೂರು ಇಲ್ಲಿ ನೇರ ಸಂದರ್ಶನ (ವಾಕ್ ಇನ್) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಂದಾಜು 1,000 ಜನಗಣತಿದಾರರ ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. ಜನಗಣತಿ ಕಾರ್ಯ ನಿರ್ವಹಿಸಿ ರಾಷ್ಟ್ರ ಅಭಿವೃದ್ಧಿ ಕಾರ್ಯಕ್ಕೆ ಜೋಡಿಸಲು ಮನವಿ ಮಾಡಲಾಗಿದೆ.

ಅರ್ಹತೆ ಏನು
ಕನಿಷ್ಠ Android-12, 4GB RAM Specification ಮೊಬೈಲ್ ಹೊಂದಿರಬೇಕು
ಜನಗಣತಿ ಕಾರ್ಯಕ್ಕೆ ಆಯ್ಕೆಯಾದವರಿಗೆ ಅಗತ್ಯ ತರಬೇತಿ ನೀಡಲಾಗುವುದು
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರತದ ಜನಗಣತಿ-2027 ರ ಅಂಗವಾಗಿ ದಿನಾಂಕ: 16-04-2026 ರಿಂದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯ ಪ್ರಾರಂಭಿಸಲಾಗಿದೆ.
ಭಾರತದ ಜನಗಣತಿ-2027 ರ ಮೊದಲನೇ ಹಂತದ ಕಾರ್ಯವಾದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಹಾಗೂ ಫೆಬ್ರವರಿ 2027 ರಲ್ಲಿನ 2ನೇ ಹಂತದ ಜನಗಣತಿ ಕಾರ್ಯದ ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಪೂರ್ಣಗೊಳಿಸುವ ಹಾಗೂ ಉದ್ದೇಶದಿಂದ ಕನಿಷ್ಠ ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರನ್ನು ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುತ್ತಿದೆ. ಈ ಸುವರ್ಣಾಕಾಶವನ್ನು ಆಸಕ್ತ, ವಿದ್ಯಾರ್ಥಿಗಳು, ಪುರುಷ ಹಾಗೂ ಮಹಿಳೆಯವರು ಉಪಯೋಗಿಸಿಕೊಂಡು ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಲು ಆಯುಕ್ತರು ಮನವಿ ಮಾಡಿದ್ದಾರೆ.
ಗೌರವ ಧನ ಹಾಗೂ ವಿದ್ಯಾರ್ಹತೆ, ಇನ್ನಿತರೆ ವಿವರ
* ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು
* ಕನಿಷ್ಠ Android-12, 4GB RAM Specification ಮೊಬೈಲ್ ಹೊಂದಿರಬೇಕು
* ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ (1) ಸಿ.ವಿ.ರಾಮನ್ ನಗರ (2) ಶಾಂತಿನಗರ (3) ಶಿವಾಜಿನಗರ (4) ಚಾಮರಾಜಪೇಟೆ (5) ಚಿಕ್ಕಪೇಟೆ ಹಾಗಗೂ (6) ಗಾಂಧಿನಗರ ಕ್ಷೇತ್ರಗಳ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
* ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ದಿನಾಂಕ: 15-05-2026 ವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ರಜಾ ದಿನವೂ ಸೇರಿದಂತೆ ನಿರಂತರವಾಗಿ ಕಾರ್ಯನಿರ್ವಹಿಸಲು ಬದ್ಧರಾಗಿರಬೇಕು.
* ಭಾರತದ ಜನಗಣತಿ-2027 ರ ಜನಗಣತಿ ಮಾರ್ಗಸೂಚಿಯನ್ವಯ ದಿನಾಂಕ: 15-05-2026 ವರೆಗಿನ ಮೊದಲ ಹಂತದ ಗಣತಿ ಕಾರ್ಯಕ್ಕೆ ರೂ.9,000/- (ರೂ. ಒಂಭತ್ತು ಸಾವಿರ ಮಾತ್ರ) ಗೌರವಧನ ನೀಡಲಾಗುವುದು. (ಕನಿಷ್ಠ 150-200 ಮನೆಗಳಿಗೆ)
* ಭಾರತದ ಜನಗಣತಿ-2027 ರ 2ನೇ ಹಂತದ ಕಾರ್ಯವು ಫೆಬ್ರವರಿ-2027 ರ ಮಾಹೆಯಲ್ಲಿ ನಡೆಯಲಿದ್ದು, ಸದರಿ ಕಾರ್ಯಕ್ಕೆ ರೂ.16,000/- (ರೂ. ಹದಿನಾರು ಸಾವಿರ ಮಾತ್ರ) ಗೌರವ ಧನ ನೀಡಲಾಗುವುದು.(150-200 ಮನೆಗಳಿಗೆ ಅಥವಾ 750 ರಿಂದ 800 ಜನಸಂಖ್ಯೆಗೆ)
* ಈ ಆಯ್ಕೆಯು ಭಾರತದ ಜನಗಣತಿ-2027 ರ ಗಣತಿ ಕಾರ್ಯ ನಿರ್ವಹಣೆಗೆ ಮಾತ್ರ ಸೀಮಿತವಾಗಿರುತ್ತದೆ
* ನೇಮಕಾತಿ ಮಾಡಿಕೊಳ್ಳುವುದು ಕೇಂದ್ರ ನಗರ ಪಾಲಿಕೆ ಮಾನ್ಯ ಆಯುಕ್ತರ ವಿವೇಚನೆಗೆ ಒಳಪಟ್ಟಿರುತ್ತದೆ.
ಆಯ್ಕೆ ಮಾಡಿಕೊಳ್ಳುವ ಗಣತಿದಾರರ ಸಂಖ್ಯೆ
ಭಾರತದ ಜನಗಣತಿ-2027 ರ ಮೊದಲನೇ ಹಂತದ ಕಾರ್ಯವಾದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಹಾಗೂ ಫೆಬ್ರವರಿ 2027 ರಲ್ಲಿನ 2ನೇ ಹಂತದ ಜನಗಣತಿ ಕಾರ್ಯದ ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಅಂದಾಜು 1,000 ಜನಗಣತಿದಾರರ ಆಯ್ಕೆ ಮಾಡಿಕೊಳ್ಳಲಾಗುವುದು.
ನೇರ ಸಂದರ್ಶನ (ವಾಕ್ ಇನ್) ದಿನಾಂಕ - ಸ್ಥಳ ವಿವರ
ದಿನಾಂಕ: 22-04-2026 ರಂದು (ಬುಧವಾರ)
ಸಮಯ: ಬೆಳಿಗ್ಗೆ 9 ಗಂಟೆಗೆ
ಸ್ಥಳ: ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್), ಬೆಂಗಳೂರು












Click it and Unblock the Notifications